Asianet Suvarna News Asianet Suvarna News

ಹೊಸ ಮನೆಗೆ ಅಡಿಪಾಯ ಹಾಕಲು ನೆಲ ಅಗೆಯುತ್ತಿದ್ದಾಗ 400 ವರ್ಷಗಳಷ್ಟು ಪುರಾತನ ವಿಷ್ಣು, ಲಕ್ಷ್ಮಿ ವಿಗ್ರಹ ಪತ್ತೆ

ಹೊಸ ಮನೆಗೆ ಅಡಿಪಾಯ ಹಾಕಲು ನೆಲ ಸಮ ಮಾಡುತ್ತಿದ್ದಾಗ  3 ಶತಮಾನಕ್ಕೂ ಹಿಂದಿನ ಹಿಂದೂ ದೇವರ ಕಂಚಿನ ಪ್ರತಿಮೆಗಳು ಪತ್ತೆಯಾಗಿವೆ. ಹರ್ಯಾಣ ರಾಜ್ಯದ ಮನ್ಸೇರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

3 centuries old lord vishnu and goddess lakshmi bronze idol Found while digging to lay foundation of new house in Manesar akb
Author
First Published Apr 25, 2024, 10:11 AM IST | Last Updated Apr 25, 2024, 10:11 AM IST

ಮನ್ಸೇರ್‌: ಹೊಸ ಮನೆಗೆ ಅಡಿಪಾಯ ಹಾಕಲು ನೆಲ ಸಮ ಮಾಡುತ್ತಿದ್ದಾಗ  3 ಶತಮಾನಕ್ಕೂ ಹಿಂದಿನ ಹಿಂದೂ ದೇವರ ಕಂಚಿನ ಪ್ರತಿಮೆಗಳು ಪತ್ತೆಯಾಗಿವೆ. ಹರ್ಯಾಣ ರಾಜ್ಯದ ಮನ್ಸೇರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿಕ್ಕಿರುವ ಕಂಚಿನ ಪ್ರತಿಮೆಗಳನ್ನು ಹರ್ಯಾಣ ಸರ್ಕಾರದ ವಶಕ್ಕೆ ನೀಡಲಾಗಿದ್ದು, ಇವುಗಳು 400 ವರ್ಷಗಳಿಗೂ ಹಳೆಯದಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇದರ ನಿಜವಾದ ಕಾಲಮಾನವನ್ನು ಅಧ್ಯಯನದಿಂದಷ್ಟೇ ತಿಳಿಯಬೇಕಿದೆ ಎಂದು ಪುರಾತತ್ವ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಮನ್ಸೇರ್‌ನ ಬಘಂಕಿ ಗ್ರಾಮದಲ್ಲಿ 3ನೇ ಶತಮಾನಕ್ಕಿಂತಲೂ ಹಿಂದಿನದೆಂದು ಅಂದಾಜಿಸಲಾದ ಲಕ್ಷ್ಮಿ ದೇವಿ ಹಾಗೂ ಭಗವಾನ್ ವಿಷ್ಣುವಿನ ಪ್ರತಿಮೆ ಸಿಕ್ಕಿದ್ದು, ಹೊಸ ಮನೆಗೆ ಅಡಿಪಾಯ ಹಾಕಲು ನೆಲ ಸಮ ಮಾಡುತ್ತಿದ್ದಾಗ ಈ ಪ್ರತಿಮೆಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಒಟ್ಟು ಮೂರು ಪ್ರತಿಮೆಗಳು ಸಿಕ್ಕಿದ್ದು, ಒಂದು ಲಕ್ಷ್ಮಿದೇವಿಯ ಪ್ರತಿಮೆ, ಇನ್ನೊಂದು ಭಗವಾನ್ ವಿಷ್ಣು ಹಾಗೂ ಮತ್ತೊಂದು ಇಬ್ಬರು ದೇವರು ಜೊತೆಯಾಗಿ ಕುಳಿತಿರುವ ಪ್ರತಿಮೆಯಾಗಿದೆ. ಇವುಗಳನ್ನು ಹರ್ಯಾಣ ಸರ್ಕಾರದ ವಶಕ್ಕೆ ನೀಡಲಾಗಿದೆ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.  

ದೇವಸ್ಥಾನಕ್ಕೆ ಹೋಗಿ ಆನೆ ಕಾಲಡಿ ಸಿಲುಕಿದ ಭಕ್ತ... ಆತನ ಪೇಚಾಟ ನೋಡಿ

ನಮ್ಮ ಪ್ರಾಥಮಿಕ  ತನಿಖೆಯ ಪ್ರಕಾರ, ಕಂಚಿನ ಪ್ರತಿಮೆಗಳು 400 ವರ್ಷಗಳಿಗಿಂತಲೂ ಹಳೆಯವು ಎಂದು ನಂಬಲಾಗಿದೆ. ಸರಿಯಾದ ಅಧ್ಯಯನವನ್ನು ನಡೆಸಿದ ನಂತರ ಪ್ರತಿಮೆಯ ಕಾಲಘಟ್ಟವನ್ನು ನಿರ್ಣಯ ಮಾಡಲಾಗುತ್ತದೆ. ಸದ್ಯಕ್ಕೆ ಪ್ರತಿಮೆಗಳನ್ನು ನಮ್ಮ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತದೆ. ಅವು ಪತ್ತೆಯಾದ ಸ್ಥಳವನ್ನು ನಾವು ಪರಿಶೀಲಿಸಿದ್ದೇವೆ ಮತ್ತು ಅವುಗಳನ್ನು ಸುಮಾರು 400 ವರ್ಷಗಳ ಹಿಂದೆ ಗ್ರಾಮಕ್ಕೆ ತರಲಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಹರಿಯಾಣ ಸರ್ಕಾರದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆಯ ಉಪ ನಿರ್ದೇಶಕ ಡಾ.ಬನಾನಿ ಭಟ್ಟಾಚಾರ್ಯ ಪ್ರತಿಕ್ರಿಯಿಸಿದ್ದಾರೆ. 

