ಪ್ರಧಾನಿ ಹೌಡಿ ಮೋದಿ ಕಾರ್ಯಕ್ರಮ ಕುರಿತು ರಾಹುಲ್ ವ್ಯಂಗ್ಯ| ದೇಶದ ಅರ್ಥ ವ್ಯವಸ್ಥೆ ಹೇಗಿದೆ ಮೋದಿ ಜೀ ಎಂದು ಕೇಳಿದ ರಾಹುಲ್| ರಾಹುಲ್ ವ್ಯಂಗ್ಯವನ್ನು ಟೀಕಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್| ‘ಪ್ರಧಾನಿ ವಿದೇಶಕ್ಕೆ ಹೊರಟರೆ ಅವರ ಬೆಂಬಲಕ್ಕೆ ನಿಲ್ಲುವುದು ಕರ್ತವ್ಯ’| ‘ಪ್ರಧಾನಿ ತಮ್ಮೊಂದಿಗೆ ಈ ದೇಶದ ಗೌರವ ಹಾಗೂ ಧ್ವಜವನ್ನು ಜೊತೆಯಾಗಿ ಕೊಂಡೊಯ್ಯುತ್ತಾರೆ’| 

ನವದೆಹಲಿ(ಸೆ.20): ಅಮೆರಿಕದ ಆಯೋಜಿಸಿರುವ ಹೌಡಿ ಮೋದಿ ಕಾರ್ಯಕ್ರಮವನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಂಸದ ಶಶಿ ತರೂರ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹೌಡಿ ಮೋದಿ ಕಾರ್ಯಕ್ರಮದ ಕುರಿತು ವ್ಯಂಗ್ಯ ವಾಡಿದ್ದ ರಾಹುಲ್ ಗಾಂಧಿ, ದೇಶದ ಅರ್ಥ ವ್ಯವಸ್ಥೆ ಹೇಗಿದೆ ಪ್ರಧಾನಿ ಅವರೇ ಎಂದು ಪ್ರಶ್ನಿಸಿದ್ದರು.

Scroll to load tweet…

ಆದರೆ ರಾಹುಲ್ ವ್ಯಂಗ್ಯವನ್ನು ಟೀಕಿಸಿರುವ ಶಶಿ ತರೂರ್, ದೇಶದ ಓರ್ವ ನಾಗರಿಕ ಹಾಗೂ ಸಂಸದನಾಗಿ ನನಗೆ ನಮ್ಮ ಪ್ರಧಾನಿ ಅವರನ್ನು ಟೀಕಿಸುವ ಹಕ್ಕಿದೆ. ಆದರೆ ಪ್ರಧಾನಿ ವಿದೇಶಕ್ಕೆ ಹೊರಟರೆ ನಾನು ಅವರ ಬೆಂಬಲಕ್ಕೆ ನಿಲ್ಲಬೇಕು. ಕಾರಣ ಪ್ರಧಾನಿ ತಮ್ಮೊಂದಿಗೆ ಈ ದೇಶದ ಗೌರವ, ಧ್ವಜವನ್ನು ಜೊತೆಯಾಗಿ ಕೊಂಡೊಯ್ಯುತ್ತಾರೆ ಎಂದು ಹೇಳಿದ್ದಾರೆ.

Scroll to load tweet…

ವಿದೇಶದಲ್ಲಿದ್ದಾಗ ಅವರು ನಮ್ಮೆಲ್ಲರ ಪ್ರಧಾನಿಯಾಗಿದ್ದು, ಭಾರತವನ್ನು ಪ್ರತಿನಿಧಿಸುವ ಪ್ರಧಾನಿ ಕುರಿತು ಹಗುರ ಮಾತುಗಳು ಸಲ್ಲ ಎಂದು ಶಶಿ ತರೂರ್ ರಾಹುಲ್ ಅವರಿಗೆ ಪಾಠ ಮಾಡಿದ್ದಾರೆ.