MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಐಪಿಎಲ್ ಹರಾಜಿನ ಬಳಿಕ ಯಾವ ತಂಡ ಬಲಿಷ್ಠ? ಇಲ್ಲಿದೆ 10 ತಂಡಗಳ ಕಂಪ್ಲೀಟ್ ಮಾಹಿತಿ

ಐಪಿಎಲ್ ಹರಾಜಿನ ಬಳಿಕ ಯಾವ ತಂಡ ಬಲಿಷ್ಠ? ಇಲ್ಲಿದೆ 10 ತಂಡಗಳ ಕಂಪ್ಲೀಟ್ ಮಾಹಿತಿ

2025ರ ಐಪಿಎಲ್ ಆಟಗಾರರ ಮೆಗಾ ಹರಾಜಿಗೆ ತೆರೆ ಬಿದ್ದಿದೆ. 577 ಆಟಗಾರರ ಪೈಕಿ 62 ವಿದೇಶಿ ಆಟಗಾರರು ಸೇರಿದಂತೆ 182 ಆಟಗಾರರು ಹರಾಜಾಗಿದ್ದಾರೆ. ಐಪಿಎಲ್ ಮೆಗಾ ಹರಾಜಿನ ಬಳಿಕ ಯಾವ ಆಟಗಾರರು ಯಾವ ತಂಡ ಸೇರಿಕೊಂಡಿದ್ದಾರೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ 

2 Min read
Author : Naveen Kodase
Published : Nov 26 2024, 06:38 PM IST
Share this Photo Gallery
  • FB
  • TW
  • Linkdin
  • Whatsapp
110
1. ಚೆನ್ನೈ ಸೂಪರ್ ಕಿಂಗ್ಸ್:

1. ಚೆನ್ನೈ ಸೂಪರ್ ಕಿಂಗ್ಸ್:

5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 7 ವಿದೇಶಿ ಆಟಗಾರರು ಸೇರಿದಂತೆ 20 ಆಟಗಾರರನ್ನು ಖರೀದಿಸಿದೆ. ಇದಕ್ಕೂ ಮೊದಲು 5 ಆಟಗಾರರನ್ನು ಚೆನ್ನೈ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿತ್ತು. 

210
2. ಡೆಲ್ಲಿ ಕ್ಯಾಪಿಟಲ್ಸ್:

2. ಡೆಲ್ಲಿ ಕ್ಯಾಪಿಟಲ್ಸ್:

ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೆ ಎಲ್ ರಾಹುಲ್, ಫಾಫ್ ಡು ಪ್ಲೆಸಿಸ್, ಮಿಚೆಲ್ ಸ್ಟಾರ್ಕ್ ಅವರಂತಹ ಆಟಗಾರರನ್ನು ಖರೀದಿಸಿದೆ. ಡೆಲ್ಲಿ ತಂಡದಲ್ಲಿ 7 ವಿದೇಶಿ ಆಟಗಾರರು ಸೇರಿದಂತೆ 23 ಆಟಗಾರರು ಇದ್ದಾರೆ.

310
3. ಗುಜರಾತ್ ಟೈಟಾನ್ಸ್:

3. ಗುಜರಾತ್ ಟೈಟಾನ್ಸ್:

ಶುಭ್‌ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವು 7 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 20 ಆಟಗಾರರನ್ನು ಹರಾಜಿನಲ್ಲಿ ಖರೀದಿಸಿದೆ. ಹರಾಜಿಗೂ ಮುನ್ನ 5 ಆಟಗಾರರನ್ನು ಗುಜರಾತ್ ರೀಟೈನ್ ಮಾಡಿಕೊಂಡಿತ್ತು. ಜೋಸ್ ಬಟ್ಲರ್, ಕಗಿಸೋ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಗುಜರಾತ್ ತಂಡ ಸೇರಿದ ಪ್ರಮುಖ ಆಟಗಾರರೆನಿಸಿಕೊಂಡಿದ್ದಾರೆ. 

410
4. ಕೋಲ್ಕತಾ ನೈಟ್ ರೈಡರ್ಸ್:

4. ಕೋಲ್ಕತಾ ನೈಟ್ ರೈಡರ್ಸ್:

ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ರೀಟೈನ್ ಆಟಗಾರರು ಸೇರಿದಂತೆ 8 ವಿದೇಶಿ ಆಟಗಾರರ ಜತೆಗೆ ಒಟ್ಟು 21 ಆಟಗಾರರು ತಂಡದಲ್ಲಿದ್ದಾರೆ. ವೆಂಕಟೇಶ್ ಅಯ್ಯರ್, ಏನ್ರಿಚ್ ನೋಕಿಯೆ, ಕ್ವಿಂಟನ್ ಡಿ ಕಾಕ್ ಅವರಂತ ಆಟಗಾರರನ್ನು ಕೆಕೆಆರ್ ಫ್ರಾಂಚೈಸಿ ಖರೀದಿಸಿದೆ.

510
5. ಲಖನೌ ಸೂಪರ್ ಜೈಂಟ್ಸ್‌:

5. ಲಖನೌ ಸೂಪರ್ ಜೈಂಟ್ಸ್‌:

ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಲಖನೌ ಫ್ರಾಂಚೈಸಿಯು 6 ವಿದೇಶಿ ಆಟಗಾರರೊಂದಿಗೆ ಒಟ್ಟು 24 ಆಟಗಾರರನ್ನು ಹೊಂದಿದೆ. ರಿಷಭ್ ಪಂತ್, ಆವೇಶ್ ಖಾನ್, ಡೇವಿಡ್ ಮಿಲ್ಲರ್‌, ಅಬ್ದುಲ್ ಸಮದ್ ಲಖನೌ ಫ್ರಾಂಚೈಸಿ ಖರೀದಿಸಿದ ಪ್ರಮುಖ ಆಟಗಾರರೆನಿಸಿದ್ದಾರೆ.

