ಬೆಂಗಳೂರು : ತಮಿಳುನಾಡಿನಲ್ಲಿ ವೇಶ್ಯೆಯಾಗಿದ್ದವಳನ್ನು ಮದುವೆಯಾಗಿ ಹೊಸ ಬಾಳು ನೀಡಿದೆ. ಕೋಟ್ಯಂತರ ಮೌಲ್ಯದ ಆಸ್ತಿ  ಖರೀದಿಸಿಕೊಟ್ಟೆ. ಆದರೆ, ಪತ್ನಿ ಮಾತ್ರ ತನ್ನ ಹಿಂದಿನ ವೃತ್ತಿ ತೊರೆಯಲಿಲ್ಲ. ನಾನಿಲ್ಲದ ವೇಳೆ ಮನೆಯಲ್ಲಿಯೇ ವೇಶ್ಯಾವಾಟಿಕೆ ಶುರುವಿಟ್ಟುಕೊಂಡಳು. 

ಇದರಿಂದ ಬೇಸತ್ತು ವಿಚ್ಛೇದನ ಕೇಳಿದ್ದಕ್ಕೆ ವರದಕ್ಷಿಣೆ ಕಿರುಕುಳ, ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಕೇಸು ದಾಖಲಿಸಿದಳು. ವ್ಯಕ್ತಿಯೊಬ್ಬ ತನ್ನ ಪತ್ನಿ ವಿರುದ್ಧ ಇಂತಹ  ಆರೋಪ ಮಾಡಿ ಹೈಕೋರ್ಟ್ ಮೆಟ್ಟಿಲೇರಿ ದ್ದಾನೆ. ಹೈಕೋರ್ಟ್ ಆ ವ್ಯಕ್ತಿಯ ವಿರುದ್ಧ ಪತ್ನಿ ದಾಖಲಿಸಿದ ದೂರಿಗೆ ಎಂಟು ವಾರ ತಡೆಯಾಜ್ಞೆ ನೀಡಿದೆ. ಜತೆಗೆ, ಆತನ ಪತ್ನಿ ಮತ್ತು ದೂರು ದಾಖಲಿಸಿಕೊಂಡಿರುವ ನಗರದ ಆಡುಗೋಡಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ. 

ನಂಜನಗೂಡಿನ ರಾಸಲೀಲೆ ಜೋಡಿ, ಗ್ರಾಮಸ್ಥರ ಕೈಗೆ ಸಿಕ್ಕಿ ಬಿತ್ತು ನೋಡಿ

ಚೆನ್ನೈ ವೇಶ್ಯಾವಾಟಿಕೆಯಲ್ಲಿ ಪರಿಚಯ:  ನಾನು (ರವಿ) 2010 ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸ್ನೇಹಿತರ ಒತ್ತಾಯದಿಂದ ಅಲ್ಲಿನ ವೇಶ್ಯಾ ವಾಟಿಕೆ ಪ್ರದೇಶ ಅಳ್ವರ್‌ಪೇಟೆಗೆ ಹೋಗಿದ್ದೆ. ಆಗ ಕರ್ನಾಟಕದ ಸುಧಾ (ಇಬ್ಬರ ಹೆಸರೂ ಬದಲಿಸಲಾಗಿದೆ) ಪರಿಚಯವಾದಳು. ಸಣ್ಣವಳಿ ದ್ದಾಗಲೇ ತಂದೆ-ತಾಯಿ ಸಾವನ್ನಪ್ಪಿದ ಕಾರಣ ಜೀವನ ನಡೆಸಲು ಗತಿಯಿಲ್ಲದೆ ವೇಶ್ಯಾವಾಟಿ ಕೆಯಲ್ಲಿ ತೊಡಗಿದೆ ಎಂದು ಆಕೆ ತಿಳಿಸಿದಳು. 

