ಮೋದಿ ವಿದೇಶಿ ರ‍್ಯಾಲಿಗಳತ್ತ ಕಣ್ಣು: ವಿಶ್ವ ವೇದಿಕೆಗಳಲ್ಲಿ ವಿಜೃಂಭಿಸಿದ ತಾಯ್ನಾಡಿನ ಮಣ್ಣು!

ಅಮೆರಿಕದ ಹೂಸ್ಟನ್‌ನಲ್ಲಿ ಇದೇ ಸೆಪ್ಟೆಂಬರ್‌ 22ರಂದು ಅನಿವಾಸಿ ಭಾರತೀಯರು ಆಯೋಜಿಸಿರುವ ‘ಹೌಡಿ ಮೋದಿ’ ಕಾರ‍್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿರುವ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಹೊಸತೇನಲ್ಲ. ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಹಿಡಿದಾಗಿನಿಂದ ಅನೇಕ ರಾಷ್ಟ್ರಗಳಲ್ಲಿ ಮಗಾ ರ್ಯಾಲಿಗಳನ್ನು ನಡೆಸಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. 

Howdy Modi Details of PM modi foreign rallies and speciality

ಅಮೆರಿಕದ ಹೂಸ್ಟನ್‌ನಲ್ಲಿ ಇದೇ ಸೆಪ್ಟೆಂಬರ್‌ 22ರಂದು ಅನಿವಾಸಿ ಭಾರತೀಯರು ಆಯೋಜಿಸಿರುವ ‘ಹೌಡಿ ಮೋದಿ’ ಕಾರ‍್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಮೆಗಾ ಕಾರ‍್ಯಕ್ರಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಭಾಗವಹಿಸುತ್ತಿರುವುದು ವಿಶೇಷ. ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿರುವ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಹೊಸತೇನಲ್ಲ.

ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಹಿಡಿದಾಗಿನಿಂದ ಅನೇಕ ರಾಷ್ಟ್ರಗಳಲ್ಲಿ ಮೆಗಾ ರಾರ‍ಯಲಿ ನಡೆಸಿದ್ದಾರೆ, ಅಲ್ಲಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಈ ಮೂಲಕ ಅನಿವಾಸಿ ಭಾರತೀಯರ ದೇಶಪ್ರೇಮದ ಕಿಚ್ಚನ್ನು ಹೆಚ್ಚಿಸುತ್ತಿದ್ದಾರೆ.

‘ಮಿಸ್ಟರ್ ಪಿಎಂ ನಿಮ್ಮ ತಾಯಿ ಮೀಟ್ ಆದ್ರಿ: ನನ್ನನ್ನೇಕೆ ದೂರ ಇಟ್ರಿ?’

ಭಾರತದಲ್ಲಿ ಬಂಡವಾಳ ಹೂಡುವಂತೆ ಪ್ರೇರೇಪಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಅನ್ಯ ದೇಶದ ನೆಲದಲ್ಲಿ ನಿಂತು ಭಾರತದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಪ್ರಧಾನಿ ಹುದ್ದೆಗೇರಿದಾಗಿನಿಂದ ಇಲ್ಲಿವರೆಗೆ ಮೋದಿ ವಿದೇಶದಲ್ಲಿ ಭಾಗವಹಿಸಿದ ಮೆಗಾ ರಾರ‍ಯಲಿಗಳು, ಮತ್ತದರ ವಿಶೇಷತೆ ಕುರಿತ ಒಂದು ನೋಟ ಇಲ್ಲಿದೆ.

