ಚರಿತ್ರೆ ಸೃಷ್ಟಿಸೋ ಹರಿಪ್ರಿಯಾ ಅವತಾರ, ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಖಾರ; ಫೆ.26ರ ಟಾಪ್ 10 ಸುದ್ದಿ!
ದೆಹಲಿಯ ಪೌರತ್ವ ಕಾಯ್ದೆ ಪರ ವಿರೋಧ ಹೋರಾಟ ಹಿಂಸಾರೂಪಕ್ಕೆ ತಿರುಗಿದ್ದು 20 ಮಂದಿ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಬೆಂಗಳೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಲಾಗಿದೆ. ನಟಿ ಹರಿಪ್ರಿಯಾ ಬಿಚ್ಚುಗತ್ತಿ ಸಿನಿಮಾಯದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಮದುವೆ ಸೇರಿದಂತೆ ಫೆಬ್ರವರಿ 26ರ ಟಾಪ್ 10 ಸದ್ದಿ ಇಲ್ಲಿವೆ.
ಗಲಭೆಯಲ್ಲಿ 20 ಮಂದಿ ಬಲಿ; ದೆಹಲಿ ಪೊಲೀಸರಿಗೆ ಸುಪ್ರೀಂ ಚಾಟಿ
ದೆಹಲಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರಿದಿದೆ. ಪೌರತ್ವ ಕಾಯ್ದೆ ಪರ-ವಿರೋಧಿಗಳ ನಡುವೆ ಶುರುವಾದ ಘರ್ಷಣೆ ತೀವ್ರ ಹಿಂಸಾರೂಪಕ್ಕೆ ತಿರುಗಿದ್ದು, 20 ಮಂದಿ ಬಲಿಯಾಗಿದ್ದಾರೆ.
ಬೆಂಗ್ಳೂರಿನಲ್ಲಿ ಎನ್‌ಐಎ ಬೇಟೆ: ಸಿನಿಮೀಯ ರೀತಿಯಲ್ಲಿ ಶಂಕಿತ ಉಗ್ರ ಬಲೆಗೆ
ಬೆಂಗಳೂರಿನ ಟ್ಯಾನರಿ ರೋಡ್‌ನಲ್ಲಿ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳವು ಬಂಧಿಸಿದೆ. ಎರಡು ದಿನಗಳ ಹಿಂದೆ ಎನ್‌ಐಎಯು19 ಕಡೆ ದಾಳಿ ನಡೆಸಿ, ಮಹತ್ವದ ಮಾಹಿತಿಯನ್ನು ಕಲೆ ಹಾಕಿತ್ತು.
'ಬಿಚ್ಚುಗತ್ತಿ' ಯಲ್ಲಿ ಹರಿಪ್ರಿಯಾ ಬೋಲ್ಡ್ ಅವತಾರವಿದು!
ಕೋಟೆನಾಡು ಚಿತ್ರದುರ್ಗಕ್ಕೂ ಸಿನಿಮಾಲೋಕಕ್ಕೂ ಅವಿನಾಭಾವ ನಂಟು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರ ಬಂದ ನಂತರ ಅದು ಇನ್ನಷ್ಟುಆಕರ್ಷಣೀಯ ತಾಣವಾಯಿತು. ಕೋಟೆ ರಕ್ಷಿಸಿದ ಓಬವ್ವ ಮನೆಮಾತಾದಳು. ಇದೀಗ ಓಬವ್ವ ನಂತರ ಸಿದ್ದಾಂಬೆ ಕನ್ನಡಿಗರ ಮನಸ್ಸೊಳಗೆ ಬರಲು ಸಿದ್ಧವಾಗಿದ್ದಾರೆ.
ಫೋಟೋಸ್: ಸಪ್ತಪದಿ ತುಳಿದ ಬಿಗ್‌ಬಾಸ್ ಚಂದನದ ಗೊಂಬೆ
ಬಿಗ್‌ಬಾಸ್ ಸೀಸನ್ 6ರ ಸ್ಪರ್ಧಿಗಳಾಗಿ ಮಿಂಚಿದ್ದ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ಸೋಷಿಯಲ್ ಮೀಡಿಯಾ ತಾರೆ ನಿವೇದಿತಾ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆ ಅಲಂಕರಾದಲ್ಲಿ ನಿವೇದಿತಾ ಮುದ್ದಾದ ಗೊಂಬೆಯಂತೆಯೇ ಕಂಗೊಳಿಸಿದ್ದಾರೆ.
