ಪ್ಯಾಕ್‌ ಮಾಡದ ಸಿಹಿ ಮೇಲೂ ತಯಾರಿಕೆ, ಗರಿಷ್ಠ ಮಾರಾಟ ಅವಧಿ ನಮೂದು ಕಡ್ಡಾಯ| ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ಪ್ರಾಧಿಕಾರdiMd niym

ನವದೆಹಲಿ: ಸ್ಥಳೀಯ ಬೇಕರಿ ಹಾಗೂ ಸಿಹಿ ತಿಂಡಿಗಳ ಅಂಗಡಿಗಳಲ್ಲಿ ಮಾರುವ ಪ್ಯಾಕ್‌ ಮಾಡಿರದ ತಿಂಡಿಗಳ ಮೇಲೂ ತಯಾರಿಕಾ ದಿನಾಂಕ ಹಾಗೂ ಎಷ್ಟುದಿನದೊಳಗೆ ಬಳಸಬಹುದು ಎನ್ನುವ ಮಾಹಿತಿ ಪ್ರದರ್ಶಿಸುವುದನ್ನು ಕಡ್ಡಾಯ ಮಾಡಲಾಗಿದೆ.

2020ರ ಜೂನ್‌.1ರಿಂದ ಹೊಸ ನೀತಿ ಜಾರಿಗೆ ಬರಲಿದೆ ಎಂದು ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹೇಳಿದೆ. ಇದುವರೆಗೆ ಪ್ಯಾಕ್‌ ಮಾಡಿದ ಸಿಹಿ ತಿನಿಸುಗಳ ಮೇಲೆ ಮಾತ್ರ ಇಂಥ ನಿಯಮ ಜಾರಿಯಾಗುತ್ತಿತ್ತು. ಆದರೆ ಅದನ್ನು ಇದೀಗ ಪ್ಯಾಕ್‌ ಮಾಡದ ಸಿಹಿ ತಿನಿಗಳಿಗೂ ವಿಸ್ತರಿಸಲಾಗುತ್ತಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಆಹಾರ ಗುಣಮಟ್ಟಕಾಪಾಡುವ ನಿಟ್ಟನಲ್ಲಿ ಈ ನಿಯಮಾವಳಿ ತರಲಾಗಿದೆ.

ಸಿಹಿ ತಿನಿಸಿನ ಮಾದರಿ ಮತ್ತು ಸ್ಥಳೀಯ ಪರಿಸ್ಥಿತಿಗಳನ್ನು ಆಧರಿಸಿ ತಯಾರಕರು, ಗರಿಷ್ಠ ಬಳಕೆಯ ದಿನ ನಿಗದಿ ಮಾಡಬೇಕು ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ.