Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: 9 ತಿಂಗಳ ಹಿಂದೆ ಶೆಟ್ಟರ್‌ ದಂಪತಿ ಅಳ್ತಾ ಬಂದಿದ್ರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌

ಲಕ್ಷ್ಮೀ ಹೆಬ್ಬಾಳ್ಳರ್ ಹೇಳಿಕೆಗೆ ಕಿಡಿ ಕಾರಿದ ಜಗದೀಶ್ ಶೆಟ್ಟರ್, ನನ್ನ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಂದಾಗಲೇ ಲಕ್ಷ್ಮೀ ಹೆಬ್ಬಾಳ್ವರ್ ಈ ರೀತಿ ಮಾತನಾಡ ಬಹುದಿತ್ತು. ಆದರೆ, ಈಗ ಯಾಕೆ ಆ ರೀತಿ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

Minister Lakshmi Hebbalkar Talks Over Belagavi BJP Candidate Jagadish Shettar grg
Author
First Published Apr 25, 2024, 10:17 AM IST | Last Updated Apr 25, 2024, 10:16 AM IST

ಬೆಳಗಾವಿ(ಏ.25):  ಬೆಳಗಾವಿ ಒಂಬತ್ತು ತಿಂಗಳ ಹಿಂದೆ ಗಂಡ-ಹೆಂಡತಿ ಎಲ್ಲರೂ ಅಳುತ್ತಾ ನಮ್ಮ ಬಳಿ ಬಂದಿದ್ದರು ಎಂದು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್‌ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ವಾಗ್ದಾಳಿ ನಡೆಸಿದ್ದಾರೆ. 

ಬೈಲಹೊಂಗಲ ಮತಕ್ಷೇತ್ರದ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ಬರೀ ಒಂಬತ್ತು ತಿಂಗಳ ಹಿಂದೆ ಬಿಜೆಪಿ ನಮಗೆ ಮೋಸ, ಅನ್ಯಾಯ ಮಾಡಿದೆ ಎಂದು ಹೇಳಿಕೊಂಡು ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು. ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ನನಗೆ ಅನ್ಯಾಯ ಮಾಡಿದ್ದಾರೆ ಅಂತ ಶೆಟ್ಟರ್ ದಂಪತಿ ಅಳುತ್ತಾ ನಮ್ಮ ಬಳಿ ಬಂದಿದ್ದರು. ಅವರು ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಸ್ಥಾನಮಾನ ಕೊಟ್ಟೆವು, ಇದೀಗ ಬಿಜೆಪಿಗೆ ವಾಪಸ್ ಹೋಗಿ ನಮ್ಮ ವಿರುದ್ಧ ಮಾತನಾಡುತ್ತಿದ್ದಾರೆ. ಇವರಿಗೆ ಮಾನ, ಮರ್ಯಾದೆ ಇದೆಯೇ? ಎಂದು ಶೆಟ್ಟರ್ ವಿರುದ್ಧ ಕಿಡಿಕಾರಿದರು.

ಬಿಜೆಪಿಯಿಂದ ದೇಶಭಕ್ತಿ ಪಾಠ ಕಲಿಯಬೇಕಿಲ್ಲ: ಲಕ್ಷ್ಮಣ ಸವದಿ

ಸೋಲಿನ ಹತಾಶೆಯಿಂದ ಅಪಪ್ರಚಾರ: ಶೆಟ್ಟರ್‌ ಆಕ್ರೋಶ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್‌ ಅವರು ಸೋಲಿನ ಹತಾಶೆಯಿಂದ ನನ್ನ ವಿರುದ್ಧ ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಿಜೆಪಿಯಿಂದ ಭಾರತದ ಚಿತ್ರಣವೇ ಬದಲು: ಮಾಜಿ ಸಚಿವೆ ಶಶಿಕಲಾ ಜೊಲ್ಲೆ

ಚುನಾವಣಾ ಪ್ರಚಾರದ ವೇಳೆ ಲಕ್ಷ್ಮೀ ಹೆಬ್ಬಾಳ್ಳರ್ ಹೇಳಿಕೆಗೆ ಕಿಡಿ ಕಾರಿದ ಅವರು, ನನ್ನ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಂದಾಗಲೇ ಲಕ್ಷ್ಮೀ ಹೆಬ್ಬಾಳ್ವರ್ ಈ ರೀತಿ ಮಾತನಾಡ ಬಹುದಿತ್ತು. ಆದರೆ, ಈಗ ಯಾಕೆ ಆ ರೀತಿ ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

ನಾನು ಕಾಂಗ್ರೆಸ್ ಸೇರಿದಾಗ ಅವರ ಪಕ್ಷದ ನಾಯಕರೇ ದೊಡ್ಡ ಶಕ್ತಿ ಬಂದಿದೆ ಎಂದಿದ್ದರು. ಹೆಬ್ಬಾಳ್ಳರ್ ಇಂಥ ಹಸಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸೋಲಿನ ಹತಾಶೆಯಿಂದ ಈ ರೀತಿಯ ಅಪಪ್ರಚಾರ ಮಾಡುವುದು ಪ್ರಾರಂಭವಾಗಿದೆ. ಇದಕ್ಕೆ ಜನ ಉತ್ತರ ಕೊಡುತ್ತಾರೆ ಎಂದರು.

Latest Videos
Follow Us:
Download App:
  • android
  • ios