ಕಷ್ಟದ ಆಂಗ್ಲ ಪದಗಳನ್ನು ಬಳಸಿ ಸೌಂಡ್ ಮಾಡುವ ಶಶಿ ತರೂರ್ ಡಿಫರೆಂಟ್ ಲುಕ್| ಅಭಿಮಾನಿ ಶೇರ್ ಮಾಡಿದ್ದ ಫೋಟೋಗಳನ್ನು ರೀ ಟ್ವಿಟ್ ಮಾಡಿದ ಕಾಂಗ್ರೆಸ್ ಸಂಸದ| ಬಾಲ್ಯ, ಕಾಲೇಜು ಮಸ್ತಿ.. ಫೋಟೋಗಳೇ ವರ್ಣಿಸುತ್ತವೆ ಸಂಸದ ಶಶಿ ತರೂರ್ ಲೈಫ್‌ ಸ್ಟೋರಿ

ನವದೆಹಲಿ[ನ.20]: ಕಾಂಗ್ರೆಸ್ ನಾಯಕ ಹಾಗೂ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಸಂಸದ ಶಶಿ ತರೂರ್ ತಮ್ಮ ನೂತನ, ವಿನೂತನ ಆಂಗ್ಲ ಪದಗಳಿಂದ ಸೌಂಡ್ ಮಾಡುತ್ತಿರುತ್ತಾರೆ. ಅವರು ಬಳಸುವ ಆಂಗ್ಲ ಪದಗಳು ಕೆಲವೊಮ್ಮೆ ಚೆನ್ನಾಗಿ ಬಲ್ಲ ಸಾಹಿತಿಗಳ ತಲೆ ತಿರುಗುವಂತೆ ಮಾಡುತ್ತವೆ. ಇನ್ನು ಕೆಲವೇ ದಿನಗಳಲ್ಲಿ ತರೂರ್ ಸ್ಟ್ಯಾಂಡಪ್ ಕಾಮಿಡಿಯನ್ ಆಗಿ ಕಾಣಿಸಿಕೊಳ್ಳಲಿದ್ದು, ಇದನ್ನು ಅವರು ಖುದ್ದು ಬಹಿರಂಗಪಡಿಸಿದ್ದಾರೆ.

ಈ ಎಲ್ಲಾ ವಿಚಾರಗಳೊಂದಿಗೆ ತರೂರ್ ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಅಭಿಮಾನಿಯೊಬ್ಬರ ಟ್ವೀಟ್ ಶೇರ್ ಮಾಡಿಕೊಂಡಿದ್ದಾಋಎ. ಈ ಟ್ವಿಟ್ ನಲ್ಲಿ ವಿಶಾಖ್ ಚೆರಿಯನ್ ಹೆಸರಿನ ವ್ಯಕ್ತಿಯೊಬ್ಬ ಶಶಿ ತರೂರ್ ಅವರ ಬಾಲ್ಯದಿಂದ ಈವರೆಗಿನ ಫೋಟೋಗಳನ್ನು ಒಂದೇ ಫ್ರೇಮ್ ನಲ್ಲಿ ಕೊಲಾಜ್ ಮಾಡಿದ್ದಾರೆ. ಈ ಫಟೋ ರೀ ಟ್ವೀಟ್ ಮಾಡಿರುವ ತರೂರ್ 'ವಿಶಾಖ್ ಕಲೆಕ್ಷನ್ ಬಹಳ ಚೆನ್ನಾಗಿದೆ. ಇದಕ್ಕಾಗಿ ಧನ್ಯವಾದಗಳು' ಎಂದಿದ್ದಾರೆ. 

Scroll to load tweet…

ಈ ಫೋಟೋದಲ್ಲಿ ಶಶಿ ತರೂರ್ ಬಾಲ್ಯ, ಕಾಲೇಜಿನಲ್ಲಿ ಗೆಳೆಯರೊಂದಿಗಿನ ಮೋಜು ಮಸ್ತಿ, ರೊಮ್ಯಾಂಟಿಕ್ ಆಗಿ ಮಾಡಿರುವ ನಾಟಕ ಹಾಗೂ ಅವರ ಜೀವನದ ಇನ್ನಿತರ ಕೆಲ ದೃಶ್ಯಗಳನ್ನು ಝಲಕ್ ಸೇರಿಸಲಾಗಿದೆ. ಈ ಫೋಟೋ ನೋಡಿದ ಹಲವರು ಕಮೆಂಟ್ ಮಾಡಿ ಯಾವ ಫೋಟೋ ಚೆನ್ನಾಗಿದೆ ಎಂದು ತಿಳಿಸಿದ್ದಾರೆ.