ಕೋಪನ್ ಹೇಗನ್(ಏ.22): ಶ್ರೀಲಂಕಾದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ, ಡೆನ್ಮಾರ್ಕ್ ನ ಅತ್ಯಂತ ಶ್ರೀಮಂತ ವ್ಯಕ್ತಿ ಆ್ಯಂಡರ್ಸ್ ಹೋಲ್ಚ್ ಪಾಸೆನ್ ಅವರ ಮೂವರು ಮಕ್ಕಳು ಮೃತಪಟ್ಟಿದ್ದಾರೆ.

ಈ ಕುರಿತು ಪಾಸೆನ್ಸ್ ಫ್ಯಾಷನ್ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದು, ರಜಾ ದಿನ ಕಳೆಯಲು ತೆರಳಿದ್ದ ಆ್ಯಂಡರ್ಸ್ ಹೋಲ್ಚ್ ಪಾಸೆನ್ ಅವರ ನಾಲ್ವರು ಮಕ್ಕಳ ಪೈಕಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಪಾಸೆನ್ ಬೆಸ್ಟ್ ಸೆಲ್ಲರ್ ಫ್ಯಾಷನ್ ಸಂಸ್ಥೆಯ ಮಾಲೀಕರಾಗಿದ್ದು, ವೆರೊ ಮೋಡಾ ಮತ್ತು ಜಾಕ್ ಆ್ಯಂಡ್ ಜೋನ್ಸ್ ಬ್ರ್ಯಾಂಡ್ ಅತ್ಯಂತ ಪ್ರಸಿದ್ಧಿ ಪಡೆದಿವೆ.