'ಕಾಂಗ್ರೆಸ್-ಎಸ್‌ಡಿಪಿಐ ವಾಟ್ಸಪ್ ಚಾಟ್‌ನಿಂದ ಸಂಚು ಬಯಲು'
ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆ.ಜೆ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಯಿಸಿದ್ದಾರೆ. ಅದು ಈ ಕೆಳಗಿನಂತಿದೆ.
ಮೈಸೂರು, (ಅ.15): ಡಿ.ಜೆ.ಹಳ್ಳಿ ಗಲಭೆಗೆ ಕಾಂಗ್ರೆಸ್ ರೂಪಿಸಿದ ಸಂಚನ್ನು ಈ ಪಕ್ಷ ಹಾಗೂ ಎಸ್‌ಡಿಪಿಐ ಮುಖಂಡರ ನಡುವಿನ ವಾಟ್ಸಪ್ ಚಾಟ್ ಬಯಲುಗೊಳಿಸಿದ್ದು, ಪೂರಕ ಸಾಕ್ಷ್ಯ ಒದಗಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಇಂದು (ಗುರುವಾರ) ಮೈಸೂರಿನ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ಎಸ್‌ಡಿಪಿಐ ಮುಖಂಡರ ನಡುವಿನ ವಾಟ್ಸಪ್ ಚಾಟ್‌ನಿಂದ ಬಯಲಾಗಿದ್ದು, ಅದನ್ನು ಆಧರಿಸಿ ಪೊಲೀಸರು ವರದಿ ನೀಡಿದ್ದಾರೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟರು.
ಬೈ ಎಲೆಕ್ಷನ್ ಹೊತ್ತಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ನಾಯಕನ ಉಚ್ಛಾಟನೆಗೆ ಆಗ್ರಹ..!
ಕಾಂಗ್ರೆಸ್‌ನ ಒಳ ರಾಜಕೀಯ ಹಾಗೂ ಎಸ್‌ಡಿಪಿಐನ ಮತಾಂಧತೆ ಗಲಭೆಗೆ ಕಾರಣ. ನಾವು ಏಕೆ ಕಾಂಗ್ರೆಸ್‌ನವರನ್ನು ಪ್ರಕರಣದಲ್ಲಿ ಸಿಲುಕಿಸಬೇಕು? ಎಂದರು.
ರಾಜಕೀಯ ಕಾರಣಗಳಿಗಾಗಿ ಸಮಾಜಘಾತುಕ ಶಕ್ತಿಗಳನ್ನು ಬೆಳೆಸುವ, ಅವರ ಹೆಸರಿನಲ್ಲಿ ವೋಟ್‌ಬ್ಯಾಂಕ್ ಸೃಷ್ಟಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಒಂದು ವೇಳೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಯನ್ನು ಸುಟ್ಟು ಹಾಕಿದ್ದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತಿತ್ತು. ರಾಹುಲ್ ಗಾಂಧಿ ಬಂದು ಬಟ್ಟೆ ಹರಿದುಕೊಳ್ಳುತ್ತಿದ್ದರು. ತಮ್ಮ ಪಕ್ಷದ ದಲಿತ ಶಾಸಕನ ಮನೆಯನ್ನು ಸುಟ್ಟು ಹಾಕಿದರೂ ಚಕಾರ ಎತ್ತಲಿಲ್ಲ ಎಂದು ವ್ಯಂಗ್ಯವಾಡಿದರು.
ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ ವಿಚಾರ ಬಂದಾಗ ಕಾಂಗ್ರೆಸ್‌ನವರು ಪರಿಶಿಷ್ಟ ಜಾತಿಯವರನ್ನು ಕೈಬಿಟ್ಟು, ಅಲ್ಪಸಂಖ್ಯಾತರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಗಲಭೆಯಿಂದ ಸ್ಪಷ್ಟವಾಗಿದೆ. ಹಾಗೆಯೇ, ಪರಿಶಿಷ್ಟ ಜಾತಿಯವರನ್ನು ಬೇರೆಯವರ ಮೇಲೆ ಎತ್ತಿಕಟ್ಟಲು ಬಳಸಿಕೊಳ್ಳುತ್ತಾರೆ ಎಂದು ಆರೋಪಿಸಿದರು.