CAA ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: CM ಇಬ್ರಾಹಿಂ
ಬೇಟಿ ಬಚಾವೋ ಬೇಟಿ ಪಡಾವೋ ಎಂದು ಘೋಷಣೆ ಮೊಳಗಿಸುವ ಮೋದಿ ಅವರಿಗೆ ಶಹೀನ್ ಭಾಗ್‌ನಲ್ಲಿ ಕುಳಿತ ಮಹಿಳೆಯರು ಕಾಣಲಿಲ್ಲವೇ ಎಂದು ಕೇಂದ್ರ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಪ್ಯಾಕ್ ಮಾಡದ ಸಿಹಿ ಮೇಲೆ ಎಕ್ಸ್‌ಪೈರಿ ದಿನಾಂಕ ಕಡ್ಡಾಯ!
ಳೀಯ ಬೇಕರಿ ಹಾಗೂ ಸಿಹಿ ತಿಂಡಿಗಳ ಅಂಗಡಿಗಳಲ್ಲಿ ಮಾರುವ ಪ್ಯಾಕ್ ಮಾಡಿರದ ತಿಂಡಿಗಳ ಮೇಲೂ ತಯಾರಿಕಾ ದಿನಾಂಕ ಹಾಗೂ ಎಷ್ಟು ದಿನದೊಳಗೆ ಬಳಸಬಹುದು ಎನ್ನುವ ಮಾಹಿತಿ ಪ್ರದರ್ಶಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಸೇತುವೆಯಿಂದ 15 ಅಡಿ ಕೆಳಕ್ಕೆ ಬಿದ್ದ ಟಾಟಾ ನೆಕ್ಸಾನ್, ಪ್ರಯಾಣಿಕರು ಸೇಫ್!
ಭಾರತದ ಮೊದಲ ಸೇಫ್ ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ನೆಕ್ಸಾನ್ ಪಾತ್ರವಾಗಿದೆ. ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಟಾಪ್ 5 ಸ್ಟಾರ್ ರೇಟಿಂಗ್ ಪಡೆದ ಸೇತುವೆ ಮೇಲಿಂದ 15 ಅಡಿ ಕೆಳಕ್ಕೆ ಬಿದ್ದರೂ ಪ್ರಯಾಣಿಕರೆಲ್ಲರೂ ಸೇಫ್ ಆಗೋ ಮೂಲಕ ಮತ್ತೊಮ್ಮೆ ಸುರಕ್ಷತೆಯನ್ನು ಸಾಬೀತು ಪಡಿಸಿದೆ.
LIC ನೇಮಕಾತಿ 2020: ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
ಜೀವ ವಿಮಾ ನಿಗಮ(ಎಲ್ಐಸಿ) 218 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು 2020, ಮಾರ್ಚ್ 15ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ...
ದೆಹಲಿ ಹಿಂಸಾಚಾರ: ಅಮಿತ್ ಶಾ ವಿರುದ್ಧ ಗುಡುಗಿನ ಸೋನಿಯಾ!...
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಂಸಾಚಾರವನ್ನು ಖಂಡಿಸಿದ್ದಾರೆ. ಅಲ್ಲದೇ ನಾಳೆ, ಗುರುವಾಗ ಇದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ರಾಷ್ಟ್ರಪತಿ ಭವನಕ್ಕೆ ಶಾಂತಿಯುತ ಪಾದಯಾತ್ರೆ ನಡೆಸುವುದಾಗಿಯೂ ತಿಳಿಸಿದ್ದಾರೆ.
KRSನಿಂದ ತಮಿಳುನಾಡಿಗೆ 5885 ಕ್ಯೂಸೆಕ್ ನೀರು ಬಿಡುಗಡೆ
KRS ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡಲಾಗಿದೆ. ಮಂಗಳವಾರ ರಾತ್ರಿಯಿಂದಲೇ ನೀರು ಬಿಡುಗಡೆ ಆರಂಭಿಸಿದ್ದು, ಕೆಆರ್‌ಎಸ್‌ನಲ್ಲಿ ಪ್ರಸ್ತುತ 112.57 ಅಡಿ ನೀರಿದೆ...