Asianet Suvarna News Asianet Suvarna News

ಬಾಂಗ್ಲಾ ರಚಿಸಿ ಪಾಕ್‌ಗೆ ಮರ್ಮಾಘಾತ ನೀಡಿದ್ದು ಯಾರು ಮೋದಿಜೀ?: ಕಪಿಲ್ ಸಿಬಲ್!

'ಬಾಂಗ್ಲಾದೇಶ ರಚನೆಗೆ ಕಾಂಗ್ರೆಸ್ ಕಾರಣ ಎಂಬುದನ್ನು ಮೋದಿ ಮರೆಯುಬಾರದು'| ಪ್ರಧಾನಿ ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ ಕಪಿಲ್ ಸಿಬಲ್| ಬಾಂಗ್ಲಾದೇಶ ಪ್ರತ್ಯೇಕಿಸಿ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ್ದು ಕಾಂಗ್ರೆಸ್ ಅಲ್ಲವೇ ಎಂದು ಪ್ರಶ್ನಿಸಿದ ಕಪಿಲ್| ಬಾಂಗ್ಲಾದೇಶ ರಚನೆಯಾದಾಗ ಮೋದಿ ಎಲ್ಲಿದ್ದರು ಎಂದು ಪ್ರಶ್ನಿಸಿದ ಸಿಬಲ್| 'ಇತಿಹಾಸ ಅರಿಯದ ಮೋದಿ ಕಾಂಗ್ರೆಸ್ ಕುರಿತು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ'|

Kapil Sibal Says Congress Had Separated An Integral Part Of Pakistan
Author
Bengaluru, First Published Oct 19, 2019, 8:48 PM IST

ನವದೆಹಲಿ(ಅ.19): ಬಾಂಗ್ಲಾದೇಶ ಪ್ರತ್ಯೇಕಗೊಳಿಸಿ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ್ದು ಕಾಂಗ್ರೆಸ್ ಎಂಬುದನ್ನು ಪ್ರಧಾನಿ ಮೋದಿ ಮರೆಯಬಾರದು ಎಂದು ಕಪಿಲ್ ಸಿಬಲ್ ಹರಿಹಾಯ್ದಿದ್ದಾರೆ.

ಚುನಾವಣಾ ಪ್ರಚಾರ ಸಭೆಗಳಲ್ಲಿ ಆರ್ಟಿಕಲ್ 370ಯನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಡಿಸಿ ಪಾಕಿಸ್ತಾನಕ್ಕೆ ಕಾಂಗ್ರೆಸ್ ಮರ್ಮಾಘಾತ ನೀಡಿತ್ತು ಎಂಬ ಸತ್ಯವನ್ನೇಕೆ ಹೇಳುವುದಿಲ್ಲ ಎಂದು ಸಿಬಲ್ ಪ್ರಶ್ನಿಸಿದ್ದಾರೆ.

'ಪೋಸ್ ಕಡಿಮೆ ಕೊಡಿ, ಕೆಲ್ಸ  ಜಾಸ್ತಿ ಮಾಡಿ' ಮೋದಿಗೆ ಸಲಹೆ ಕೊಟ್ರು ನೋಡಿ!

ಕಾಂಗ್ರೆಸ್ ಬಾಂಗ್ಲಾದೇಶದ ಉದಯಕ್ಕೆ ಕಾರಣವಾದಾಗ ಪ್ರಧಾನಿ ಮೋದಿ ಎಲ್ಲಿದ್ದರು ಎಂದು ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ. ದೇಶದ ಇತಿಹಾಸ ಅರಿಯದ ಮೋದಿ ಕಾಂಗ್ರೆಸ್ ಕುರಿತು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಸಿಬಲ್ ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ, ಹರ್ಯಾಣ ಚುನಾವಣೆ ಮೋದಿಗೆ ಏಕೆ ಮುಖ್ಯ?

ಪ್ರಧಾನಿ ಮೋದಿ ಅವರಿಗೆ ಯಾವಾಗಲೂ ಆರ್ಟಿಕಲ್ 370 ಬಗ್ಗೆಯೇ ಚಿಂತೆಯಾಗಿದ್ದು, ರಾಜ್ಯಗಳ ಪೌಷ್ಟಿಕಾಂಶ ಹೆಚ್ಚಿಸುವ ಕುರಿತು ಉಲ್ಲೇಖಿಸುವ ಆರ್ಟಿಕಲ್ 47 ಬಗ್ಗೆ ಅವರು ಯೋಚಿಸುವುದಿಲ್ಲ ಎಂದು ಸಿಬಲ್ ವಾಗ್ದಾಳಿ ನಡೆಸಿದ್ದಾರೆ.

Follow Us:
Download App:
  • android
  • ios