ಪ್ರಭು ದಯಾಲ್  ಅವರಿಗೆ ಸೇರಿದ ಫ್ಲಾಟ್‌ನಲ್ಲಿ ಈ ಘಟನೆ ನಡೆದಿದೆ. ಅವರು ಇತ್ತೀಚೆಗೆ ಬಾಘಂಕಿ ಗ್ರಾಮದಲ್ಲಿ ಜಮೀನು ಖರೀದಿಸಿ ಮನೆ ಕಟ್ಟಲು ನಿರ್ಧರಿಸಿದ್ದರು. ಅದಕ್ಕಾಗಿ ಕಳೆದ ವಾರ ತಮ್ಮ ಹೊಸ ಮನೆಗೆ ಅಡಿಪಾಯ ಹಾಕಲು ಜೆಸಿಬಿ ಯಂತ್ರದ ಸಹಾಯದಿಂದ ಉತ್ಖನನ ಕಾರ್ಯವನ್ನು ಆರಂಭಿಸಿದರು.  ಈ ಸಮಯದಲ್ಲಿ ಮೂರು ಪ್ರತಿಮೆಗಳು ಪತ್ತೆಯಾಗಿವೆ.

ಆಸ್ಟ್ರೇಲಿಯಾದಿಂದ 29 ಪುರಾತನ ವಿಗ್ರಹಗಳು ಭಾರತದ ಮಡಿಲಿಗೆ

ಪೊಲೀಸರ ಪ್ರಕಾರ ದಯಾಲ್ ಅವರಿಗೆ ಇಲ್ಲಿ ಚಿನ್ನದ ಮಡಿಕೆ ಹಾಗೂ ನಾಣ್ಯಗಳ ಸಂಗ್ರಹವೂ ಕೂಡ ಸಿಕ್ಕಿದ್ದು,  ಆದರೆ ಅವುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಪ್ರತಿಮೆಗಳು ಸಿಕ್ಕ ನಂತರ ಗ್ರಾಮಸ್ಥರು ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲು ಮನಸ್ಸು ಮಾಡಿದ್ದಾರೆ. ಇದರಿಂದ ಭೂಮಿಯನ್ನು ಖರೀದಿಸಿದ ಮಾಲೀಕರು ಹಾಗೂ ಗ್ರಾಮಸ್ಥರ ಮಧ್ಯೆ ಜಗಳವಾಗಿದೆ. ಈ ನಡುವೆ ಈ ಸ್ಥಳವನ್ನು ಸಮತಟ್ಟು ಮಾಡಿದ ಜೆಸಿಬಿ ಚಾಲಕ ಬಿಲಾಸ್‌ಪುರ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಇದಾದ ನಂತರ ಮನ್ಸೇರ್ ಪೊಲೀಸರ ತಂಡ ಸ್ಥಳಕ್ಕೆ ಬಂದು ಪ್ರತಿಮೆ ವಶಕ್ಕೆ ಪಡೆದಿದ್ದಾರೆ. ನಂತರ ಪಂಚಕುಲದಲ್ಲಿರುವ ಪುರಾತತ್ವ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಇವುಗಳು ಬಹಳ ಹಳೆಯ ಪ್ರತಿಮೆಗಳು ಎಂದು ಕಂಡು ಬರುತ್ತಿವೆ ಇವುಗಳ ಬಗ್ಗೆ ತಪಾಸಣೆ ಮಾಡುವಂತೆ ಕೇಳಿದ್ದೇವೆ. ಇದಾದ ನಂತರ ಸ್ಥಳಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ನಂತರ ನಮ್ಮ ವಶದಲ್ಲಿದ್ದ ಪ್ರತಿಮೆಗಳನ್ನು ಅವರಿಗೆ ನೀಡಿದ್ದೇವೆ ಎಂದು ಅಸಿಸ್ಟೆಂಟ್ ಕಮೀಷನರ್  ಸುರೇಂದ್ರ ಸಿಂಗ್ ಹೇಳಿದ್ದಾರೆ.

ನನಗೆ ಈ ವಿಚಾರದ ಬಗ್ಗೆಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಗೊತ್ತಿರಲಿಲ್ಲ, ನಾನು ಭೂಮಿ ನನಗೆ ಸೇರಿದ್ದಾಗಿದ್ದರಿಂದ ಈ ಪ್ರತಿಮೆಗಳು ನನಗೆ ಸೇರಿದ್ದು ಎಂದು ಭಾವಿಸಿದ್ದೆ ಎಂದು ಹೇಳಿದ್ದಾರೆ. ಆದರೆ ಚಿನ್ನದ ಮಡಿಕೆ ಹಾಗೂ ನಾಣ್ಯಗಳು ಸಿಕ್ಕ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.  

Latest Videos
Follow Us:
Download App:
  • android
  • ios