ಭಾರತದಲ್ಲಿ ಹೊಚ್ಚ ಹೊಸ ಲ್ಯಾಂಡ್‌ರೋವರ್ ಡಿಫೆಂಡರ್ ಕಾರು ಬಿಡುಗಡೆ!
ಹೊಚ್ಚ ಹೊಸ, ಬಹುನಿರೀಕ್ಷಿತ ಲ್ಯಾಂಡ್‌ರೋವರ್ ಢಿಫೆಂಡರ್ ಕಾರು ಬಿಡುಗಡೆಯಾಗಿದೆ. ಡಿಫೆಂಡರ್ 110 ಹಾಗೂ ಡಿಫೆಂಡರ್ 90 ಎಂಬ ಎರಡು ವೇರಿಯೆಂಟ್ ಕಾರುಗಳು ಬಿಡುಗಡೆಯಾಗಿದೆ. ನೂತನ SUV ಕಾರಿನ ವಿಶೇಷತೆ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿವೆ.
ಮುಂಬಯಿ(ಅ.15): ಜಾಗ್ವರ್ ಲ್ಯಾಂಡ್ ರೋವರ್ ಇಂದು ಭಾರತದಲ್ಲಿ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಆರಂಭವನ್ನು ಘೋಷಿಸಿದೆ. 2.0 ಲೀ ಟರ್ಬೊಚಾರ್ಜ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಇಂಜಿನ್‍ನಲ್ಲಿ ಇದು ಲಭ್ಯವಿದೆ; ಇದು 221W (300PS) ಮತ್ತು 400 nm ಟಾರ್ಕ್ ಉತ್ಪಾದಿಸುತ್ತದೆ. ಹೊಸ ಡಿಫೆಂಡರ್ ಎರಡು ಭಿನ್ನವಾದ ಬಾಡಿ ಸ್ಟೈಲ್‍ಗಳಲ್ಲಿ ಲಭ್ಯವಿದೆ; ಬಹು ಆಕರ್ಷಕವಾದ 90 (3 ಬಾಗಿಲು) ಮತ್ತು ಬಹೋಪಯೋಗಿ 110 (5 ಬಾಗಿಲು). ಹೊಸ ಡಿಫೆಂಡರ್ ನ ದರ ರೂ. 73.98 ಲಕ್ಷದಿಂದ ಆರಂಭವಾಗಿದ್ದು, ಹೊಸ ಡಿಫೆಂಡರ್ 110 ನ ದರ ರೂ. 79.94 ಲಕ್ಷಗಳಿಂದ ಆರಂಭ( ಎಕ್ಸ್ ಶೋರೂಂ ಭಾರತ). ಡಿಫೆಂಡರ್ 110 ನ ವಿತರಣೆಯು ಆರಂಭವಾಗಿದ್ದು, ಡಿಫೆಂಡರ್ 90 ಯ ವಿತರಣೆಯು ಶೀಘ್ರದಲ್ಲಿ ಆರಂಭವಾಗಲಿದೆ.
ಕಾಡು-ಮೇಡು ಸುತ್ತಲು ಹೇಳಿ ಮಾಡಿಸಿದ ಕಾರು ಲ್ಯಾಂಡ್‌ರೋವರ್!...