ಇದರಿಂದ ಅನುಕಂಪ ಉಂಟಾಗಿ ಆಕೆಗೆ ಸ್ವಲ್ಪ ಹಣ ಕೊಟ್ಟು, ಏನಾದರೂ ಸಹಾಯ ಬೇಕಾದರೆ ಕರೆ ಮಾಡುವಂತೆ ಹೇಳಿದ್ದೆ. ಜತೆಗೆ, ಮೈಮಾರಿಕೊಳ್ಳುವುದನ್ನು ಬಿಟ್ಟು ಬೇರೆ ವೃತ್ತಿ ಯಲ್ಲಿ ತೊಡಗಿ ಸಭ್ಯ ಜೀವನ ನಡೆಸಲು ಸೂಚಿ ಸಿದ್ದೆ. ಕೆಲ ದಿನಗಳ ಬಳಿಕ ನನಗೆ ಕರೆ ಮಾಡಿದ್ದ ಸುಧಾ, ಸಭ್ಯ ಜೀವನ ನಡೆಸುತ್ತೇನೆ. ಅದಕ್ಕಾಗಿ ಹಣಕಾಸು ಸಹಾಯ ಮಾಡಲು ಕೋರಿದಳು. 

ಬೆದರಿಸಿ ಮದುವೆಯಾದಳು: ಆಕೆಯ ಮಾತು ನಂಬಿ ಹಣಕಾಸು ಸಹಾಯ ಮಾಡಿದೆ. ನಂತರ 2011 ರಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಲು 85  ಸಾವಿರ ರು. ನೀಡಿದೆ. ಕೃತಜ್ಞತೆಯಿಂದ ಪದೇ ಪದೇ ಕರೆ ಮಾಡಿ ಊಟಕ್ಕೆ ಮನೆಗೆ ಬರಲು ಕರೆಯುತ್ತಿದ್ದಳು. ಒತ್ತಾಯ ಹೆಚ್ಚಾದ ಕಾರಣಕ್ಕೆ ಮನೆಗೆ ಹೋಗಿದ್ದೆ. ಹೀಗೆ ಸ್ನೇಹ ಮುಂದುವರಿದಾಗ ತನ್ನನ್ನು ಮದುವೆಯಾಗಿ ಹೊಸ ಜೀವನ ನೀಡುವಂತೆ ಕೇಳಿದಳು. ಆಗುವುದಿಲ್ಲ ಎಂದಾಗ ಸುಳ್ಳು ಅತ್ಯಾಚಾರ ಕೇಸು ದಾಖಲಿಸುವುದಾಗಿ ಬೆದರಿಸಿದಳು. ತಂದೆ-ತಾಯಿ ಗೌರವ ಹಾಳಾಗುತ್ತದೆ ಎಂಬ ಭಯದಿಂದ 2014 ರಲ್ಲಿ ದೇವಸ್ಥಾನದಲ್ಲಿ ಗೌಪ್ಯವಾಗಿ ಆಕೆಯನ್ನು ಮದುವೆಯಾದೆ.

ಚೀನಾ ಮಾರುಕಟ್ಟೆಯಲ್ಲಿ ಹೆಣ್ಮಕ್ಕಳ ಮಾರಾಟ

ಕೋಟ್ಯಂತರ ಮೌಲ್ಯದ ಆಸ್ತಿ ಖರೀದಿ:
ಮತ್ತೆ ವೇಶ್ಯಾವೃತ್ತಿಯಲ್ಲಿ ತೊಡಗುವುದಿಲ್ಲ ಎಂದು ಪತ್ನಿ ಭರವಸೆ ನೀಡಿದ್ದರಿಂದ ಸಂಸಾರ ಸಾಗಿಸಿದೆ. ನಮಗೆ ಗಂಡು ಮಗು ಜನಿಸಿತು. ನಂತರ ಸುಧಾ ಹೆಸರಿನಲ್ಲಿ ಬೆಂಗಳೂರಿನಲ್ಲಿ 65 ಲಕ್ಷ ರು. ಮೌಲ್ಯದ ಮನೆ ಹಾಗೂ ಇನ್ನೆರಡು ಆಸ್ತಿ, ಧಾರವಾಡದಲ್ಲಿ 75 ಲಕ್ಷ ಮೌಲ್ಯದ ಫ್ಲಾಟ್ ಖರೀದಿಸಿದೆ. ಒಟ್ಟು 2.5 ಕೋಟಿ ರು. ಮೌಲ್ಯದ ಆಸ್ತಿ ಕೊಡಿಸಿದ್ದೇನೆ. ಅದರಿಂದ ಆಕೆಗೆ ಮಾಸಿಕ 85 ಸಾವಿರ ರು. ಬಾಡಿಗೆ ಬರುತ್ತದೆ. ಇಷ್ಟಾದರೂ ಸುಧಾ ಹಿಂದಿನ ವೃತ್ತಿ ಬಿಡಲಿಲ್ಲ.