ಇಲ್ಲಿಯವರೆಗಿನ ಮೋದಿ ಫಾರಿನ್‌ ರ್ಯಾಲಿಗಳು

ಮ್ಯಾಡಿಸನ್‌ ಸ್ಕ್ವೇರ್ 2014

ಸ್ಥಳ: ವಾಷಿಂಗ್‌ ಟನ್‌, ಅಮೆರಿಕ

18000 ಸೇರಿದ್ದ ಅನಿವಾಸಿ ಭಾರತೀಯರು

ಘೋಷ ವಾಕ್ಯ: ಭಾರತ ಮಾತೆಯ ಸೇವೆಗೆ ಕೈ ಜೋಡಿಸಿ

ಪ್ರಧಾನಿ ಆದ ಬಳಿಕ ಅಮೆರಿಕಕ್ಕೆ ತೆರಳಿದ್ದ ಮೋದಿ ಅವರು ಮೊತ್ತಮೊದಲು ಭಾರತೀಯರನ್ನು ಉದ್ದೇಶಿಸಿ ಮಾಡಿದ ಭಾಷಣ ಭಾರೀ ಪ್ರಚಾರ ಪಡೆದಿತ್ತು. ಮ್ಯಾಡಿಸನ್‌ ಸ್ಕ್ವೇರ್ ಗಾರ್ಡನ್‌ಗೆ ಸ್ಪಾಟ್‌ಲೈಟ್‌ನಲ್ಲಿ ಬಾಕ್ಸರ್‌ ಮಾದರಿ ಆಗಮನ, ಎಲ್‌ಇಡಿಯ ದೊಡ್ಡ ಪರದೆಯಲ್ಲಿ ಮೋದಿ ಚಿತ್ರ, ಅನಿವಾಸಿ ಭಾರತೀಯರ ‘ಮೋದಿ ಮೋದಿ’ ಎಂಬ ಹರ್ಷೋದ್ಗಾರ ಕಣ್ಮನ ಸೆಳೆದಿತ್ತು.

ಅದೊಂದು ರಾಜಕೀಯ ರ್ಯಾಲಿಯಂತೆ ಭಾಸವಾಗುತ್ತಿತ್ತು. ಇದರೊಂದಿಗೆ ಮೋದಿ ತಮ್ಮ ಅಸ್ಖಲಿತ ಹಿಂದಿಯ ಅದ್ಭುತ ಭಾಷಣ ಅನಿವಾಸಿಗರನ್ನು ಆಕರ್ಷಿಸಿಸಿತ್ತು. ಭಾರತವನ್ನು ಹಾವಾಡಿಗರ ದೇಶ ಎಂದು ವಿದೇಶಗಳಲ್ಲಿ ಕುಹುಕವಾಡುತ್ತಾರೆ. ಹಾವು ಹಿಡಿಯುತ್ತಿದ್ದ ಕೈಗಳು ಇಂದು ಮೌಸ್‌ (ಕಂಪ್ಯೂಟರ್‌) ಹಿಡಿಯುತ್ತಿವೆ. ವಿಶ್ವದೆಲ್ಲೆಡೆ ಭಾರತದ ಛಾಪು ಮೂಡಿಸುತ್ತಿದೆ ಎಂದ ಮೋದಿ, ಭಾರತೀಯರಿಗೆ ಅನುಕೂಲ ಆಗುವಂತೆ ವಲಸೆ ನೀತಿ ಬದಲಿಸುವುದಾಗಿ ಭರವಸೆ ನೀಡಿದರು.

ಕ್ರಿಮಿನಲ್‌ಗಳ ಪತ್ತೆಗೆ ದೇಶದಲ್ಲಿ ಚೀನಾ ಮಾದರಿ ವ್ಯವಸ್ಥೆ!, 'ಜಾತಕ'ವೇ ಬಯಲಾಗುತ್ತೆ!

ಅಲ್ಲದೆ ಭ್ರಷ್ಟಾಚಾರದ ವಿರುದ್ಧ ಹೋರಾಟ, ಬಡವರ ಬಗೆಗಿನ ತಮ್ಮ ಕಾಳಜಿಯನ್ನು ಭಾಷಣದಲ್ಲಿ ವ್ಯಕ್ತಪಡಿಸಿದರು. ಅಲ್ಲದೆ ಭಾರತದ ಪ್ರಗತಿಯಲ್ಲಿ ಭಾಗಿಯಾಗುವಂತೆ ಅನಿವಾಸಿಗರಿಗೆ ಕರೆ ನೀಡಿದರು. ಅಲ್ಲದೆ 3ಡಿ ಸ್ಟ್ರ್ಯಾಟಜಿ (ಡೆಮಾಕ್ರಸಿ, ಡಿಮೋಗ್ರಾಫಿಕ್‌ ಡಿವಿಡೆಂಡ್‌ ಮತ್ತು ಡಿಮ್ಯಾಂಡ್‌) ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದ್ದರು.

