ಶ್ರೀಲಂಕಾ ದಾಳಿಯ ಹೊಣೆ ಹೊತ್ತ ಐಸಿಸ್!| ಕೊಲಂಬೋ ಚರ್ಚ್ ಗಳಲ್ಲಿ ನಡೆದ ದಾಳಿ ನಡೆಸಿದ್ದು ತಾನೇ ಎಂದ ಐಸಿಸ್| ಅಮಾಕ್ ನ್ಯೂಸ್ ಏಜೆನ್ಸಿಯಲ್ಲಿ ವರದಿ ಪ್ರಸಾರ|

ಕೊಲಂಬೋ(ಏ.23):ಶ್ರೀಲಂಕಾದಲ್ಲಿ 320ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ಭೀಕರ ಬಾಂಬ್ ಸ್ಫೋಟ ದಾಳಿಯ ಹೊಣೆಯನ್ನು ಕುಖ್ಯಾತ ಉಗ್ರ ಸಂಘಟನೆ ಐಸಿಸ್ ಹೊತ್ತುಕೊಂಡಿದೆ.

Scroll to load tweet…

ಕಳೆದ ಭಾನುವಾರ ಈಸ್ಟರ್ ಸಂಡೆ ನಿಮಿತ್ತ ಕೊಲಂಬೋ ಚರ್ಚ್ ಗಳಲ್ಲಿ ನಡೆದ ದಾಳಿ ನಡೆಸಿದ್ದು ತಾನೇ ಎಂದು ಐಸಿಸ್ ಹೇಳಿದೆ. ಐಸಿಸ್ ಸಂಘಟನೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ಸುದ್ದಿ ಪ್ರಸಾರ ಮಾಡುವ ಅಮಾಕ್ ನ್ಯೂಸ್ ಏಜೆನ್ಸಿ, ಈ ಕುರಿತು ವರದಿ ಮಾಡಿದೆ.

Scroll to load tweet…

ಆದರೆ ದಾಳಿಗೆ ಸಂಬಂಧಿಸಿದಂತೆ ಐಸಿಸ್ ಯಾವುದೇ ವಿವರಣೆಯಾಗಲಿ ಅಥವಾ ಸಾಕ್ಷ್ಯಾಧಾರವಾಗಲಿ ಇದುವರೆಗೂ ಐಸಿಸ್ ಸಂಘಟನೆ ನೀಡಿಲ್ಲ. ಅಮಾಕ್ ವರದಿ ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.