610
6. ಮುಂಬೈ ಇಂಡಿಯನ್ಸ್:

6. ಮುಂಬೈ ಇಂಡಿಯನ್ಸ್:

5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 8 ವಿದೇಶಿ ಆಟಗಾರರೊಂದಿಗೆ ಒಟ್ಟು 23 ಆಟಗಾರರ ಬಲ ಹೊಂದಿದೆ. ಟ್ರೆಂಟ್ ಬೌಲ್ಟ್‌, ದೀಪಕ್ ಚಹರ್, ವಿಲ್ ಜ್ಯಾಕ್ಸ್‌, ನಮನ್ ಧಿರ್ ಅವರಂತಹ ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.

710
7. ಪಂಜಾಬ್ ಕಿಂಗ್ಸ್‌

7. ಪಂಜಾಬ್ ಕಿಂಗ್ಸ್‌

ಹರಾಜಿಗೂ ಮುನ್ನ ಕೇವಲ 2 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದ ಪಂಜಾಬ್, ಇದೀಗ 8 ವಿದೇಶಿ ಆಟಗಾರರು ಸೇರಿದಂತೆ 23 ಆಟಗಾರರನ್ನು ಖರೀದಿಸಿದೆ. ಶ್ರೇಯಸ್ ಅಯ್ಯರ್, ಯುಜುವೇಂದ್ರ ಚಹಲ್, ಆರ್ಶದೀಪ್ ಸಿಂಗ್, ಮಾರ್ಕಸ್ ಸ್ಟೋನಿಸ್ ಪಂಜಾಬ್ ಖರೀದಿಸಿದ ಪ್ರಮುಖ ಆಟಗಾರರೆನಿಸಿದ್ದಾರೆ.

810
8. ರಾಜಸ್ಥಾನ ರಾಯಲ್ಸ್‌:

8. ರಾಜಸ್ಥಾನ ರಾಯಲ್ಸ್‌:

ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಇದೀಗ 6 ವಿದೇಶಿ ಆಟಗಾರರು ಸೇರಿದಂತೆ 20 ಆಟಗಾರರನ್ನು ಹೊಂದಿದೆ. ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ವನಿಂದು ಹಸರಂಗ ರಾಯಲ್ಸ್ ಖರೀದಿಸಿದ ಪ್ರಮುಖ ಆಟಗಾರರೆನಿಸಿದ್ದಾರೆ.

910
9. ರಾಯಲ್ ಚಾಲೆಂಜರ್ಸ್ ಬೆಂಗಳೂರು:

9. ರಾಯಲ್ ಚಾಲೆಂಜರ್ಸ್ ಬೆಂಗಳೂರು:

ಹರಾಜಿಗೂ ಮುನ್ನ ಮೂರು ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದ ಆರ್‌ಸಿಬಿ ಇದೀಗ 8 ವಿದೇಶಿ ಆಟಗಾರರೊಂದಿಗೆ 22 ಆಟಗಾರರನ್ನು ಹೊಂದಿದೆ. ಜೋಶ್ ಹೇಜಲ್‌ವುಡ್, ಭುವನೇಶ್ವರ್ ಕುಮಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ ಆರ್‌ಸಿಬಿ ಖರೀದಿಸಿದ ಪ್ರಮುಖ ಆಟಗಾರರೆನಿಸಿದ್ದಾರೆ.

1010
10. ಸನ್‌ರೈಸರ್ಸ್ ಹೈದರಾಬಾದ್:

10. ಸನ್‌ರೈಸರ್ಸ್ ಹೈದರಾಬಾದ್:

ಹರಾಜಿಗೂ ಮುನ್ನವೇ ಬಲಿಷ್ಠ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದ ಕಳೆದ ಆವೃತ್ತಿಯ ರನ್ನರ್‌ ಅಪ್ ಸನ್‌ರೈಸರ್ಸ್ ತಂಡವು ಇದೀಗ 7 ವಿದೇಶಿ ಆಟಗಾರರೊಂದಿಗೆ 20 ಆಟಗಾರರನ್ನು ಹೊಂದಿದೆ. ಇಶಾನ್ ಕಿಶನ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ಅಭಿನವ್ ಮನೋಹರ್ ಆರೆಂಜ್ ಆರ್ಮಿ ಸೇರಿಕೊಂಡ ಪ್ರಮುಖರಾಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಆರ್‌ಸಿಬಿ

Latest Videos
Recommended Stories
Recommended image1
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಮ್ಯಾಚ್ ಫಿಕ್ಸ್ ಆಯ್ತು; ಆದ್ರೆ ಕಾಲ್ತುಳಿತದಲ್ಲಿ ಸತ್ತ 11 ಜನರ ಕೇಸ್ ಏನಾಯ್ತು?
Recommended image2
ಅರ್ಜುನ್ ತೆಂಡೂಲ್ಕರ್ ಸಾನಿಯಾ ಮೆಹಂದಿ ಸೆರಮನಿ ಮೊದಲ ವಿಡಿಯೋ ಬಹಿರಂಗ
Recommended image3
ಡ್ಯಾಡಿ ಡ್ಯೂಟಿ, ಲಂಡನ್‌ನಲ್ಲಿ ಪ್ರತಿ ದಿನ ಮಗನ ಶಾಲೆಗೆ ಕರೆದುಕೊಂಡು ಹೋಗ್ತಾರೆ ಕೊಹ್ಲಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved