1) ಬಿಲ್ ಗೇಟ್ಸ್ ಜೊತೆಗಿನ ಫೋಟೋ ಮೂಲಕ ಹಳೇ ಸೇಡು ತೀರಿಸಿಕೊಂಡ ಸ್ಮೃತಿ ಇರಾನಿ!


ಕೇಂದ್ರ ಸಟಿವೆ ಸ್ಮೃತಿ ಇರಾನಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ವಿಶ್ವದ ಶ್ರೀಮಂತ ಬಿಲ್ ಗೇಟ್ಸ್ ಜೊತೆಗಿನ ಪೋಟೋ ಹಂಚಿಕೊಂಡಿರುವ ಇರಾನಿ, ಹಳೇ ಟೀಕೆಗೆ  ಸರಿಯಾಗಿ ತಿರುಗೇಟು ನೀಡಿದ್ದಾರೆ. 


2) ಯುವತಿಯರು ಸೇರಿ 11 ಮಂದಿಯಿಂದ ಗಾಂಜಾ ಪಾರ್ಟಿ? ಇಬ್ಬರು ಬಲಿ

ಗಾಂಜಾ ಚಟಕ್ಕೆ ಇಬ್ಬರು ಯುವಕರು ಬಲಿಯಾದ್ರಾ? ಇಂತಹದ್ದೊಂದು ಅನುಮಾನಸ್ಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ಬರ್ತ್ ಡೇ ಪಾರ್ಟಿಯಲ್ಲಿ ಇಬ್ಬರು ಸೇರಿದಂತೆ 11 ಯುವಕರು ಗಾಂಜಾ ಸೇವಿಸಿದ್ದಾರೆ. ಅದರಿಂದಾಗಿ ಅವರಿಬ್ಬರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಉಳಿದ 9 ಮಂದಿ ಕೂಡಾ ಅಸ್ವಸ್ಥರಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. 

3) ವಿದ್ಯಾರ್ಥಿನಿಯನ್ನು ಚಲಿಸುವ ಬಸ್‌ನಿಂದ ತಳ್ಳಿದ ಕಂಡಕ್ಟರ್‌ ಸಸ್ಪೆಂಡ್!

ಬೆಂಗಳೂರಿನಲ್ಲಿ ಚಲಿಸುವ ಕೆಎಸ್‌ಆರ್‌ಟಿಸಿ ಬಸ್‌ನಿಂದ ವಿದ್ಯಾರ್ಥಿನಿಯನ್ನು ಹೊರಗೆ ತಳ್ಳಿದ ಘಟನೆ ಸಂಬಂಧ ಬಸ್‌ ನಿರ್ವಾಹಕ ಶಿವಶಂಕರ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಘಟನೆ ಕುರಿತು ಈಗಾಗಲೇ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಅಲ್ಲದೆ, ಗಾಯಾಳು ವಿದ್ಯಾರ್ಥಿನಿಯ ವೈದ್ಯಕೀಯ ವೆಚ್ಚವನ್ನು ನಿಗಮದಿಂದಲೇ ಭರಿಸಲಾಗುವುದು

4) ತಮಿಳುನಾಡಿನಲ್ಲಿ ರಜನಿ- ಕಮಲ್ ಮೈತ್ರಿ?

2021ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆಯಲ್ಲಿರುವಾಗ ಕಮಲ್‌ಹಾಸನ್‌ ಮತ್ತು ರಜನೀಕಾಂತ್‌, ಅಗತ್ಯ ಬಿದ್ದರೆ ತಾವು ಒಂದಾಗಿ ಹೋರಾಡುವ ಘೋಷಣೆ ಮಾಡಿದ್ದಾರೆ. ಒಂದು ವೇಳೆ ಇದು ಸಾಧ್ಯವಾಗಿದ್ದೇ ಆದಲ್ಲಿ, ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಬದಲಾವಣೆಯ ಎಲ್ಲಾ ಸಾಧ್ಯತೆಗಳೂ ಇವೆ. 

