ನವದೆಹಲಿ, (ಮಾ.19): ಚೀನಾದಲ್ಲಿ ಹುಟ್ಟಿಕೊಂಡಿರುವ ಮಾಹಾಮಾರಿ ಕೊರೋನಾ ವೈರಸ್ ಭಾರತದಲ್ಲಿ ವ್ಯಾಪಿಸುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಈ ಬಗ್ಗೆ ಇಂದು (ಗುರುವಾರ) ಮಾತನಾಡಿ ಪ್ರಧಾನಿ ನರೇಂದ್ರ ಮೋದಿ,ಮಹಾಮಾರಿ ಕೊರೋನಾವೈರಸ್ ನಿಯಂತ್ರಣ ಹಾಗೂ ಅದರ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ಮಾರ್ಚ್ 22 ರಂದು ಭಾನುವಾರ ಜನತಾ ಕರ್ಫ್ಯೂ ಪಾಲಿಸೋಣ ಎಂದು ಕರೆ ಕೊಟ್ಟರು.

ವೈರಸ್ ನಿಂದ ಕಾಪಾಡಿಕೊಳ್ಳಲು ಜನತಾ ಕರ್ಫೂ ಅವಶ್ಯಕತೆಯಿದೆ. ಅಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಇದು ಜಾರಿಯಲ್ಲಿರುತ್ತದೆ. ಸಾಧ್ಯವಾದಷ್ಟು ಮನೆಯಲ್ಲಿಯೇ ಉಳಿಯು ಪ್ರಯತ್ನ ಮಾಡೋಣ. ಇಂದಿನಿಂದಲೇ ಜನತಾ ಕರ್ಫ್ಯೂ ಕುರಿತು ಸ್ಥಳೀಯ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು ಮತ್ತಯ ಜನಪ್ರತಿನಿಧಿಗಳು ಜನರಲ್ಲಿ ಅರಿವು ಮೂಡಿಸಲಿವೆ ಎಂದು ಹೇಳಿದರು.

ಕೊರೋನಾ ನಿಯಂತ್ರಣಕ್ಕೆ 9 ಮಹತ್ವದ ಮಾರ್ಗಸೂಚಿಗಳನ್ನ ಹೊರಡಿಸಿದ ಮೋದಿ ಸರ್ಕಾರ 

ಜತೆಗೆ ಜನತಾ ಕರ್ಫ್ಯೂವಿನ ದಿನ ಸಂಜೆ 5 ಗಂಟೆಗೆ 5 ನಿಮಿಷಗಳ ಕಾಲ ಮನೆಯ ಬಾಗಿಲು, ಕಿಟಕಿ, ಬಾಲ್ಕನಿಗಳ ಬಳಿ ನಿಂತು ಚಪ್ಪಾಳೆ ಹೊಡೆಯುವ ಮೂಲಕ ನರೆಹೊರೆಯವರ ಯೋಗಕ್ಷೇಮ ವಿಚಾರಿಸಿ ಅವರಿಗೆ ಸಲ್ಯೂಟ್​ ಹೇಳೋಣ, ಆತ್ಮಸ್ಥೈರ್ಯ ಹೆಚ್ಚಿಸೋಣ ಎಂದು ಜನರಲ್ಲಿ ಮನವಿ ಮಾಡಿಕೊಂಡರು.

ಒಟ್ಟಿನಲ್ಲಿ ಮೋದಿ ಭಾಷಣ ಸೋಂಕು ಹರಡವುದನ್ನ ತಡೆಯೋಣ. ಅದಕ್ಕೆ ನಿಮ್ಮ ಜವಾಬ್ದಾರಿ ಮುಖ್ಯವಾಗಿರುತ್ತದೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಆಗಾಗಿ ಜನರು ಕೊರೋನಾ ವೈರಸ್ ಬಗ್ಗೆ ಭಯಪಡದೇ ಸ್ವಚ್ಛವಾಗಿ ಆದಷ್ಟೂ ಮನೆಯಲ್ಲಿಯೇ ಇರುವುದು ಸೂಕ್ತ.