Asianet Suvarna News Asianet Suvarna News

ಜಮ್ಮು ಕಾಶ್ಮೀರ, ಲಡಾಕ್ ಸೇರಿ ದೇಶಲ್ಲೀಗ 9 ಕೇಂದ್ರಾಡಳಿತ ಪ್ರದೇಶ: ಏನಿದರ ಮಹತ್ವ?

ಭಾರತದಲ್ಲೀಗ 9 ಕೆಂದ್ರಾಡಳಿತ ಪ್ರದೇಶಗಳು| ರಾಜ್ಯಗಳ ಸಂಖ್ಯೆ ಇಳಿಕೆ| ಲಡಾಕ್, ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಹೊಸ ಸೇರ್ಪಡೆ| ಕೇಂದ್ರಾಳಿತ ಪ್ರದೇಶ ಅಂದ್ರೆ ಏನು? ಇಲ್ಲಿದೆ ವಿವರ

India having 9 union territories including Jammu Kashmir and Ladakh know about it
Author
Bangalore, First Published Aug 5, 2019, 3:59 PM IST

ನವದೆಹಲಿ[ಆ.05]: ಭಾರತದ ಸಂವಿಧಾನದ ಅನುಸಾರ ಭಾರತವು ರಾಜ್ಯಗಳ ಒಕ್ಕೂಟ. ಭಾರತದಲ್ಲಿ ಈವರೆಗೆ 29 ರಾಜ್ಯ ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿದ್ದವು. ಆದರೆ ಇನ್ಮುಂದೆ ಏಳು ಅಲ್ಲ ಬದಲಾಗಿ 9 ಕೇಂದ್ರಾಡಳಿತ ಪ್ರದೇಶಗಳು ಇರಲಿವೆ. ಯಾಕೆಂದರೆ ಸಂಸತ್ತಿನಲ್ಲಿ ಹೊರಡಿಸಿರುವ ಅಧಿಸೂಚನೆಯನ್ವಯ ಜಮ್ಮು ಕಾಶ್ಮೀರ ಹಾಗೂ ಲಡಾಕ್ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿವೆ. ಆರ್ಟಿಕಲ್ 370 ರದ್ದುಗೊಳಿಸುವ ಮೂಲಕ ಕೇಂದ್ರ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಇತ್ತ ರಾಜ್ಯಗಳ ಸಂಖ್ಯೆಯೂ ಇಳಿಕೆಯಾಗಿದ್ದು, ಇನ್ಮುಂದೆ ದೇಶದಲ್ಲಿ 28 ರಾಜ್ಯಗಳಿರಲಿವೆ.

ಆರ್ಟಿಕಲ್ 370 ರದ್ದು: ಮುಂದೇನು? ಜಮ್ಮು ಕಾಶ್ಮೀರದಲ್ಲಿ ಏನೆಲ್ಲಾ ಬದಲಾಗುತ್ತೆ?

ಕಳೆದೊಂದು ವಾರದಿಂದ ಕಾಶ್ಮೀರದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳು ಹಲವಾರು ಊಹಾ ಪೋಹಗಳನ್ನು ಹುಟ್ಟು ಹಾಕಿದ್ದವು. ಜಮ್ಮು ಕಾಶ್ಮೀರಕ್ಕೆ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಹಾಗೂ ಸೈನಿಕರನ್ನು ನಿಯೋಜಿಸಲಾಗಿತ್ತು. ಇದರ ಬೆನ್ನಲ್ಲೇ ಭಾನುವಾರ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸುವುದರೊಂದಿಗೆ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಅಲ್ಲದೇ ಜಮ್ಮು ಕಾಶ್ಮೀರದ ಮಾಜಿ ಸಿಎಂಗಳಾದ ಮಹಬೂಬಾ ಮುಫ್ತಿ ಹಾಗೂ ಓಮರ್ ಅಬ್ಧುಲ್ಲಾರನ್ನು ಗೃಹ ಬಂಧನ ಮಾಡಲಾಗಿತ್ತು. ಹೀಗಿರುವಾಗ ಕೆಂದ್ರ ಯಾವ ಹಜ್ಜೆ ಇಡಲಿದೆ ಎಂಬುವುದನ್ನು ಊಹಿಸುವುದೂ ಅಸಾಧ್ಯವಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಪ್ರಸ್ತಾವನೆ ಇಟ್ಟ ಬಳಿಕ ಎಲ್ಲಾ ಕುತೂಹಲಗಳಿಗೆ ತೆರೆ ಬಿದ್ದಿದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: ಕೇಂದ್ರದ ಐತಿಹಾಸಿಕ ನಿರ್ಣಯ

ಭಾರತದಲ್ಲಿರುವ ಕೇಂದ್ರಾಡಳಿತ ಪ್ರದೇಶಗಳು ಯಾವುವು?

ಸಂವಿಧಾನದ 370ನೇ ವಿಧಿ ರದ್ದುಗೊಳಿಸಿರುವುದರಿಂದ ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಇನ್ಮುಂದೆ ರಾಜ್ಯವಾಗಿ ಉಳಿಯದೆ, ಕೇಂದ್ರಾಡಳಿತ ಪ್ರದೇಶವಾಗಿ ಗುರುತಿಸಿಕೊಳ್ಳಲಿದೆ. ಜಮ್ಮು ಕಾಶ್ಮೀರದಿಂದ ಲಡಾಕ್‌ನ್ನು ಪ್ರತ್ಯೇಕಗೊಳಿಸಿದ್ದು, ಇವುಗಳನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಇದ್ದರೆ, ಲಡಾಕ್ ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಲಿದೆ. 

1 ಅಂಡಮಾನ್ ಹಾಗೂ ನಿಕೋಬಾರ್

2. ದೆಹಲಿ

3. ಪುದುಚೇರಿ

4. ದಾಮನ್ ಹಾಗೂ ದಿಯು

5. ದಾದರ್ ಹಾಗೂ ನಾಗರ್ ಹವೇಲಿ

6. ಲಕ್ಷದ್ವೀಪ

7. ಚಂಡೀಗಢ

8.ಜಮ್ಮು ಕಾಶ್ಮೀರ

9. ಲಡಾಕ್

ಕೇಂದ್ರಾಡಳಿತ ಪ್ರದೇಶ ಅಂದ್ರೆ ಏನು? ಮಹತ್ವ ಏನು?

ಕೇಂದ್ರಾಡಳಿತ ಪ್ರದೇಶವು  ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ. ಇವು ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತದೆ. ಭಾರತದ ಇತರೆ ರಾಜ್ಯಗಳು ಹೊಂದಿರುವಂತೆ ಇವುಗಳು ಪ್ರತ್ಯೇಕ ಸರ್ಕಾರಗಳನ್ನು ಹೊಂದಿರುವುದಿಲ್ಲ. ಆದರೆ ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನ ಸಭೆಯ ಸ್ಥಾನ ಕಲ್ಪಿಸಬಹುದು.ದೆಹಲಿ ಹಾಗು ಪುದುಚ್ಛೇರಿ ಸರ್ಕಾರಗಳು ಇದರ ಉದಾಹರಣೆಗಳಾಗಿವೆ, ಸದ್ಯ ಜಮ್ಮು ಕಾಶ್ಮೀರ ಕೂಡಾ ಇದಕ್ಕೆ ಸೇರ್ಪಡೆಯಾಗಿದೆ.

ಕಾಶ್ಮೀರದಲ್ಲಿ ಅಲ್ಲೋಲ ಕಲ್ಲೋಲ; ಮೋದಿ ಶಾ ತಂತ್ರವೇನು?

ಕೇಂದ್ರಾಡಳಿತ ಪ್ರದೆಶಗಳನ್ನೇಕೆ ಮಾಡಲಾಯ್ತು?

ಭಾರತದಲ್ಲಿ ಕೇಂದ್ರಾಡಳಿತ ಪ್ರದೇಶಗಳನ್ನೇಕೆ ಮಾಡಲಾಯ್ತು? ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಆದರೆ ಇದಕ್ಕೆ ಯಾವುದೇ ಸ್ಪಷ್ಟ ಕಾರಣಗಳಿಲ್ಲ.     ಚಿಕ್ಕ ಪ್ರದೇಶ, ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶ, ಭಿನ್ನ ಸಂಸ್ಕೃತಿ, ಆಡಳಿತಾತ್ಮಕ ಪ್ರಾಮುಖ್ಯತೆ ಹಾಗೂ ತತ್ವಗಳ ರಕ್ಷಣೆಯಿಂದ ಇವುಗಳನ್ನು ರೂಪಿಸಲಾಗಿದೆ.

ಕಾಶ್ಮೀರದಲ್ಲಿ ಮಧ್ಯರಾತ್ರಿ ನಿಷೇಧಾಜ್ಞೆ, ಇಂಟರ್ನೆಟ್ ಸ್ಥಗಿತ, ಒಮರ್, ಮುಫ್ತಿಗೆ ದಿಗ್ಭಂಧನ!

Follow Us:
Download App:
  • android
  • ios