5) ಕುರುಬ ಸಮುದಾಯಕ್ಕೆ ಅವಮಾನ: ಮಾಧುಸ್ವಾಮಿ ಪರ ಸಿಎಂ ಕ್ಷಮೆ ಯಾಚನೆ

ಚಿಕ್ಕನಾಯಕನಹಳ್ಳಿ ಹುಳಿಯಾರು ಪಟ್ಟಣದ ಸರ್ಕಲ್‌ಗೆ ಕನಕವೃತ್ತ ಹೆಸರಿಡುವ ವಿಚಾರದಲ್ಲಿ, ಸಚಿವ ಜೆ.ಸಿ. ಮಾಧುಸ್ವಾಮಿ ಕುರುಬ ಸಮುದಾಯದ ಹಾಲುಮತ ಸ್ವಾಮೀಜಿಗೆ ಅವಮಾನ ಮಾಡಿರುವ ವಿವಾದಕ್ಕೆ ಕುರಿತಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದರು. 

6) KPL ಫಿಕ್ಸಿಂಗ್: ಹೆಣ್ಣಿನ ಆಸೆಗೆ ಮಣ್ಣು ತಿಂದ್ರಾ ಕ್ರಿಕೆಟರ್ಸ್?.

 

ಕೆಪಿಎಲ್ ಟೂರ್ನಿ ಫಿಕ್ಸಿಂಗ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಫ್ರಾಂಚೈಸಿ ಮಾಲಿಕರು ಹಾಗೂ ಆಟಗಾರರು ನಡುವೆ ಸುತ್ತಿಕೊಂಡಿದ್ದ ಫಿಕ್ಸಿಂಗ್ ನಂಟು ಇದೀಗ ಹನಿ ಟ್ರಾಪಿಂಕ್ ಜಾಲದ ನಂಟು ಕೂಡ ಸ್ಪಷ್ಟವಾಗುತ್ತಿದೆ. ಹೆಣ್ಣಿನ ಆಸೆ ತೋರಿಸಿ ಟ್ರಾಪ್ ಮಾಡಿ ಆಟಗಾರರನ್ನು ಫಿಕ್ಸಿಂಗ್‌ಗೆ ಬಳಕೆ ಮಾಡಲಾಗುತ್ತಿತ್ತು ಅನ್ನೋ ಸ್ಪೋಟಕ ಮಾಹಿತಿ ಹೊರಬಿದ್ದಿದೆ.


7) 'ಹೌದು, ನಾನು ಪ್ರೀತಿಸುತ್ತಿದ್ದೇನೆ' ಎಂದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ತೆಲುಗು ಇಂಡಸ್ಟ್ರಿಗೆ ಹೋದ ನಂತರ ಅವರ ಬಗ್ಗೆ ಇದ್ದ ಇಮೇಜ್ ಬದಲಾಗಿ ಹೋಗಿದೆ. ವಿಜಯ ದೇವರಕೊಂಡ ಜೊತೆಗೆ ಕುಚ್ ಕುಚ್ ಹೋ ರಹಾ ಹೇ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ರಶ್ಮಿಕಾ ಉತ್ತರ ಕೊಟ್ಟಿದ್ದಾರೆ. 

8) ಏರ್‌ಟೆಲ್‌, ವೊಡಾಫೋನ್‌ ಬೆನ್ನಲ್ಲೇ ಜಿಯೋ ದರ ಏರಿಕೆ ಘೋಷಣೆ

ಸೆಪ್ಟೆಂಬರ್‌ ತಿಂಗಳಲ್ಲಿ ಏರ್‌ಟೆಲ್‌ ಹಾಗೂ ವೊಡಾಫೋನ್‌ಗಳು 49 ಲಕ್ಷ ಚಂದಾದಾರರನ್ನು ಕಳೆದುಕೊಂಡಿವೆ. ಇದರಲ್ಲಿ ಏರ್‌ಟೆಲ್‌ ಪಾಲು 23.8 ಲಕ್ಷ ಹಾಗೂ ವೊಡಾಫೋನ್‌ 25.7 ಲಕ್ಷ. ಆದರೆ ಜಿಯೋ ಹಾಗೂ ಬಿಎಸ್ಸೆನ್ನೆಲ್‌ ಚೇತರಿಸಿಕೊಂಡಿವೆ.

