ಉಪಚುನಾವಣೆ ನಡುವೆ 3 ದಿನದ ಅಧಿವೇಶನ.. ಏನಿದರ ಮರ್ಮ?
ರಾಜ್ಯದಲ್ಲಿ ಉಪಚುನಾಣೆ ಬಿಸಿ/ ಮೂರು ದಿನದ ಕಲಾಪಕ್ಕೆ ಸರ್ಕಾರದ ಸಿದ್ಧತೆ/ ಗಂಭೀರ ಚರ್ಚೆಗೆ ಅವಕಾಶವೇ ಇಲ್ಲ/ ಬೆಳಗಾವಿಯಲ್ಲಿ ನಡೆಯಬೇಕಾಗಿದ್ದ ಅಧಿವೇಶನ ಬೆಂಗಳೂರಲ್ಲಿ
ಬೆಂಗಳೂರು[ಸೆ. 24] ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನ ಮೂರು ದಿನಗಳಿಗೆ ಸೀಮಿತಗೊಳಿಸಲಾಗಿದ್ದು, ಅಕ್ಟೋಬರ್ 10 ರಿಂದ 12 ವರೆಗೆ ನಡೆಯಲಿದೆ.
ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಮೂರು ದಿನ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಹೊಸ ಅಭಿವೃದ್ಧಿ ಕಾರ್ಯ, ಹೊಸ ಯೋಜನೆ ಘೋಷಿಸುವಂತೆ ಇಲ್ಲ. ನೆರೆ, ಬರ ಸಂಬಂಧಿ ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅಡ್ಡಿ ಬರಲ್ಲ ಎಂಬುದನ್ನು ಸಿಎಂ ತಿಳಿಸಿದ್ದಾರೆ.
ಪೂರಕ ಬಜೆಟ್ ಗೆ ಅನುಮೋದನೆ: ಅಧಿವೇಶನದಲ್ಲಿ ಪೂರಕ ಬಜೆಟ್ಗೆ ಮಾತ್ರ ಅನುಮೋದನೆ ನೀಡಲಾಗುವುದು. ಉಳಿದಂತೆ ಯಾವುದೇ ಘೋಷಣೆ ಇಲ್ಲ ಎಂಬುದು ಸದ್ಯ ಸರ್ಕಾರದಿಂದ ಬಂದಿರುವ ಮಾಹಿತಿ.
ದೋಸ್ತಿಗಳ ಮಧ್ಯೆ ಹದ್ದು-ಗಿಣಿ ಗುದ್ದಾಟ: ಸಿದ್ದು ಕೊಟ್ಟ ಏಟಿಗೆ ಕುಮಾರಣ್ಣ ಒದ್ದಾಟ!
ಪ್ರತಿಪಕ್ಷಗಳಿಗೆ ನೆರೆಯೇ ಅಸ್ತ್ರ: ನೆರೆ ಸಂತ್ರಸ್ತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ ಎಂನ ವಿಚಾರವನ್ನೇ ಇಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಮುಂದಾಗಿದ್ದರೂ ಅದಕ್ಕೆ ಕಾಲಾವಕಾಶ ಇಲ್ಲ. ಒಂದರ್ಥದಲ್ಲಿ ನೀತಿ ಸಂಹಿತೆ ಆಡಳಿತಾರೂಢ ಬಿಜೆಪಿಗೆ ವರವಾಗಿ ಪರಿಣಮಿಸಿದೆ.
ಎಲ್ಲರ ಚಿತ್ತ ಎಲೆಕ್ಷನ್ ಅತ್ತ: ಮೂರು ದಿನದ ಅಧಿವೇಶನ ನಾಮಕಾವಸ್ಥೆ ಎನ್ನುವುದು ಮೇಲು ನೋಟಕ್ಕೆ ಸತ್ಯದಂತೆ ಕಾಣುತ್ತಿದೆ. ಕೆಲವೊಂದಕ್ಕೆ ಅನುಮೋದನೆ ಮಾತ್ರ ಸಿಗಬಹುದು . ಗಂಭೀರ ಚರ್ಚೆಗೆ ಅವಕಾಶ ಇಲ್ಲ. ಎಲ್ಲರ ಗಮನವೂ ಉಪಚುನಾವಣೆ ಮೇಲೆ ಇರುತ್ತದೆ. ಪ್ರತಿ ಸಾರಿ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದ್ದುದ್ದು ವಾಡಿಕೆ. ಆದರೆ ಈ ಸಾರಿ ಬಿಜೆಪಿ ಸರ್ಕಾರ ನೆರೆ ಕಾರಣಕ್ಕೆ ಬೆಂಗಳೂರಿನಲ್ಲಿಯೇ ಇಟ್ಟುಕೊಂಡಿದೆ.