ಇದುವರೆಗೂ ಲ್ಯಾಂಡ್ ರೋವರ್ ಅಡಿಯಲ್ಲಿ ಡಿಸ್ಕವರ್ ಉತ್ಪನ್ನಗಳ ವರ್ಗ ಮತ್ತು ರೇಂಜ್ ರೋವರ್ ಉತ್ಪನ್ನಗಳ ವರ್ಗ ಭಾರತದಲ್ಲಿತ್ತು. ಈ ಆರಂಭದಿಂದ ಮೂರನೇ ವರ್ಗ ಡಿಫೆಂಡರ್ ಲಭ್ಯವಿದೆ. ಅನೇಕ ರೀತಿಗಳಲ್ಲಿ ಇದು ಲ್ಯಾಂಡ್ ರೋವರ್ ನ ಬ್ರ್ಯಾಂಡ್ ಕಥೆಯನ್ನು ಪೂರ್ಣಗೊಳಿಸುತ್ತದೆ ಮತ್ತು ನಾವು ಈ ವಿಸ್ತರಣೆಯಿಂದ ಹರ್ಷಗೊಂಡಿದ್ದೇವೆ, ಮತ್ತು ನಮ್ಮ ಗ್ರಾಹಕರಲ್ಲಿ ಲ್ಯಾಂಡ್ ರೋವರ್ ನ ಆಕರ್ಷಣೆಯಿಂದ ಸಂತಸಗೊಂಡಿದ್ದೇವೆ. ಹೊಸ ಡಿಫೆಂಡರ್ ಕುತೂಹಲಿಗಳಲ್ಲಿ, ನೈಜ ಸಾಹಸಿಗರಲ್ಲಿ, ಪ್ರಯಾಣ ಪ್ರಿಯರಲ್ಲಿ, ಮತ್ತು ಜೀವನದ ಎಲ್ಲೆಗಳನ್ನು ಮೀರಲು ಹೆದರದವರ ಮನದಲ್ಲಿ ಸ್ಥಾನ ಪಡೆಯುತ್ತದೆ. ಅಂತಹ ವ್ಯಕ್ತಿಗಳು ತಮ್ಮ ಸಾಹಸ ಪ್ರಿಯತೆ ಮತ್ತು ನಿರ್ಭಯದಿಂದ ವಯಸ್ಸು, ಲಿಂಗ, ವೃತ್ತಿಯ ಮಿತಿಗಳನ್ನು ಮೀರುತ್ತಾರೆ, ಹೊಸ ಡಿಫೆಂಡರ್ ನಂತೆ ಎಂದು ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶ ರೋಹಿತ್ ಸುರಿ ಹೇಳಿದರು.
ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ನ ವಿನ್ಯಾಸವನ್ನು 21ನೇ ಶತಮಾನಕ್ಕೆ ಮರು ಕಲ್ಪಿಸಲಾಗಿದೆ. ಶಕ್ತಿಯ ರೂಪವಾದ ಡಿಫೆಂಡರ್ ತನ್ನ ದೀರ್ಘಬಾಳಿಕೆ ಮತ್ತು ಸದೃಢ ಸಾಮರ್ಥ್ಯಕ್ಕೆ ಹೆಸರಾಗಿದೆ. ಅದರ ಅಂಶಗಳಾದ ಘನವಾದ ಶೋಲ್ಡರ್ ಲೈನ್, ಕನಿಷ್ಟ ಮುಂಬದಿ ಮತ್ತು ಹಿಂಬದಿ ಓವರ್ ಹ್ಯಾಂಗ್, ಆಲ್ಪೈನ್ ಲಗು ಕಿಟಕಿಗಳು, ದುಂಡಾದ ಹೆಡ್ಲೈಟ್, ಏಕ ಕೀಲಿಯ ಹಿಂಬದಿ ಟೈಲ್ಗೇಟ್, ಮತ್ತು ಹೊರಗೆ ಜೋಡಿಸಲಾದ ಹೆಚ್ಚುವರಿ ಚಕ್ರಗಳು ಮೂಲ ಮಾದರಿಯ ಗುಣಗಳಾಗಿದೆ.
ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!.
ಹೊಸ ಲ್ಯಾಂಡ್ ರೋವರ್ ಬಹಳ ವೈಯಕ್ತೀಕರಿಸಬಲ್ಲ ವಾಹನ. ಗ್ರಾಹಕರು ಏಳು ಹೊರ ವರ್ಣದಲ್ಲಿ ಆರಿಸಿಕೊಳ್ಳಬಹುದು - ಫುಜಿ ವೈಟ್, ಐಗರ್ ಗ್ರೇ, ಸಾಂಟೊರಿನಿ ಬ್ಲಾಕ್, ಇಂಡಸ್ ಸಿಲ್ವರ್ ಜೊತೆಗೆ ಡಿಫೆಂಡರ್ ಗೆ ಪ್ರತ್ಯೇಕವಾದ ಟಾಸ್ಮನ್ ಬ್ಲೂ, ಪ್ಯಾಂಗಿಯಾ ಗ್ರೀನ್ ಮತ್ತು ಗೋಡ್ವಾನಾ ಸ್ಟೋನ್. 9 ಚಕ್ರದ ವಿನ್ಯಾಸ ಹೊಂದಿದೆ.
ತನ್ನ ಮೂಲಮಂತ್ರವಾದ ವಾಸ್ತವೀಕತೆ ಮತ್ತು ಸಕ್ರಿಯತೆಯನ್ನು ಉಳಿಸಿಕೊಂಡು, ಡಿಫೆಂಡರ್ ನ ಕ್ಯಾಬಿನ್ ಉಪಯುಕ್ತ ವಿನ್ಯಾಸ ಹೊಂದಿದ್ದು, ಇದು 5+2 ಆಸನಗಳ ಜೋಡಣೆ ಹೊಂದಿದೆ. ಜಂಪ್ ಸೀಟ್ ಎಂದು ಕರೆಯುವ ಮುಂಬದಿ ಮಧ್ಯದ ಆಸನವೂ ಇದೆ. ಸರಕಿನ ಸ್ಥಳವು ಬಹಳ ವಾಸ್ತವಿಕವಾಗಿದ್ದು, 5+2 ಆಸನಗಳಲ್ಲಿ ಎಲ್ಲಾ ಸಾಲುಗಳು ಎತ್ತಿದಾಗ 231 ಲೀ ಮತ್ತು 5 ಆಸನಗಳಲ್ಲಿ ಎರಡನೇ ಸಾಲನ್ನು ಮಡಚಿದಾಗ 2380 ಐಗಳನ್ನು ನೀಡುತ್ತದೆ. ಎರಡನೇ ಸಾಲಿನ ಆಸನಗಳನ್ನು 40:20:40ಗಳಲ್ಲಿ ಹಂಚಲಾಗಿದ್ದು, ಇದು ಬಹಳ ನಮ್ಯವಾಗಿದೆ, ಮತ್ತು ಚಿಕ್ಕ ವಸ್ತುಗಳು ಒಳಗೆ ಚೆಲ್ಲಾಡದಂತೆ ಅದನ್ನು ಹಿಡಿದಿಡುವ ಪರಿಕರಗಳು ಲಭ್ಯವಿದೆ.
ಸಾಟಿಯಿಲ್ಲದ ಸಾಮರ್ಥ್ಯ
ಮೂಲ ವಿನ್ಯಾಸದ ಲಾಂಛನೀಯ ಗುಣಗಳನ್ನು ಕಾಪಾಡಲು, ಅನೇಕ ಬಾಡಿ ವಿನ್ಯಾಸಗಳು ಅಳವಡಿಸಿ, ಭವಿಷ್ಯದ ವಿವಿಧ ಪವರ್ ಟ್ರೇನ್ 7x ವೇದಿಕೆಯಲ್ಲಿ ವಿನ್ಯಾಸಗೊಳಿಸಲಾಗಿದೆ. 7xನ ಲಘುವಾದ ಪೂರ್ಣ ಅಲುಮಿನಿಯಂ ಮೊನೊಕೋಕ್ ರಚನೆಯು ಡಿಫೆಂಡರ್ ಅನ್ನು ಸಾಂಪ್ರದಾಯಿಕ ಬಾಡಿ ಆನ್ ಫ್ರೇಂ ವಿನ್ಯಾಸಗಳಿಗೆ ಹೋಲಿಸಿದಂತೆ, ಮೂರು ಪಟ್ಟು ದೃಢ ಮಾಡುತ್ತದೆ ಮತ್ತು ಇದು ಅತ್ಯಂತ ಗಟ್ಟಿಯಾದ ಲ್ಯಾಂಡ್ ರೋವರ್. ಈ ಬಲವಾದ ಗಟ್ಟಿಯಾದ ರಚನೆಯಿಂದ 4x4ನ ಮುಂದುವರೆದ ಪೂರ್ಣಸ್ವತಂತ್ರ ಚಾಸಿಗೆ ಉತ್ತಮ ಅಡಿಪಾಯ ನೀಡುತ್ತದೆ.