9) 'ಕತ್ತೆ, ನಾಯಿ, ಮೀನು, ಕುದುರೆ, ಕೋಣಗಳಿರುವಾಗ ಪೂಜನೀಯ ಗೋವುಗಳನ್ನೇಕೆ ತಿನ್ನುತ್ತೀರಿ?'

 ತುಳಸಿಯಿಂದ ಮೊಬೈಲ್‌ ರೆಡಿಯೇಶನ್‌ ಕಡಿಮೆಯಾಗುತ್ತದೆ ಎಂದು ಶನಿವಾರ ಹೇಳಿದ್ದ ಬಾಬಾ ರಾಮ್‌ದೇವ್‌, ಮಾಂಸಾಹಾರ ಸೇವನೆಯಿಂದ ಜಾಗತಿಕ ತಾಪಮಾನ ಹೆಚ್ಚುತ್ತದೆ ಎನ್ನುವ ವಾದವನ್ನು ಮಂಗಳವಾರ ಮಂಡಿಸಿದ್ದಾರೆ. ಮಂಗಳವಾರ ಕೃಷ್ಣಮಠದಲ್ಲಿ ನಡೆದ ಸಂತ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ವಿಜ್ಞಾನಿಗಳು ಜಾಗತಿಕ ತಾಪಮಾನ ಹೆಚ್ಚಳಕ್ಕೆ ನಾನಾ ಕಾರಣಗಳನ್ನು ಕಂಡು ಹಿಡಿಯುತ್ತಿದ್ದಾರೆ. ಆದರೆ ನಿಜವಾದ ಕಾರಣ ಮಾಂಸಾಹಾರ ಹೆಚ್ಚಾಗಿರುವುದೇ ಕಾರಣ, ಇದನ್ನೇ ವಿಜ್ಞಾನಿಗಳು ಪತ್ತೆ ಮಾಡಿಲ್ಲ ಎಂದರು.

10) ತರೂರ್ ಫೋಟೋಸ್ ವೈರಲ್: ಕಾಲೇಜು ಮಸ್ತಿ, ರೊಮ್ಯಾಂಟಿಕ್ ಲುಕ್ ರಿವೀಲ್

ಕಾಂಗ್ರೆಸ್ ನಾಯಕ ಹಾಗೂ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಸಂಸದ ಶಶಿ ತರೂರ್ ತಮ್ಮ ನೂತನ, ವಿನೂತನ ಆಂಗ್ಲ ಪದಗಳಿಂದ ಸೌಂಡ್ ಮಾಡುತ್ತಿರುತ್ತಾರೆ. ಅವರು ಬಳಸುವ ಆಂಗ್ಲ ಪದಗಳು ಕೆಲವೊಮ್ಮೆ ಚೆನ್ನಾಗಿ ಬಲ್ಲ ಸಾಹಿತಿಗಳ ತಲೆ ತಿರುಗುವಂತೆ ಮಾಡುತ್ತವೆ. ಇನ್ನು ಕೆಲವೇ ದಿನಗಳಲ್ಲಿ ತರೂರ್ ಸ್ಟ್ಯಾಂಡಪ್ ಕಾಮಿಡಿಯನ್ ಆಗಿ ಕಾಣಿಸಿಕೊಳ್ಳಲಿದ್ದು, ಇದನ್ನು ಅವರು ಖುದ್ದು ಬಹಿರಂಗಪಡಿಸಿದ್ದಾರೆ.