ಒಲಿಂಪಿಕ್‌ ಪಾರ್ಕ್ 2014

ಸ್ಥಳ: ಸಿಡ್ನಿ, ಆಸ್ಪ್ರೇಲಿಯಾ

-- ಸೇರಿದ್ದ ಜನರು

ಘೋಷ ವಾಕ್ಯ: ಪ್ರಜಾಪ್ರಭುತ್ವ ಇಲ್ಲದಿದ್ದರೆ ನಾನು ನಿಮ್ಮ ಮುಂದೆ ನಿಲ್ಲಲು ಸಾಧ್ಯವಿತ್ತಾ?

ಸಿಡ್ನಿ ನಗರದ ಬೀದಿ ಬೀದಿಗಳಲ್ಲಿ ಭಾರತೀಯತೆಯನ್ನು ಪ್ರತಿನಿಧಿಸುವ ಸಾಂಪ್ರದಾಯಕ ದಿರಿಸು ಧರಿಸಿದ್ದ ಅನಿವಾಸಿಗರು, ಹಾಲಿವುಡ್‌ ಹೀರೋನಂತೆ ಬಂದ ಮೋದಿ... ಎಲ್ಲೆಲ್ಲೂ ಮೋದಿ ಎಂಬ ಉದ್ಘಾರ ಭಾರತದ ಹೆಮ್ಮೆಯನ್ನು ಎತ್ತಿಹಿಡಿದಿತ್ತು. ಇಡೀ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಹೌಡಿ ಮೋದಿ ವ್ಯಂಗ್ಯವಾಡಿದ ರಾಹುಲ್: ಗೌರವ ಇರಲಿ ಎಂದ ತರೂರ್!

ಭಾರತ ಮತ್ತು ಆಸ್ಪ್ರೇಲಿಯಾ ದೇಶಗಳ ನಡುವಿನ ಸಂಬಂಧವನ್ನು ಕ್ರಿಕೆಟ್‌ಗೆ ಹೋಲಿಸಿದ ಮೋದಿ, ಎರಡೂ ದೇಶಗಳು ಕ್ರಿಕೆಟ್‌ ಇಲ್ಲದೆ ಜೀವಿಸಲ್ಲ ಎಂದು ಹೇಳಿದ್ದು, ಅವರ ಪರಿಪಕ್ವತೆಯನ್ನು ಸಾರಿತ್ತು. ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ತಾವು ಉತ್ಸುಕವಾಗಿದ್ದನ್ನು ತಿಳಿಸಿದ್ದರು. ಅಲ್ಲದೆ ಆಸ್ಪ್ರೇಲಿಯಾದ ಪ್ರವಾಸಿಗರಿಗೆ ಆನ್‌ ಅರೈವಲ್‌ ವೀಸಾ ನೀಡುವ ಪದ್ಧತಿ ಜಾರಿಗೆ ತರುವುದಾಗಿ ತಿಳಿಸಿದರು.