ಪರಿವರ್ತಕ ಸಾಮರ್ಥ್ಯ ಮತ್ತು ಆನ್ರೋಡ್ ನಿರ್ವಹಣೆ ನೀಡುವ ಡಿಫೆಂಡರ್ ತನ್ನದೇ ವರ್ಗದಲ್ಲಿದೆ. ಇದರ ಕಾನ್ಫಿಗರಬಲ್ ಟೆರ್ರೇನ್ ರೆಸ್ಪ್ಸಾನ್ಸ್ ಮತ್ತು ಟೆರ್ರೇನ್ ರೆಸ್ಪಾನ್ಸ್ 2 ಇದರ ಸರ್ವ ರಸ್ತೆಯ ಸಾಮರ್ಥ್ಯವನ್ನು ವರ್ಧಿಸುತ್ತದೆ, ಮತ್ತು ಗ್ರಾಹಕರಿಗೆ ಇದರ ಆಫ್ ರೋಡ್ ಆದ್ಯತೆಗಳನ್ನು ವೈಯಕ್ತೀಕರಿಸಲು ಸಾಧ್ಯವಾಗಿಸುತ್ತದೆ. ಆನ್ರೋಡ್ ನಿರ್ವಹಣೆಗೆ ಅಡಾಪ್ಟೀವ್ ಡೈನಾಮಿಕ್ಸ್ ಅಳವಡಿಸುವುದರಿಂದ ಸರಾಗವಾದ ಚಾಲನೆ ಅನುಭವ ಮತ್ತು ಅತ್ಯುತ್ತಮ ದೀರ್ಘ ಅಂತರದ ಆರಾಮವನ್ನು ಎಲ್ಲಾ ರಸ್ತೆಗಳಲ್ಲೂ ಮತ್ತು ಸ್ಥಿತಿಗಳಲ್ಲೂ ನೀಡುತ್ತದೆ. ಅಡಾಪ್ಟೀವ್ ಡೈನಾಮಿನ ಜೊತೆಗೆ ಇದೆ ಎಲೆಕ್ಟ್ರಾನಿಕ್ ಏರ್ ಸಸ್ಪೆನ್ಶನ್, ಇದರಿಂದ ಇದರ ಚಾಲನಾ ಗುಣಗಳನ್ನು ಗ್ರಾಹಕರು ಸೂಕ್ಷ್ಮವಾಗಿ ಹೊಂದಿಸಬಹುದು. ಇದರ ಅಡಾಪ್ಟೀವ್ ಡ್ಯಾಂಪರ್ ಗಳು ವಾಹನದ ಚಲನೆಗಳನ್ನು ಪ್ರತಿ ಸೆಕೆಂಡ್ ಗೆ 500 ಬಾರಿ ಪರಿಶೀಲಿಸುತ್ತದೆ, ಮತ್ತು ನಿಯಂತ್ರಣ ಮತ್ತು ಆರಾಮವನ್ನು ಉತ್ತಮಗೊಳಿಸಲು ಕೂಡಲೇ ಪ್ರತಿಕ್ರೀಯಿಸುತ್ತದೆ.
ಡಿಫೆಂಡರ್ ಬಹಳ ಆಕರ್ಷಕವಾದ 38 ಡಿಗ್ರೀ ಗಳ ಗರಿಷ್ಟ ಆಂಗಲ್ ಹೊಂದಿದ್ದು, 28 ಡಿಗ್ರಿಗಳ (90ರಲ್ಲಿ 31 ಡಿಗ್ರಿ) ಗರಿಷ್ಟಾ ಬ್ರೇಕ್ ಓವರ್ ಆಂಗಲ್ ಮತ್ತು 40 ಡಿಗ್ರಿ ಗಳ ಗರಿಷ್ಟ ಡಿಪಾರ್ಚರ್ ಆಂಗಲ್ ಹೊಂದಿದೆ. ಇನ್ಫೊಟೈನ್ಮೆಂಟ್ ವ್ಯವಸ್ಥೆಯಲ್ಲಿ ವೇಡ್ ಸೆನ್ಸಿಂಗ್ ಸ್ಕ್ರೀನ್ ಇರುವುದರಿಂದ ಡಿಫೆಂಡರ್ ನಲ್ಲಿ 900 ಮಿ.ಮೀ ಗಳ ನೀರಿನಲ್ಲಿ ಚಲಿಸುವ ಆಳವನ್ನು ಹೊಂದಿದೆ. ಹೊಸ ಡಿಫೆಂಡರ್ 3720 ಕಿಲೊಗಳ ಗರಿಷ್ಟ ಎಳೆಯುವ ಸಾಮರ್ಥ್ಯ ಮತ್ತು 168 ಕಿಲೊ ತಾರಸಿಯ ಭಾರ ಸಾಮರ್ಥ್ಯವನ್ನು ಹೊಂದಿದೆ.
