ಬೆಂಗಳೂರು[ಜು.08]: ರಾಜ್ಯ ರಾಜಕೀಯದಲ್ಲಿ ಮಹತ್ವದ ತಿರುವುದಗಳು ಕಾಣಲಾರಂಭಿಸಿವೆ. ಕಳೆದೊಂದು ವಾರದಿಂದ ಶಾಸಕರ ರಾಜೀನಾಮೆ ಪರ್ವ ಆರಂಭವಾಗಿದ್ದು, ಅತ್ತ ಮೈತ್ರಿ ನಾಯಕರು ಸರ್ಕಾರ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ಇಂದು ಸೋಮವಾರ ಇತ್ತೀಚೆಗಷ್ಟೇ ಸಚಿವ ಸ್ಥಾನ ಪಡೆದಿದ್ದ ಮುಳಬಾಗಿಲಿನ ಪಕ್ಷೇತರ ಶಾಸಕ ಎಚ್. ನಾಗೇಶ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸ್ ಪಡೆದಿದ್ದಾರೆ. ಅಲ್ಲದೇ ತಾವು ಬಿಜೆಪಿಯನ್ನು ಬೆಂಬಲಿಸುವುದಾಗಿ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೌದು ಸುವರ್ಣ ನ್ಯೂಸ್‌ಗೆ ಎಚ್. ನಾಗೇಶ್ ರಾಜೀನಾಮೆ ಪತ್ರ ಲಭಿಸಿದ್ದು, 'ನಾನು ಎಚ್. ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ನೀಡುತ್ತಿದ್ದ ಬೆಂಬಲವನ್ನು ಹಿಂಪಡೆಯುತ್ತಿದ್ದೇನೆ. ಇನ್ಮುಂದೆ ನನ್ನ ಬೆಂಬಲ ಭಾರತೀಯ ಜನತಾ ಪಾರ್ಟಿಗೆ ನೀಡುತ್ತೇನೆ' ಎಂದು ಬರೆದಿದ್ದಾರೆ.

ಎಚ್. ನಾಗೇಶ್ ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯಿಂದ ಸರ್ಕಾರದ ಸಂಖ್ಯಾ ಬಲ ಅಲ್ಪಮತಕ್ಕೆ ಕುಸಿಯುವ ಭೀತಿ ಎದುರಾಗಿದ್ದು, ದೋಸ್ತಿ ಸರ್ಕಾರ ಬೀಳುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ.

ಸಂಖ್ಯಾಬಲ ಎಷ್ಟಿದೆ?

ಸದನದ ಒಟ್ಟು ಬಲ: 224

ರಾಜೀನಾಮೆ ಬಳಿಕ ಸದನದ ಬಲ: 210

ಸದನದ ಬಲ: 210

ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ಸಂಖ್ಯೆ: 106

ಬಿಜೆಪಿ ಬಳಿ ಇರುವ ಸಂಖ್ಯಾ ಬಲ: 106

ಮೈತ್ರಿ ಸರ್ಕಾರದ ಮತ: 104