ಬೆಂಗಳೂರು[ಜು.08]: ದೋಸ್ತಿ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದೆ. ಈವರೆಗೆ ಹಲವಾರು ಶಾಸಕರು/ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮೈತ್ರಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಆದರೀಗ ರಾಜೀನಾಮೆ ನೀಡಿದ ಸಚಿವ ಎಚ್. ನಾಗೇಶ್ ವಿಚಾರವಾಗಿ ಡಿ. ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಭಾರೀ ಅನುಮಾನ ಹುಟ್ಟು ಹಾಕಿದೆ.

"

ನನ್ನ ಬೆಂಬಲ ಬಿಜೆಪಿಗೆ, ಪಕ್ಷೇತರ ಶಾಸಕ ನಾಗೇಶ್: ಬಿಜೆಪಿ ಬಲ 106ಕ್ಕೇರಿಕೆ!

ಇಂದು ಶನಿವಾರ ಬೆಳಗ್ಗೆ ಮುಳಬಾಗಿಲು ಶಾಸಕ ಹಾಗೂ ಸಣ್ಣ ಕೈಗಾರಿಕೆ ಖಾತೆ ಸಚಿವ ಎಚ್. ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ ತಮ್ಮ ರಾಜೀನಾಮೆ ಪತ್ರದಲ್ಲಿ ಎಚ್. ಡಿ . ಕುಮಾರಸ್ವಾಮಿ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುತ್ತೇನೆ. ಇನ್ಮುಂದೆ ಬಿಜೆಪಿಗೆ ನನ್ನ ಬೆಂಬಲವಿರುತ್ತದೆ' ಎಂದು ತಿಳಿಸಿದ್ದರು. ಆದರೆ ರಾಜೀನಾಮೆ ಸಲ್ಲಿಸಿದ್ದ ಎಚ್. ನಾಗೇಶ್ ಮುಂಬೈಗೆ ತೆರಳುವ ಮುನ್ನ ಅವರನ್ನು ಭೇಟಿಯಾಗಿ ಮನವೊಲಿಸಲು ಕಾಂಗ್ರೆಸ್ ನಾಯಕರು HAL ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ್ದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೀಗ ಈ ಪ್ರಸಂಗದ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿ. ಕೆ. ಶಿವಕುಮಾರ್ 'ನಾಗೇಶ್ ನನಗೆ ಬೇರೆಯವರ ಕೈಯ್ಯಲ್ಲಿ ಕರೆ ಮಾಡಿಸಿದ್ರು. ಸಂತೋಷ್ ನಮ್ಮನ್ನು ಕಿಡ್ನಾಪ್ ಮಾಡಿಸಿ ಮುಂಬೈ ಕರೆದುಕೊಂಡು ಹೋಗ್ತಿದ್ದಾರೆ 1 ಗಂಟೆಯೊಳಗೆ ವಿಮಾನ ನಿಲ್ದಾಣಕ್ಕೆ ಬನ್ನಿ ಎಂದು ಕಣ್ಣೀರು ಹಾಕಿದ್ದರು. ಆದರೆ 1 ಗಂಟೆಗೆ ಇದ್ದ ವಿಮಾನ ಬೇಗ ಟೇಕ್ ಆಫ್ ಮಾಡಿಸಿದ್ದಾರೆ. ಇದು ಖಂಡನೀಯ. ಆದರೆ ನಮ್ಮ ಪ್ರಯತ್ನ ನಾವು ಮಾಡ್ತೀವಿ. ನಾಗೇಶ್ ರಾಜೀನಾಮೆ ಪತ್ರ ಹಿಂಪಡೆಯುತ್ತಾರೆ ಎನ್ನುವ ವಿಶ್ವಾಸವಿದೆ' ಎಂದಿದ್ದಾರೆ.