21ನೇ ಶತಮಾನದ ತಂತ್ರಜ್ಞಾನ
ಹೊಸ ಡಿಫೆಂಡರ್ ನಲ್ಲಿದೆ ಅನೇಕ ತಂತ್ರಜ್ಞಾಗಳು, ಇವು ವಾಹನದ ಬಾಳಿಕೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಪರಿಚಯಿಸುತ್ತಿದೆ ಲ್ಯಾಂಡ್ ರೋವರ್ ನ ಹೊಸ ಇನ್ಫೊಟೈನ್ಮೆಂಟ್ ವ್ಯವಸ್ಥೆಯನ್ನು. ಈ ಮುಂದಿನ ಪೀಳಿಗೆಯ ಟಚ್ ಸ್ಕ್ರೀನ್ ಬಹಳ ಸಹಜವಾಗಿದ್ದು, ಗ್ರಾಹಕಸ್ನೇಹಿಯಾಗಿದೆ, ಮತ್ತು ಪದೇಪದೇ ಬಳಕೆ ಮಾಡಲು ಕಡಿಮೆ ಇನ್ಪುಟ್ ಬೇಕಿದೆ, ಮತ್ತು ಇದರ ಯಾವಗಲೂ ಆನ್ ಇರುವ ವಿನ್ಯಾಸದಿಂದ ಕೂಡಲೇ ಪ್ರತಿಕ್ರಿಯಿಸುತ್ತದೆ.
ಹೊಸ ಡಿಫೆಂಡರ ಮುಂದಿನ ಪೀಳಿಗೆಯ ಎಲೆಕ್ಟ್ರಾನಿಕ್ ವೆಹಿಕಲ್ ಆರ್ಕಿಟೆಕ್ಚರ್ (2.0) ಸಾಫ್ಟ್ವೇರ್ ಆನ್ ಏರ್) ಹೊಂದಿದೆ. ಹೊಸ ಡಿಫೆಂಡರ್ ಜೀವಿತಾವಧಿಯಲ್ಲಿ, ಇದರ ಎಂಬೆಡೆಡ್ ಡಯಾಗ್ನಾಸ್ಟಿಕ್ ವ್ಯವಸ್ಥೆಯು ಸಮಸ್ಯೆಗಳ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತದೆ, ಮತ್ತು ಅದನ್ನು ತಾನಾಗಿ ತಡೆಗಟ್ಟುತ್ತದೆ ಅಥವಾ ಪರಿಹರಿಸುತ್ತದೆ, ಏಕೆಂದರೆ ಇದರ ಡಾಟಾ ಸಂಪರ್ಕವನ್ನು ಸಾಂಪ್ರದಾಯಿಕ ಟೂಲ್ಕಿಟ್‍ನ ಬದಲಿಗೆ ಇಡಲಾಗಿದೆ.
ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ನಲ್ಲಿ ಇನ್ಫೊಟೈನ್ಮೆಂಟ್ ವ್ಯವಸ್ಥೆಯಲ್ಲಿದೆ 25.4m(10) ಟಚ್ ಸ್ಕ್ರೀನ್, ಜೊತೆಗೆ ಕನೆಕ್ಟೆಡ್ ನ್ಯಾವಿಗೇಶನ್ ಪೆÇ್ರ ಮತ್ತು 31.24ಛಿm(12.3) ಹೈ ಡೆಫಿನಿಶನ್ ಇಂಟಾರಾಕ್ಟೀವ್ ಡ್ರೈವರ್ ಡಿಸ್ಪ್ಲೇ. ಇದರಲ್ಲಿ ಪೂರ್ಣ ಸ್ಕ್ರೀನ್ ನಕ್ಷೆ ಫೀಚರ್ಸ್ ಹೊಂದಿದೆ. ಈ ವಾಹನದಲ್ಲಿ ಕ್ಲಿಯರ್ ಸೈಟ್ ರೇರ್ ಮಿರರ್; ಇದು ನಿಮಗೆ ಅಡ್ಡಿಯಿಲ್ಲದ ದೃಶ್ಯ ನೀಡಲು ನೈಜ ಫೀಡ್ ನೀಡುತ್ತದೆ ಮತ್ತು 3ಡಿ ಸರೌಂಡ್ ಕ್ಯಾಮೆರಾ ವ್ಯವಸ್ಥೆಯ ಭಾಗವಾಗಿ ಕ್ಲಿಯರ್ ಸೈಟ್ ಗ್ರೌಂಡ್ ವ್ಯು ಲಭ್ಯವಿದೆ. ಇದರಿಂದ ಡಿಫೆಂಡರ್ ನ ಬಾನೆಟ್ ಮೂಲಕ ಸ್ಪಷ್ಟವಾಗಿ ನೋಡಬಹುದು, ಮತ್ತು ವಾಹನದ ಕೆಳಗೆ ಮತ್ತು ಚಕ್ರಗಳು ಸೇರಿದಂತೆ ವಿವಿಧ ಹೊರಗಿನ ದೃಶ್ಯಗಳನ್ನು ನೀಡುತ್ತದೆ. ಆರಾಮಕ್ಕಾಗಿ, ಮೆರಿಡಿಯನ್ ಸರೌಂಡ್ ಸೌಂಡ್ ಸಿಸ್ಟಮ್ (700W), ಮತ್ತು ಇದು 14 ಸ್ಪೀಕರ್ ಮತ್ತು ಎರಡು ಚಾನಲ್ ಸಬ್ ವೂಫರ್ ಹೊಂದಿದೆ, ಬಿಸಿಯಾದ ಮತ್ತು ತಣ್ಣನೆಯ ಆಸನಗಳನ್ನು ಮತ್ತು ಉತ್ಕೃಷ್ಟವಾದ ಕ್ಯಾಬಿನ್ ದೀಪ ಹೊಂದಿದೆ.
ಎಕ್ಸ್‍ಪ್ಲೋರರ್ ಪ್ಯಾಕ್: ಇದರಲ್ಲಿದೆ ಎಕ್ಸ್ಪೆಡಿಶನ್ ರೂಫ್ ರಾಕ್, ನೀರಿನಲ್ಲಿ ಇಳಿಯಲು ರೈಸ್ಡ್ ಏರ್ ಇಂಟೇಕ್, ವಸ್ತುಗಳ ದಾಸ್ತಾನಿಗೆ ಹೊರಾಂಗಣ ಸೈಡ್ ಮೌಂಟೆಡ್ ಗೇರ್ ಕ್ಯಾರಿಯರ್, ವೀಲ್ ಆರ್ಕ್ ರಕ್ಷಣೆ, ಮುಂಬದಿ ಮತ್ತು ಹಿಂಬದಿ ಕ್ಲಾಸಿಕ್ ಮಡ್ ಫ್ಲಾಪ್, ಸ್ಪೇರ್ ವೀಲ್ ಕವರ್, ಮತ್ತು ಮ್ಯಾಟ್ ಬ್ಲಾಕ್ ಬಾನೆಟ್, ಸಂಪ್ರದಾಯಗಳನ್ನು ಮುರಿದು, ಹೊಸ ಪ್ರದೇಶಗಳನ್ನು ಆವಿಷ್ಕರಿಸಲು ಇಚ್ಛಿಸುವವರಿಗೆ ಇದು ಸೂಕ್ತವಾಗಿದೆ.
ಅಡ್ವೆಂಚರ್ ಪ್ಯಾಕ್: ದಟ್ಟಕಾಡನ್ನು ಹೊಕ್ಕಲು ನಿಮಗೆ ಅನುಕೂಲವಾಗುವಂತೆ, ಈ ಪ್ಯಾಕ್‍ನಲ್ಲಿದೆ ಚಕ್ರಕ್ಕೆ ಗಾಳಿ ತುಂಬಲು ಸಂಘಟಿತ ಏರ್ ಕಂಪ್ರೆಸರ್, ದಾರಿಯಲ್ಲಿ ವಾಹನ ತೊಳೆಯಲು ಪೋರ್ಟೇಬಲ್ ರಿನ್ಸ್ ಸಿಸ್ಟಂ, ಹೊರಾಂಗಣ ಸೈಡ್ ಮೌಂಟೆಡ್ ಗೇರ್ ಕ್ಯಾರಿಯರ್, ಮತ್ತು ವಸ್ತುಗಳ ದಾಸ್ತಾನಿಗೆ ಸೀಟ್ ಬ್ಯಾಕ್ ಪ್ಯಾಕ್, ಮುಂಬದಿ ಮತ್ತು ಹಿಂಬದಿ ಮಡ್ ಫ್ಲಾಪ್, ಬ್ರೈಟ್ ರೇರ್ ಸ್ಕಫ್ ಪ್ಲೇಟ್ ಮತ್ತು ಸ್ಪೇರ್ ವೀಲ ಕವರ್.
