ಇಸ್ಲಮಾಬಾದ್[ಮೇ.17]: ಪಾಕ್ ಯುವತಿಯರೊಂದಿಗೆ ನಕಲಿ ಮದುವೆಯಾಗಿ ಅವರನ್ನು ತಮ್ಮ ದೇಶಕೊಯ್ದು ಬಳಿಕ ವರನ್ನು ಮಾರಾಟ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದೆ. ಪಾಕ್ ಹಾಗೂ ಚೀನಾ ಸರ್ಕಾರ ಈ ವಿಚಾರವಾಗಿ ಮತ್ತಷ್ಟು ಎಚ್ಚರ ವಹಿಸಿದ್ದು, ಇದು ಮಾನವ ಕಳ್ಳ ಸಾಗಾಟನೆ ಕಡೆಯೂ ಬೊಟ್ಟು ಮಾಡುತ್ತಿದೆ.

ವರದಿಗಳನ್ವಯ ಮಾನವ ಕಳ್ಳ ಸಾಗಣೆಯ ಈ ಜಾಲ ನಡೆಸುವವರು ವಿಶೇಷವಾಗಿ ಪಾಕಿಸ್ತಾನದ ಬಡ ವರ್ಗದ ಹೆಣ್ಮಕ್ಕಳನ್ನೇ ಟಾರ್ಗೆಟ್ ಮಾಡುತ್ತದೆ. ಐಷಾರಾಮಿ ಜೀವನದ ಆಮಿಷವೊಡ್ಡಿ ಮೊದಲು ಚೀನಾಗೆ ರವಾನಿಸಲಾಗುತ್ತದೆ. ಬಳಿಕ ಅಲ್ಲಿ ವರನ್ನು ಮಾರಾಟ ಮಾಡಿ ವೇಶ್ಯವಾಟಿಕೆ ದಂಧೆಗೆ ತಳ್ಳಲಾಗುತ್ತದೆ.

ಪಾಕಿಸ್ತಾನ ಇಂತಹ ಮಾನವ ಸಾಗಣೆ ನಡೆಸುತ್ತಿದ್ದ 12 ಮಂದಿ ಅನುಮಾನಾಸ್ಪದ ವ್ಯಕ್ತಗಳನ್ನು ಬಂಧಿಸಿದ್ದಾರೆ. ಇಷ್ಟೇ ಅಲ್ಲದೇ, ಪಾಕ್ ಯುವತಿಯನ್ನು ಮದುವೆ ಮಾಡಿಸುತ್ತಿದ್ದ ಓರ್ವ ಪುರುಷ ಹಾಗೂ ಮಹಿಳೆಯನ್ನೂ ಇಲ್ಲಿನ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ ತಾವು ಈಗಾಗಲೇ 30ಕ್ಕೂ ಅಧಿಕ ಪಾಕ್ ಯುವತಿಯರನ್ನು ಚೀನಾಗೆ ರವಾನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಅಲ್ಲಿ ಅವರನ್ನು ವೇಶ್ಯವಾಟಿಕೆ ದಂಧೆಯಲ್ಲಿ ತೊಡಗಿಸಿರುವುದಾಗಿಯೂ ತಿಳಿಸಿದ್ದಾರೆ. ಈ ವರದಿ ಸದ್ದು ಮಾಡಿದ ಬೆನ್ನಲ್ಲೇ ಇಸ್ಲಮಾಬಾದ್ ನಲ್ಲಿರುವ ಚೀನಾ ರಾಯಭಾರಿ ಕಚೇರಿಯು 90ಕ್ಕೂ ಅಧಿಕ ಪಾಕ್ ವಧುಗಳ ವೀಜಾವನ್ನು ತಡೆ ಹಿಡಿದಿದೆ.