‘ರಾಜಕುಮಾರ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ತೆಲುಗಿನ ಪ್ರಿಯಾ ಆನಂದ್‌ ಮತ್ತೆ ಪುನೀತ್‌ಗೆ ನಾಯಕಿ ಆಗುತ್ತಿದ್ದಾರೆ. ಬಹದ್ದೂರ್‌ ಚೇತನ್‌ ನಿರ್ದೇಶನದ ‘ಜೇಮ್ಸ್‌’ನಲ್ಲಿ ಪ್ರಿಯಾ ಆನಂದ್‌ ಹೆಜ್ಜೆ ಹಾಕುತ್ತಿದ್ದಾರೆ.

ಈಗಾಗಲೇ ‘ಜೇಮ್ಸ್‌’ ಚಿತ್ರಕ್ಕೆ ಹೊಸಪೇಟೆಯಲ್ಲಿ ಶೂಟಿಂಗ್‌ ಆರಂಭವಾಗಿದೆ. ಹೀಗಾಗಿ ಒಬ್ಬೊಬ್ಬರಾಗಿ ಕಲಾವಿದರು ಸೆಟ್‌ಗೆ ಆಗಮಿಸುತ್ತಿದ್ದಾರೆ. ತೆಲುಗಿನ ಶ್ರೀಕಾಂತ್‌ ಕೂಡ ‘ಜೇಮ್ಸ್‌’ ಚಿತ್ರಕ್ಕೆ ಜತೆಯಾಗಿದ್ದಾರೆ. ‘ದಿ ವಿಲನ್‌’ ನಂತರ ಮತ್ತೊಮ್ಮೆ ಬಹು ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನು ಪ್ರಭಾಕರ್‌ ಕೂಡ ಮಹತ್ವದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ಬಹುಭಾಷಾ ನಟ ಆದಿತ್ಯ ಮೆನನ್‌ ಮತ್ತೊಮ್ಮೆ ಈ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಮೊದಲ ಹಂತದಲ್ಲಿ ಮಾತಿನ ಭಾಗ ಹಾಗೂ ಫೈಟ್‌ ದೃಶ್ಯಗಳ ಚಿತ್ರೀಕರಣಕ್ಕೆ ನಿರ್ದೇಶಕ ಚೇತನ್‌ ಪ್ಲಾನ್‌ ಮಾಡಿಕೊಂಡಿದ್ದಾರೆ.

'ರಾಜಕುಮಾರಿ' ಜೊತೆ ಶಿವಣ್ಣ ಫುಲ್‌ ಮಿಂಚಿಂಗ್; ಇದು 'ಆರ್‌ಡಿಎಕ್ಸ್‌' ಕಥೆ!

‘ಎಂಟು ದಿನಗಳ ಕಾಲ ಶೂಟಿಂಗ್‌ ಮಾಡುತ್ತಿದ್ದೇವೆ. ಸಾಹಸ ನಿರ್ದೇಶಕರಾದ ರಾಮ್‌ ಲಕ್ಷ್ಮಣ್‌ ಈ ಹಂತದ ಶೂಟಿಂಗ್‌ನಲ್ಲಿ ಬರಲಿದ್ದಾರೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯ ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಚೇತನ್‌ ಕುಮಾರ್‌. ಪ್ರತಿ ದಿನ 50 ಮಂದಿ ಕಲಾವಿದರು ಚಿತ್ರದ ಸೆಟ್‌ನಲ್ಲಿ ಇರಲಿದ್ದು, ಸರ್ಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸಿಕೊಂಡೇ ಶೂಟಿಂಗ್‌ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ರಾಜಕುಮಾರ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ ಜೋಡಿ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಪುನೀತ್ ಮತ್ತು ಪ್ರಿಯಾ ಆನಂದ್ ಜೋಡಿಯ ಕೆಮೆಸ್ಟ್ರಿ ತೆರೆಯ ಮೇಲೆ ಮ್ಯಾಜಿಕ್ ಮಾಡಿ ಸಿನಿಪ್ರಿಯರನ್ನು ರಂಜಿಸುವಲ್ಲಿ ಸಕ್ಸಸ್ ಆಗಿತ್ತು.