ದುಬೈ ಕ್ರಿಕೆಟ್‌ ಸ್ಟೇಡಿಯಂ 2015

ಸ್ಥಳ: ದುಬೈ, ಯುಎಇ

50,000 ಜನರು

ಘೋಷ ವಾಕ್ಯ: ಒಳ್ಳೆಯ ಉಗ್ರ, ಕೆಟ್ಟಉಗ್ರ ಸಿದ್ಧಾಂತ ನಡೆಯಲ್ಲ

40 ಸಾವಿರ ಜನರು ಕೂರಬಹುದಾದ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮೋದಿ ಆಗಮನಕ್ಕೆ ಭರ್ಜರಿ ಸಿದ್ಧತೆ ನಡೆದಿತ್ತು. ಸ್ಟೇಡಿಯಂ ಸುತ್ತಮುತ್ತ ಭಾರೀ ಸಂಚಾರ ದಟ್ಟಣೆ ನಿರ್ಮಾಣವಾಗಿತ್ತು. ಅನಿವಾಸಿ ಭಾರತೀಯರು ಮೋದಿಯ ಭಾಷಣ ಕೇಳಲು 50 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಸ್ಟೇಡಿಯಂನಲ್ಲಿ ಜಾಗ ಸಾಲದೆ, ಟೀಸ್ಟಾಲ್‌, ಡಿಜೆಗಳಲ್ಲಿ ಕಾದು ಕುಳಿತ್ತಿದ್ದರು. ಮರ್ಹಾಭಾ ಮೋದಿ (ಮೋದಿಗೆ ಸುಸ್ವಾಗತ) ಎಂದು ದೊಡ್ಡ ಪರದೆಯಲ್ಲಿ ಬರೆಯಲಾಗಿತ್ತು.

ಇಲ್ಲಿ ನೀವು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೀರಿ. ಕೆಲವರು 10, ಮತ್ತೆ ಹಲವರು 20, ಇನ್ನೂ ಕೆಲವು ಮಂದಿ 30 ವರ್ಷದಿಂದ ದುಡಿಯುತ್ತಿದ್ದೀರಿ. ಅಷ್ಟಕ್ಕೇ ನೀವು ಸೀಮಿತರಲ್ಲ, ನಿಮ್ಮ ದುಡಿಮೆಯ ಮೂಲಕ ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ. ಭಾರತದಲ್ಲಿ ತುಸು ಹೆಚ್ಚು ಮಳೆಯಾದರೂ ನೀವು ದುಬೈನಲ್ಲಿ ಕೊಡೆ ಹಿಡಿಯುತ್ತೀರಿ! ಅಲ್ಲದೆ ನೆಮ್ಮದಿಯಾಗಿ ನಿದ್ರಿಸಲಾರಿರಿ ಎನ್ನುವ ಮೂಲಕ ದುಬೈನಲ್ಲಿ ನೆಲೆಸಿರುವ ಭಾರತೀಯರ ಮಾತೃಪ್ರೇಮವನ್ನು ಶ್ಲಾಘಿಸಿದರು.

ವೆಂಬ್ಲೆ ಸ್ಟೇಡಿಯಂ 2015

ಸ್ಥಳ: ಬ್ರಿಟನ್‌

60,000 ಜನರು

ಘೋಷ ವಾಕ್ಯ: ಭಾರತ ಸೌರಶಕ್ತಿ ಬಳಕೆಯ ನೇತೃತ್ವ ವಹಿಸಲಿದೆ.

ವೆಂಬ್ಲೆ ಕ್ರಿಕೆಟ್‌ ಸ್ಟೇಡಿಯಂ ತುಂಬಾ ರಂಗೋಲಿ ಚಿತ್ತಾರ, ರಸ್ತೆ, ಗಲ್ಲಿ ಗಲ್ಲಿಗಳಲ್ಲೂ ರಾರಾಜಿಸಿದ ಭಾರತದ ತ್ರಿವರ್ಣ ಧ್ವಜ, ಬ್ರಿಟನ್‌ ದೇಶದ ಅಂದಿನ ಪ್ರಧಾನಿ ಡೇವಿಡ್‌ ಕ್ಯಾಮರನ್‌ಗೆ ಅನಿವಾಸಿ ಭಾರತೀಯರ ಅಭೂತಪೂರ್ವ ಸ್ವಾಗತ, ಪ್ರಧಾನಿ ಪತ್ನಿ ಸಮಂತಾ ಕ್ಯಾಮರಾನ್‌ ಭಾರತದ ಸಂಪ್ರದಾಯವಾದ ಸೀರೆಯಲ್ಲಿ ಮಿಂಚಿದ್ದು ಇಲ್ಲಿನ ವಿಶೇಷತೆ.

