Asianet Suvarna News Asianet Suvarna News

ಸದ್ಗುರು ಇಶಾ ಫೌಂಡೇಶನ್ ಶಿವರಾತ್ರಿ ಸಂಭ್ರಮ, ಅಹೋರಾತ್ರಿ ಕಾರ್ಯಕ್ರಮ

ಹಿಂದುಗಳ ಪಾಲಿಗೆ ಮಹಾಶಿವರಾತ್ರಿ ಪವಿತ್ರ ಹಬ್ಬ. ಋತುಮಾನದ ಬದಲಾವಣೆ ಸಾರ ಹೇಳುವ ಹಬ್ಬಕ್ಕೆ ಪುರಾಣದಲ್ಲಿಯೂ ಬೇರೆ ಬೇರೆ ಕತೆಗಳಿವೆ. ಈ ದಿನವೇ ಶಿವನು ತಾಂಡವ ನೃತ್ಯ ಆಡಿದ್ದು ಮತ್ತು ಪಾರ್ವತಿ ದೇವಿಯನ್ನು ವರಿಸಿದ್ದು ಎಂಬು ಉಲ್ಲೇಖ ಸಹ ಪುರಾಣದಲ್ಲಿದೆ. ಜಾಗರಣೆ, ವ್ರತ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ದಿನದ ವಿಶೇಷ.

Hindu Festival maha shivaratri 2019 mega event isha yoga center coimbatore
Author
Bengaluru, First Published Feb 19, 2019, 5:52 PM IST

ಕೊಯಂಬತ್ತೂರು[ಫೆ.19]  ಮಹಾಶಿವರಾತ್ರಿ ಆಚರಣೆಗೆ ಕೊಯಂಬತ್ತೂರು ಸಿದ್ಧವಾಗಿದೆ. ಇಶಾ ಯೋಗ ಸೆಂಟರ್‌ನಲ್ಲಿ ಮಹಾಶಿವರಾತ್ರಿ ಆಚರಣೆ ನಡೆಯಲಿದೆ. ರ‍್ಯಾಲಿ ಆಫ್ ರಿವರ್ಸ್  ಖ್ಯಾತಿಯ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಮಾರ್ಚ್‌ 4 ಸೋಮವಾರ ಸಂಜೆಯಿಂದ ಮಾರ್ಚ್ 5 ಮಂಗಳವಾರ ಬೆಳಗಿನವರೆಗೆ ಮಹಾಶಿವರಾತ್ರಿ ಅದ್ದೂರಿಯಾಗಿ ನಡೆಯಲಿದ್ದು ಲಕ್ಷಾಂತರ ಭಕ್ತಗಣ ಸಾಕ್ಷಿಯಾಗಲಿದೆ.

ಕೊಯಂಬತ್ತೂರಿನ ಬೃಹತ್ ಆದಿಯೋಗಿ ಮೂರ್ತಿಯ ಮುಂದೆ ಲಕ್ಷಾಂತರ ಭಕ್ತರು ಜಮಾಯಿಸಲಿದ್ದಾರೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಆದಿಯೋಗಿ ಮೂರ್ತಿಯನ್ನು ಅನಾವರಣ ಮಾಡಿದ್ದರು. 112 ಅಡಿ ಎತ್ತರದ ಶಿವನ ಮೂರ್ತಿಯನ್ನು ನೋಡಲು ಸಾವಿರಾರು ಜನ ಪ್ರತಿದಿನ ಆಗಮಿಸುತ್ತಿದ್ದು  ಸ್ಥಳ ಒಂದು ಪ್ರವಾಸಿ ತಾಣವಾಗಿ ಬದಲಾಗಿದೆ.

ಚೌತಿ ಚಂದ್ರನ ಕಂಡರೆ ಕಳ್ಳತನದ ಆರೋಪ ಯಾಕೆ ಬರುತ್ತದೆ?