ಮತ್ತೆ ಹಳೆ ವೃತ್ತಿ ಪ್ರಶ್ನಿಸಿದ್ದಕ್ಕೆ ಕೇಸ್: 2016 ರಲ್ಲಿ ಬೆಂಗಳೂರಿನ ಸುಧಾ ನಿವಾಸಕ್ಕೆ ಹೋದಾಗ ಸುಮಾರು ಹೊತ್ತು ಬೆಲ್ ಮಾಡಿದರೂ ಬಾಗಿಲು ತೆರೆಯಲಿಲ್ಲ. 40 ನಿಮಿಷಗಳ ನಂತರ ಅಪರಿಚಿತ ವ್ಯಕ್ತಿಗಳು ಮನೆಯಿಂದ ಹೊರಬಂದರು. ಆ ಬಗ್ಗೆ ಪ್ರಶ್ನಿಸಿದಾಗ, ಅವರು ನನ್ನ ಹಳೆ ಗಿರಾಕಿಗಳು ಹಾಗೂ ಐದು ವರ್ಷ ಗಳಿಂದ ಪರಿಚಯ ಇದ್ದಾರೆ. ಮನೆಗೆ ಬರದಂತೆ ಅವರಿಗೆ ಹೇಳಲಾಗದು ಎಂದು ಹೇಳಿದಳು. 

ಹೆಸರಿಗೆ ಪಿಜಿ: ಒಳಗೆ ನಡೆಯುತ್ತೆ ವೇಶ್ಯಾವಾಟಿಕೆ ದಂಧೆ

ಇದರಿಂದ ಆಘಾತ ಹಾಗೂ ಬೇಸರಗೊಂಡು ಮನೆ ಬಿಟ್ಟು ಬಂದೆ. ಒಂದೂವರೆ ವರ್ಷದಿಂದ ಸುಧಾ ಮನೆಗೆ ಹೋಗಿಲ್ಲ. ಮನೆಗೆ ಬರಲು ಹಾಗೂ ಮತ್ತಷ್ಟು ಹಣ ನೀಡುವಂತೆ ನಿತ್ಯ ಪೀಡಿಸತೊಡಗಿದಳು. ಅದಕ್ಕೆ ನಿರಾಕರಿಸಿದಾಗ ಮಗುವನ್ನು ಕೊಲ್ಲುತ್ತೇನೆ ಹಾಗೂ ಪೊಲೀಸರಿಗೆ ಸುಳ್ಳು ದೂರು ನೀಡುತ್ತೇನೆ ಎಂದು ಕಿರುಕುಳ ನೀಡುತ್ತಿದ್ದಳು. ಅದಕ್ಕೆ ಕಿಮ್ಮತ್ತು ನೀಡದ್ದಕ್ಕೆ 2018 ರ ಆ. 1ರಂದು ನನ್ನ ವಿರುದ್ಧ ವಂಚನೆ, ಅವಮಾನ, ಬೆದರಿಕೆ, ವರದಕ್ಷಿಣೆ ಕಿರುಕುಳ ಮತ್ತು ಜಾತಿ ನಿಂದನೆ ದೂರು ದಾಖಲಿಸಿದ್ದಾಳೆ ಎಂದು ರವಿ ಅರ್ಜಿಯಲ್ಲಿ ದೂರಿದ್ದಾರೆ.

ವರದಿ :  ವೆಂಕಟೇಶ್ ಕಲಿಪಿ