ಕಂಟ್ರಿ ಪ್ಯಾಕ್: ಮುಂಬದಿ ಮತ್ತು ಹಿಂಬದಿ ಮಡ್ ಫ್ಲಾಪ್, ಬ್ರೈಟ್ ರೇರ್ ಸ್ಕಫ್ ಪ್ಲೇಟ್, ಪೆÇೀರ್ಟಬಲ್ ರಿನ್ಸ್ ಸಿಸ್ಟಂ, ವೀಲ್ ಆರ್ಕ್ ಪ್ರೊಟೆಕ್ಷನ್ ಮತ್ತು ಲೋಡ್ಸ್ಪೇಸ್ ಪಾರ್ಟಿಶನ್; ನೀವು ಪ್ರಕೃತಿಯನ್ನು ಆಲಂಗಿಸಿಕೊಳ್ಳಲು ನಿರ್ಧರಿಸಿದಾಗ ಇದು ನಿಮ್ಮನ್ನು ಸಜ್ಜಾಗಿಡುತ್ತದೆ ಮತ್ತು ಪ್ರತಿ ಪ್ರಯಾಣವೂ ನಿಜವಾಗಿ ಅವಿಸ್ಮರಣೀಯವಾಗುತ್ತದೆ.
ಅರ್ಬನ್ ಪ್ಯಾಕ್: ಇದು ಬ್ರೈಟ್ ಮೆಟಲ್ ಪೆಡಲ್ ಮತ್ತು ರೇರ್ ಸ್ಕಫ್ ಪ್ಲೇಟ್, ಮುಂಬದಿ ಅಂಡರ್ ಶೀಲ್ಡ್ ಮತ್ತು ಸ್ಪೇರ್ ವೀಲ್ ಕವರ್ ನಿಂದ ನಿಮ್ಮ ವಾಹನ ಬಲಿಷ್ಠತೆ ಜೊತೆಗೆ ಅಂದವೂ ಹಚ್ಚಿದೆ.
ಭಾರತದಲ್ಲಿ ಲ್ಯಾಂಡ್ ರೋವರ್ ಉತ್ಪನ್ನಗಳ ಪಟ್ಟಿ
ಭಾರತದಲ್ಲಿ ಲಭ್ಯವಿರುವ ಲ್ಯಾಂಡ್ ರೋವರ್ ಶ್ರೇಣಿಯಂದರೆ ಡಿಸ್ಕವರಿ ಸ್ಪೋರ್ಟ್ (ಆರಂಭ ರೂ. 59.91 ಲಕ್ಷಗಳು), ರೇಂಜ್ ರೋವರ್ ಇವೋಕ್ (ಆರಂಭ ರೂ. 52.67 ಲಕ್ಷಗಳು), ರೇಂಜ್ ರೋವರ್ ವೇಲಾರ್ (ಆರಂಭ ರೂ. 73.30 ಲಕ್ಷಗಳು), ಡಿಸ್ಕವರಿ (ಆರಂಭ ರೂ. 75.59 ಲಕ್ಷಗಳು), ರೇಂಜ್ ರೋವರ್ ಸ್ಪೋರ್ಟ್ (ಆರಂಭ ರೂ. 88.24 ಲಕ್ಷಗಳು), ಮತ್ತು ರೇಂಜ್ ರೋವರ್ (ಆರಂಭ ರೂ. 196.82 ಲಕ್ಷಗಳು). ನಮೂದಿಸಲಾದ ಎಲ್ಲಾ ದರಗಳೂ ಎಕ್ಸ್- ಶೋರೂಂ, ಭಾರತದಲ್ಲಿ.