ಎರಡು ವರ್ಷಗಳಿಂದ ಶಿವರಾತ್ರಿ ಆಚರಣೆ: ಶಿವರಾತ್ರಿ ಆಚರಣೆಗೆ ಕೇವಲ ಧಾರ್ಮಿಕ ಮಹತ್ವ ಮಾತ್ರ ಅಲ್ಲ. ಆಧ್ಯಾತ್ಮಿಕ ಮಹತ್ವ ಸಹ ಇದೆ. ಇಶಾ ಫೌಂಡೇಶನ್ ಆಶ್ರಯದಲ್ಲಿ ಅಹೋರಾತ್ರಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದ್ದು ಅಧ್ಯಾತ್ಮದ ಸಾರ ಪರಿಚಯ ಮಾಡಿಕೊಡುತ್ತಿವೆ.

50 ಮಿಲಿಯನ್ ಭಕ್ತರು: ಕಳೆದ ವರ್ಷ ಶಿವರಾತ್ರಿಗೆ 50 ಮಿಲಿಯನ್ ಭಕ್ತರು ಸಾಕ್ಷಿಯಾಗಿದ್ದರು. ಮಾಧ್ಯಮಗಳ ಮುಖಾಂತರ ಕೋಟ್ಯಂತರ ಜನ ವೀಕ್ಷಣೆ ಮಾಡಿದ್ದರು. ಅಹೋರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಸಾರದ ಪರಿಚಯ ಮಾಡಿಕೊಟ್ಟಿದ್ದವು. ಸದ್ಗುರು ಅವರ ಯೋಗ ಮತ್ತು ಮೆಡಿಟೇಶನ್ ನಿಜವಾದ ನೆಮ್ಮದಿ ಅಂದರೆ ಏನು ಎಂಬುದನ್ನು ತಿಳಿಸಿದ್ದವು.

ಪ್ರಖ್ಯಾತ ಕಲಾವಿದರಿಂದ ಪ್ರದರ್ಶನ: ಈ ಬಾರಿ ಇಶಾ ಫೌಂಡೇಶನ್ 25 ನೇ ವರ್ಷದ ಶಿವರಾತ್ರಿ ಆಚರಣೆ ಮಾಡುತ್ತಿದೆ. ಕೊಯಂಬತ್ತೂರಿನ ಆದಿಯೋಗಿಯ ಪಾದದಡಿ ಮೂರನೇ ವರ್ಷದ ಶಿವರಾತ್ರಿ. ಪ್ರಖ್ಯಾತ ಕಲಾವಿದರಾದ ಅಮಿತ್ ತ್ರಿವೇದಿ, ಗಾಯಕ ಹರಿಹರನ್, ಕಾರ್ತಿಕ್ ಈ ಬಾರಿಯ ಜಾಗರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 4ರ ಸಂಜೆ 6 ಗಂಟೆಯಿಂದ ಮಾರ್ಚ್ 5ರ ಮುಂಜಾನೆ 6 ಗಂಟೆವರೆಗೆ ನಿರಂತರ ಕಾರ್ಯಕ್ರಮ ನಡೆಯಲಿದೆ. ಈ ಬಾರಿ 100 ಮಿಲಿಯನ್ ಜನ ಸಾಕ್ಷಿಯಾಗುವ ನಿರೀಕ್ಷೆಯಿದೆ. 

ನೇರ ಪ್ರಸಾರಕ್ಕೆ ಅವಕಾಶ: ಹಬ್ಬದ ಆಚರಣೆಯನ್ನು ಟಿವಿ ಮುಖಾಂತರ ನೋಡಬಹುದು. ಇಂಗ್ಲಿಷ್ ಸೇರಿದಂತೆ ತಮಿಳು, ತೆಲುಗು, ಕನ್ನಡ, ,ಮಲಯಾಳಂ, ಬಾಂಗ್ಲಾ, ಗುಜರಾತಿ, ಅಸ್ಸಾಮಿ ಮತ್ತು ಓರಿಯಾ ಭಾಷೆಯಲ್ಲೂ ನೇರ ಪ್ರಸಾರ ವೀಕ್ಷಿಸಲು ಅವಕಾಶ ಮಾಡಿಕೊಡಲಾಗುತ್ತದೆ.

ಕಳೆದ ವರ್ಷದ ಶಿವರಾತ್ರಿ ಸಂಭ್ರಮ ವೀಕ್ಷಿಸಬಹುದು

Follow Us:
Download App:
  • android
  • ios