ಅಲ್ಲದೆ ಅಂದಿನ ಕಾರ‍್ಯಕ್ರಮದಲ್ಲಿ ಭಾರತದ ರಾಷ್ಟ್ರಗೀತೆ ಹಾಡಿದ್ದು, ವೆಂಬ್ಲೆ ಸ್ಟೇಡಿಯಂನ ಕಳೆಯನ್ನೇ ಬದಲಿಸಿತು. ಭಾರತದ ಪಿತಾಮಹ ಮಹಾತ್ಮ ಗಾಂಧಿ ಅವರ 150ನೇ ಜಯಂತ್ಯೋತ್ಸವ 2019ರಲ್ಲಿ ಬರಲಿದ್ದು, ಇದಕ್ಕಾಗಿ ಎರಡು ಗುರಿಗಳನ್ನು ಹಾಕಿಕೊಳ್ಳಲಾಗಿದೆ. ಒಂದು ದೇಶವನ್ನು ಸ್ವಚ್ಛವಾಗಿ ಇಡುವುದು, ಇನ್ನೊಂದು ದೇಶದ ನಿವಾಸಿಗಳಿಗೆ 24 ಗಂಟೆ ವಿದ್ಯುತ್‌ ದೊರೆಯುವಂತೆ ಮಾಡುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು.

ಸಿಲಿಕಾನ್‌ ವ್ಯಾಲಿ-2015

ಸ್ಥಳ: ಸ್ಯಾನ್‌ಜೋಸ್‌, ಕ್ಯಾಲಿಫೋರ್ನಿಯಾ ಅಮೆರಿಕ

18,000 ಪ್ರೇಕ್ಷಕರು

ಘೋಷ ವಾಕ್ಯ: 21ನೇ ಶತಮಾನ ಭಾರತೀಯರಿಗೆ ಸೇರಿದ್ದು ಎಂದು ವಿಶ್ವವೇ ಹೇಳುತ್ತಿದೆ.

ಅಮೆರಿಕದಲ್ಲಿ ಕಂಪ್ಯೂಟರ್‌ ತಂತ್ರಜ್ಞಾನ ಬೆಳೆದ ಕ್ಯಾಲಿಫೋರ್ನಿಯಾ ರಾಜ್ಯದ ಸಿಲಿಕಾನ್‌ ಸಿಟಿ ಖ್ಯಾತಿಯ ಸ್ಯಾನ್‌ಜೋಸ್‌ನಲ್ಲಿ ಮೋದಿಯವರಿಗೆ ಭವ್ಯ ಸ್ವಾಗತ ದೊರೆತಿತ್ತು. ಸಾಫ್ಟ್‌ವೇರ್‌ನಲ್ಲಿ ಭಾರತದ ಹೆಜ್ಜೆ ಗುರುತು, ತಂತ್ರಜ್ಞಾನ ಬೆಳೆಸಿದ ಸಿಲಿಕಾನ್‌ ಸಿಟಿಯಲ್ಲಿ ಮೋದಿ ಹವಾ ಜೋರಾಗಿಯೇ ಇತ್ತು.

ಅಲ್ಲದೆ ಫೇಸ್‌ಬುಕ್‌ ಕಚೇರಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು. ಮೋದಿ ಅವರು ತಮ್ಮ ಭಾಷಣದಲ್ಲಿ ಭಾರತೀಯರ ಸಾಧನೆಗಳ ಬಗ್ಗೆ ವಿಶ್ಲೇಷಿಸಿದರು. ಫೇಸ್‌ಬುಕ್‌, ಗೂಗಲ್‌ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಭಾರತೀಯರು ಮುಖ್ಯ ಹುದ್ದೆಯಲ್ಲಿ ಇರುವುದನ್ನು ತಿಳಿಸಿ, ಬೌದ್ಧಿಕ ಬುದ್ಧಿಮಟ್ಟದಲ್ಲಿ ಭಾರತೀಯರ ಅವಗಣನೆ ಅಸಾಧ್ಯ ಎನ್ನುವುದನ್ನು ಸಾರಿ ಹೇಳಿದರು. ಡಿಜಿಟಲ್‌ ಇಂಡಿಯಾದ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಪ್ಯಾರೀಸ್‌ ಕಮ್ಯೂನಿಟಿ ಇವೆಂಟ್‌ 2019

