ಕೊಲಂಬೋ[ಏ.22]: ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ 5 ಮಂದಿ ಕನ್ನಡಿಗರ ದುರ್ಮರಣ ಹೊಂದಿದ್ದಾರೆ. ಚುನಾವಣೆ ಪ್ರಚಾರ ಮುಗಿಸಿದ್ದ 7 ಮಂದಿ ಜೆಡಿಎಸ್ ಮುಖಂಡರು ಪ್ರವಾಸಕ್ಕೆಂದು ಶ್ರೀಲಂಕಾಗೆ ತೆರಳಿದ್ದರು. ದುರಾದೃಷ್ಟವಶಾತ್ ಭಾನುವಾರದಂದು ನಡೆದ ಸ್ಫೋಟಕ್ಕೆ ಐವರು ಬಲಿಯಾಗಿದ್ದಾರೆ.

ಕೊಲಂಬೋದ ಶಾಂಗ್ರಿಲಾದಲ್ಲಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ 7 ಮಂದಿಯಲ್ಲಿ ಜೆಡಿಎಸ್ ಮುಖಂಡರಾದ ಹನುಮಂತರಾಯಪ್ಪ, ರಂಗಪ್ಪ, ಶಿವಕುಮಾರ್ ಲಕ್ಷ್ಮೀನಾರಾಯಣ್, ರಮೇಶ್ ದುರ್ಮರಣಕ್ಕೀಡಾಗಿದ್ದಾರೆ. ಇವರೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಪರ ಪ್ರಚಾರ ನಡೆಸಿದ್ದರು.

ಸಿಎಂ ಕುಮಾರಸ್ವಾಮಿ ಜೆಡಿಎಸ್ ಮುಖಂಡರ ಸಾವಿಗೆ ಆಘಾತ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಕುಮಾರಸ್ವಾಮಿ 'ಘಟನೆ ಸುದ್ದಿ ಕೇಳಿ ನನಗೆ ಇನ್ನಿಲ್ಲದ ಆಘಾತ, ನೋವಾಗಿದೆ. ಇಬ್ಬರು ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಕಾಣೆಯಾಗಿರುವವರ ಪತ್ತೆಗೆ ಭಾರತ ರಾಯಭಾರ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ' ಎಂದಿದ್ದಾರೆ.

ಮೃತಪಟ್ಟವರ ವಿವರ : 

ಶಿವಣ್ಣ, ಲಕ್ಷ್ಮೀನಾರಾಯಣ, ಹನುಮಂತರಾಯಪ್ಪ, ರಂಗಪ್ಪ, ರಮೇಶ್

ನಾಪತ್ತೆಯಾದವರು : 

ಮಾರೇಗೌಡ- ಅಡಕಮಾರನಹಳ್ಳಿ ಗ್ರಾಮ, ಬೆಂಗಳೂರು ಉತ್ತರ ತಾಲೂಕು
ಪುಟ್ಟರಾಜು -  ಹಾರೋಕ್ಯಾತನಹಳ್ಳಿ, ಬೆಂಗಳೂರು ಉತ್ತರ

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28