ಹೊರಗೆ ನೋಡುವುದಕ್ಕೆ ಮಾತ್ರ ಪಿಜಿ (ಪೇಯಿಂಗ್‌ ಗೆಸ್ಟ್‌ ಹೌಸ್‌) ಅಂತ ಹೆಸರು. ಆದರೆ, ಒಳಗೆ ನಡೆಯುತ್ತಿದ್ದ ದಂಧೆನೇ ಬೇರೆ.ಹಾಗಾದ್ರೆ ಏನು ಅದು ನೋಡಿ.

ಬೆಂಗಳೂರು, [ಸೆ.25] : ಹೊರಗೆ ನೋಡುವುದಕ್ಕೆ ಮಾತ್ರ ಪಿಜಿ (ಪೇಯಿಂಗ್‌ ಗೆಸ್ಟ್‌ ಹೌಸ್‌) ಅಂತ ಹೆಸರು. ಆದರೆ, ಒಳಗೆ ನಡೆಯುತ್ತಿದ್ದ ದಂಧೆನೇ ಬೇರೆ. ಆ ದಂಧೆಯನ್ನು ಈಗ ಸಿಸಿಬಿ ಪೊಲೀಸರು ಭೇದಿಸಿದ್ದಾರೆ.

ಬೆಂಗಳೂರಿನ ಜಯಮಹಲ್ ರಸ್ತೆಯೊಂದರಲ್ಲಿ ಪಿಜಿ ಅಂತ ಹೇಳಿ ಒಳಗೆ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಎಸಿಪಿ ಮೋಹನ್‌ಕುಮಾರ್‌ ನೇತೃತ್ದ ತಂಡ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಇಬ್ಬರನ್ನು ಬಂಧಿಸಿದ್ದಾರೆ. ಇನ್ನು ನಾಲ್ವರು ಹೊರ ರಾಜ್ಯದ ಯುವತಿಯರನ್ನು ರಕ್ಷಿಸಿದ್ದಾರೆ. ಆರ್‌.ಟಿ.ನಗರ ಸುಲ್ತಾನ್‌ಪಾಳ್ಯದ ನಿವಾಸಿ ತಾಹಿರ್‌ ಅಹಮದ್‌ ಮತ್ತು ಹಾಸನ ಹೊಳೆನರಸೀಪುರದ ನಿವಾಸಿ ರಘು ಕೆ.ಪಿ ಬಂಧಿತ ಆರೋಪಿಗಳು. 

ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಹೊರ ರಾಜ್ಯದಿಂದ ಯುವತಿಯರನ್ನು ಕರೆತಂದು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.