ಸ್ಥಳ: ಯುನೆಸ್ಕೋ ಕೇಂದ್ರ ಕಚೇರಿ, ಪ್ಯಾರೀಸ್‌, ಫ್ರಾನ್ಸ್‌

50,000 ವೀಕ್ಷಕರು

ಘೋಷ ವಾಕ್ಯ: ಹೊಸ ಭಾರತದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಭಯೋತ್ಪಾದನೆಗಿಲ್ಲ ಅವಕಾಶ

ಮೋದಿ ಅವರು, ತಮ್ಮ 2ನೇ ಅವಧಿಯ ಚೊಚ್ಚಲ ವಿದೇಶಿ ಭೇಟಿಯಲ್ಲಿ ಪ್ರಾನ್ಸ್‌ ದೇಶದಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮಾಡಿದ ಭಾಷಣ ರಾಜಕೀಯ ಹೊರತಾಗಿರಲಿಲ್ಲ. ಸರ್ಕಾರದ ಸಾಧನೆ, ಭವಿಷ್ಯದ ಯೋಜನೆಗಳು ಸೇರಿದಂತೆ ಹಲವು ವಿಷಯಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ನಮ್ಮ ಶ್ರೀಮಂತ ನಾಗರಿಕತೆ, ಸಂಸ್ಕೃತಿಯ ಬಗ್ಗೆ ಇಡೀ ವಿಶ್ವವೇ ಹೆಮ್ಮೆ ಪಡುವ ಸಂಗತಿಯಾಗಿವೆ. 21 ನೇ ಶತಮಾನವನ್ನು ಭಾರತ ಮುನ್ನಡೆಸಲಿದೆ.

ನವ ಭಾರತ ಸುಲಭ ವ್ಯವಹಾರ ಮತ್ತು ಸರಳ ಬದುಕಿಗೆ ಖಾತರಿ ನೀಡುತ್ತದೆ ಎಂದ ಅವರು, ಭಾರತದಲ್ಲಿ ತಾತ್ಕಾಲಿಕ ಎನ್ನುವ ಪದಕ್ಕೆ ಇನ್ನು ಮುಂದೆ ಎಂದಿಗೂ ಅವಕಾಶವಿಲ್ಲ ಎಂದು 370ನೇ ವಿಧಿಯನ್ನು ರದ್ದು ಪಡಿಸಿದ ಬಗ್ಗೆ ಪ್ರಸ್ತಾಪಿಸಿದರು.

ಅಲ್ಲದೆ ಈ ವಿಧಿಯನ್ನು ರದ್ದುಗೊಳಿಸಲು 70 ವರ್ಷ ತೆಗೆದುಕೊಂಡ ಬಗ್ಗೆ ನನಗೆ ಅಳಬೇಕೋ, ನಗಬೇಕೋ ತಿಳಿಯುತ್ತಿಲ್ಲ ಎಂದು ಹೇಳಿದರು. ನೆರೆದಿದ್ದ ಭಾರತೀಯರು ಭಾರೀ ಚಪ್ಪಾಳೆಯೊಂದಿಗೆ ‘ಮೋದಿ ಮೋದಿ’ ಘೋಷಣೆ ಮೊಳಗಿಸಿ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂಬುದನ್ನು ಸಾರಿ ಹೇಳಿದರು.

