ಐಎಎಸ್ ಪ್ರಥಮ ರ್ಯಾಂಕ್ ಟೀನಾ ಪತಿಯೊಂದಿಗೆ ಲುಂಗಿ ಡ್ಯಾನ್ಸ್
ತರಬೇತಿ ಮುಕ್ತಾಯದ ಬಳಿಕ ಉತ್ತರಾಖಂಡ್‌ನ ಮಸೂರಿಯಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಅಕಾಡೆಮಿಯಲ್ಲಿ ನಡೆದ ಮುಕ್ತಾಯ ಸಮಾರಂಭದ ವೇಳೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಟೀನಾ, ತಮ್ಮ ಪತಿ ಆಥರ್ ಅಮೀರ್ ಶಫಿ ಖಾನ್ ಜೊತೆ ಲುಂಗಿ ಡ್ಯಾನ್ಸ್ ಮಾಡಿದ್ದಾರೆ.
ಮಸೂರಿ(ಉತ್ತರಾಖಂಡ್): 2015ನೇ ಸಾಲಿನ ಲೋಕಸೇವಾ ಪರೀಕ್ಷೆಯಲ್ಲಿ ಮೊದಲ ರಾರಯಂಕ್ ಸಂಪಾದಿಸಿದ್ದ ಟೀನಾ ಡಾಬಿ, ಐಎಎಸ್ ಅಧಿಕಾರಿಗಳಿಗೆ ನೀಡುವ ತರಬೇತಿಯಲ್ಲೂ ಮೊದಲ ಸ್ಥಾನ ಪಡೆದು ರಾಷ್ಟ್ರಪತಿಗಳ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ.
ಇದೇ ವೇಳೆ ತರಬೇತಿ ಮುಕ್ತಾಯದ ಬಳಿಕ ಉತ್ತರಾಖಂಡ್‌ನ ಮಸೂರಿಯಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಅಕಾಡೆಮಿಯಲ್ಲಿ ನಡೆದ ಮುಕ್ತಾಯ ಸಮಾರಂಭದ ವೇಳೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಟೀನಾ, ತಮ್ಮ ಪತಿ ಆಥರ್ ಅಮೀರ್ ಶಫಿ ಖಾನ್ ಜೊತೆ ಲುಂಗಿ ಡ್ಯಾನ್ಸ್ ಮಾಡಿದ್ದಾರೆ.
ಈ ಕುರಿತ ಫೋಟೋಗಳನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. 2016ರಲ್ಲಿ ತರಬೇತಿ ವೇಳೆ ಟೀನಾ ಮತ್ತು ಶಫಿ ನಡುವೆ ಪ್ರೇಮಾಂಕುರವಾಗಿ ಬಳಿಕ ಇಬ್ಬರೂ ವಿವಾಹವಾಗಿದ್ದರು.