ಶ್ರೀಲಂಕಾದ ಕೊಲೊಂಬೊದಲ್ಲಿ ಸರಣಿ ಬಾಂಬ್ ಸ್ಫೋಟ| ಘಟನೆಯಲ್ಲಿ 25 ಜನರ ಮೃತಪಟ್ಟಿರುವ ಶಂಕೆ, 200ಕ್ಕೂ ಅಧಿಕ ಜನರಿಗೆ ಗಾಯ| ಐದು ಚರ್ಚ್ಗಳು, ಮೂರು ಹೋಟೆಲ್ಗಳಲ್ಲಿ ಬಾಂಬ್ ಸ್ಪೋಟ
ಕೊಲಂಬೋ[ಏ.21]: ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಈಸ್ಟರ್ ಸಂಡೇಯಂದು ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 25 ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಸೆಬಾಸ್ಟಿಯನ್ ಚರ್ಚ್, ಸೇಂಟ್ ಆ್ಯಂಟನಿ ಚರ್ಚ್ ಸೇರಿದಂತೆ ಒಟ್ಟು ಮೂರು ಚರ್ಚ್ ಹಾಗೂ ಶಾಂಗ್ರಿಲಾ, ಕಿಂಗ್ಸ್ ಬ್ಯೂರಿ ಹೋಟೆಲ್ ಗಳಲ್ಲಿ ಬಾಂಬ್ ಸ್ಪೋಟ ನಡೆದಿದೆ.
ಭಾನುವಾರದ ಈಸ್ಟರ್ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ ಸಂಭವಿಸಿದ್ದು, ಭಾರತೀಯರನ್ನು ಗುರಿಯಾಗಿಸಿ ಐಸಿಸ್ ಉಗ್ರರಿಂದ ಈ ದಾಳಿ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.
