ಬೆಂಗಳೂರು, [ಡಿ.20]: ಸ್ಯಾಂಡಲ್​ವುಡ್​​ನ ಬಹುನಿರೀಕ್ಷಿತ ಹಾಗೂ ಪ್ರಪಂಚದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ KGF ಚಿತ್ರ. ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.

ವಿಶ್ವದಾದ್ಯಂತ ಸುಮಾರು 2000 ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಅಭಿಮಾನಿಗಳು ಸಹ ಯಶ್ ಅವರ ವೆರೈಟಿ ಚಿತ್ರವಾದ KGF ಚಿತ್ರವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಟಿಕೆಟ್ ಗಳನ್ನು ಅಡ್ವಾನ್ಸ್ ಆಗಿ ಬುಕ್ ಮಾಡಿದ್ದಾರೆ.

ಬೆಂಗಳೂರು ಹಾರರ್! KGF ಹವಾಕ್ಕೆ ಚೆಲ್ಲಿತು ಯುವಕನ ರಕ್ತ!

ಆದ್ರೆ ಬಿಡುಗಡೆಗೆ ಮುನ್ನವೇ ಕೆಜಿಎಫ್​ಗೆ ಸಂಕಷ್ಟ ಎದುರಾಗಿದೆ.ಕೆ.ಜಿ.ಎಫ್ ರಿಲೀಸ್ ಮಾಡದಂತೆ ತಡೆಯಾಜ್ಞೆ ನೀಡುವಂತೆ ರತನ್ ಹಾಗೂ ಲೋಹಿತ್ ಎಂಬುವರು ಸೆಷನ್ ಕೋರ್ಟ್ ಮೆಟ್ಟಿಲೇರಿದ್ದು, ಟೈಟಲ್ ಬದಲಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. 

ಕೆಜಿಎಪ್ ಚಿನ್ನದ ಗಣಿಯಾಗಿದ್ದು, ಅದನ್ನು ರಕ್ತಪಾತದ ಮೂಲಕ ತೋರಿಸಲು ಹೊರಟ್ಟಿದ್ದಾರೆ. ಹೀಗಾಗಿ ಕೆ.ಜಿಎಫ್ ಗೆ ಅಪಖ್ಯಾತಿ ಬರುತ್ತೆ. ಇದ್ರಿಂದ ಮುಂದಿನ ಪೀಳಿಗೆಗೆ ಕೆ.ಜಿಎಫ್ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತೆ. 

2000 ಥೇಟರ್‌ಗಳಲ್ಲಿ ಕೆಜಿಎಫ್ ರಿಲೀಸ್

ಹೀಗಾಗಿ ಕೆಜಿಎಫ್ ಟೈಟಲ್ ಬದಲಿಸಬೇಕು.  ಅಲ್ಲಿಯವರೆಗೂ ವರೆಗೂ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.