ವಿದೇಶಿ ಭಾಷಣದ ಫಲಶ್ರುತಿಗಳು

ವಿದೇಶದಲ್ಲಿ ಮೋದಿ ಅವರು ಅನಿವಾಸಿಗರನ್ನು ಉದ್ದೇಶಿಸಿ ಮಾಡಿದ ಭಾಷಣ ಹಲವು ರೀತಿಯಲ್ಲಿ ಪ್ರಧಾನಿ ಅವರಿಗೆ ಅನುಕೂಲತ್ವವನ್ನು ಒದಗಿಸಿದೆ. 2018ರ ಲೋಕಸಭಾ ಚುನಾವಣೆ ವೇಳೆ ಸಾವಿರಾರು ಅನಿವಾಸಿ ಭಾರತೀಯರು ಮೋದಿ ಅವರ ಪರವಾಗಿ ನಿಂತು ಚುನಾವಣಾ ಪ್ರಚಾರ ನಡೆಸಿದರು.

ಅಲ್ಲದೆ ರಜೆ ಪಡೆದು ಭಾರತಕ್ಕೆ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿಯೂ ತೊಡಗಿದ್ದರು. ಇದು ರಾಜಕೀಯ ಫಲಶ್ರುತಿಯಾದರೆ ಇನ್ನು ಹಲವರು ಭಾರತದಲ್ಲಿ ಮೇಕ್‌ ಇನ್‌ ಇಂಡಿಯಾ, ಸ್ಟಾರ್ಟ್‌ಅಪ್‌ಗಳನ್ನು ಭಾರತದಲ್ಲಿ ಆರಂಭಿಸಿ ಹಲವು ಯೋಜನೆಗಳಲ್ಲಿ ಬಂಡವಾಳ ಹೂಡಿದ್ದಾರೆ. ಒಟ್ಟಾರೆ ದೇಶಕ್ಕೆ ಅನಿವಾಸಿ ಭಾರತೀಯರ ಮೂಲಕ ಮತ್ತಷ್ಟುಕೊಡುಗೆ ನೀಡಿದ್ದಾರೆ ಎಂದರೆ ತಪ್ಪಾಗಲಾರದು.

ವಿದೇಶಿ ಭಾಷಣದ ಬಗ್ಗೆ ಅಪಸ್ವರ

ಮೋದಿ ಅವರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾಡುವ ಭಾಷಣಕ್ಕೂ ಅಪಸ್ವರ ಇದೆ. ವಿದೇಶಿ ನೆಲದಲ್ಲಿ ನಿಂತು ಭಾರತದ ಸ್ವಾತಂತ್ರ್ಯಾ ನಂತರದ ರಾಜಕೀಯ ವ್ಯವಸ್ಥೆ, ಅಂದಿನ ಪ್ರಧಾನಿಗಳ ನಿರ್ಧಾರದ ಟೀಕೆ ಟಿಪ್ಪಣಿ ಮಾಡುತ್ತಾರೆ ಎಂದು ಆರೋಪಿಸಲಾಗುತ್ತಿದೆ.

ಇನ್ನು ಮೋದಿ ಅವರು ವಿದೇಶದಲ್ಲಿ ಭಾರತದ ರಾಜಕೀಯ ವಿರೋಧಿಗಳನ್ನು ಹಳಿಯುವುದನ್ನು ಕೆಲವರು ಟೀಕಿಸುತ್ತಾರೆ. ವಿದೇಶದಲ್ಲಿ ಕೇವಲ ಭಾರತದ ಬಗ್ಗೆ ಉತ್ತಮ ಮಾತುಗಳನ್ನು ಆಡಿದರಷ್ಟೇ ಸಾಕು, ಅಲ್ಲಿಯೂ ರಾಜಕೀಯ ಬೇಕಿಲ್ಲ ಎನ್ನುವುದು ಮೋದಿ ಅವರಿಗೆ ವಿರೋಧಿಗಳ ಸಲಹೆ.

5 ವರ್ಷದಲ್ಲಿ ಮೋದಿ ಸುತ್ತಿದ ದೇಶಗಳು

ವರ್ಷ ಸುತ್ತಿದ ದೇಶಗಳು

2014 34

2015 57

2016 37

2017 37

2018 47

- ಪ್ರಶಾಂತ್ ಕೆ ಪಿ 

Latest Videos
Follow Us:
Download App:
  • android
  • ios