ಮೈಸೂರು[ಅ.2]  ದೇವಸ್ಥಾನದ ಆವರಣದಲ್ಲೇ ರಾಸಲೀಲೆಯಲ್ಲಿ ತೊಡಗಿದ್ದ ಜೋಡಿ ಗ್ರಾಮಸ್ಥರ ಕೖಗೆ ಸಿಕ್ಕಿ ಬಿದ್ದಿದೆ.  ಗ್ರಾಮಸ್ಥರಿಂದ ಛೀಮಾರಿಯೂ ಸಿಕ್ಕಿದೆ.

ಇದು ಉತ್ತರ ಪ್ರದೇಶದ ಸುದ್ದಿ ಇಲ್ಲ. ಮೈಸೂರಿನ ನಂಜನಗೂಡು ತಾಲೂಕಿನ ಕೃಷ್ಣಾಪುರ ಗ್ರಾಮದ ಸುದ್ದಿ.  ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದ ಬಾಗಿಲು ಹಾಕಿದ ನಂತರ ಸಮೀಪದಲ್ಲಿರುವ ಕಳಲೆ ಗ್ರಾಮದಿಂದ ಪ್ರತಿದಿನ ಬೈಕ್‍ನಲ್ಲಿ ಇಲ್ಲಿಗೆ ಬರುತ್ತಿದ್ದ ಈ ಜೋಡಿ ದೇವಾಲಯದ ಒಳಹೋಗಿ ಒಂದು ಗಂಟೆಗೂ ಅಧಿಕ ಕಾಲ ಇದ್ದು ಬರುತ್ತಿತ್ತು.

ಬೀಚ್‌ನಲ್ಲಿ ನಗ್ನ ಲಗ್ನ...ಯಾರಿಂದಲೂ ಬರಲಿಲ್ಲ ವಿಘ್ನ!

ದೇವಸ್ಥಾನದ ಒಳಗಿನ ಅವರಣಕ್ಕೆ ಹೋಗಿ ಒಂದು ಗಂಟೆಗೂ ಹೆಚ್ಚು ಕಾಲ ಒಳಗೆ ಇದ್ದು ಆಚೆ ಬರುತ್ತಿದ್ದರು. ಇವರಿಬ್ಬರ ನಡೆಯಿಂದ ಗ್ರಾಮಸ್ಥರಿಗೆ ಅನುಮಾನ ಕಾಡುತ್ತಿತ್ತು. ಇಂದು ಅದೆಲ್ಲದಕ್ಕೆ ಅಂತ್ಯ ಸಿಕ್ಕಿದೆ.

ಇಂದು ದೇವಾಲಯದ ಒಳಕ್ಕೆ ಜೋಡಿ ಹೋದ ನಂತರ  ಗ್ರಾಮಸ್ಥರು ಫಾಲೋ ಮಾಡಿದ್ದಾರೆ. ಒಳಹೋಗಿ ನೋಡಿದಾಗ ಇಬ್ಬರು ರಾಸಲೀಲೆಯಲ್ಲಿ ತೊಡಗಿರುವುದನ್ನು ಕಂಡು ಹೌಹಾರಿದ್ದಾರೆ. ಛೀಮಾರಿ ಹಾಕಿ ಕಳುಹಿಸಿದ್ದು ಪೊಲೀಸ್ ದೂರು ದಾಖಲಾದ ಬಗ್ಗೆ ಮಾಹಿತಿ ಇಲ್ಲ.

ಸೆಕ್ಸ್ ನಿಲ್ಲಿಸಿದರೆ ದೇಹದ ಮೇಲಾಗುವ ಪರಿಣಾಮವೇನು?