ವಿದೇಶದಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಅದು ಭಾರತಕ್ಕೆ ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ವೈರಸ್ ಮಹಾಮಾರಿಯನ್ನ ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಮಹತ್ವದ ಕ್ರಮಗಳನ್ನ ಕೈಗೊಂಡಿದೆ. ಅವುಗಳು ಈ ಕೆಳಗಿನಂತಿವೆ

ನವದೆಹಲಿ, (ಮಾ.19): ಕೊರೋನಾ ವೈರಸ್ ಹರಡುವಿಕೆಯನ್ನ ತಡೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆಲ ಮಾರ್ಗ ಸೂಚಿಗಳನ್ನ ಹೊರಡಿಸಿದೆ.

Scroll to load tweet…

ಮಾರ್ಚ್ 22ರಿಂದ ಮಾ.29ರವರೆಗೆ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಭಾರತದಲ್ಲಿ ಲ್ಯಾಂಡ್ ಆಗುವಂತಿಲ್ಲ ಎಂದು ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಕೇಂದ್ರ ಸರ್ಕಾರ ಕೆಲವಂದಿಷ್ಟು ಮಹತ್ವದ ಮಾರ್ಗಸೂಚಿಗಳನ್ನ ಹೊರಡಿಸಿದ್ದು, ಅವುಗಳು ಈ ಕೆಳಗಿನಂತಿವೆ. 

ತಡೆ- 1- ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಭಾರತ ನಿರ್ಬಂಧ
ತಡೆ- 2- ಮಾರ್ಚ್​ 22 ರಿಂದ 29ರವರೆಗೆ ವಿದೇಶಿ ವಿಮಾನ ಹಾರಾಟಕ್ಕೆ ಬ್ರೇಕ್​
ತಡೆ- 3- 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟವರ ವಿಮಾನ ಪ್ರಯಾಣಕ್ಕೆ ಬ್ರೇಕ್​ 
ತಡೆ- 4- 10 ವರ್ಷದೊಳಗಿನ ಮಕ್ಕಳು, ವೃದ್ಧರು ಮನೆಯಿಂದ ಹೊರಬರಬಾರದು
ತಡೆ- 5- ಖಾಸಗಿ ಕಂಪನಿ ನೌಕರರಿಗೆ ವರ್ಕ್ ಫ್ರಂ ಹೋಂಗೆ ಸೂಚನೆ
ತಡೆ- 6- ಶೇ.50ರಷ್ಟು ಸರ್ಕಾರಿ ನೌಕರರಿಗೂ ವರ್ಕ್ ಫ್ರಂಗೆ ಉತ್ತೇಜಿಸಿ 
ತಡೆ- 7- ಅನಿವಾರ್ಯವಿಲ್ಲದೇ ರೈಲು, ವಿಮಾನ ಪ್ರಯಾಣ ಬೇಡ
ತಡೆ- 8- ಅಗತ್ಯವಿಲ್ಲದ ಚಿಕ್ಕ-ಪುಟ್ಟ ಸಭೆ ಸಮಾರಂಭಗಳನ್ನು ಮುಂದೂಡಿ
ತಡೆ- 9- ಧಾರ್ಮಿಕ ಸಭೆ, ಸಮಾರಂಭಗಳನ್ನು ರದ್ದುಪಡಿಸುವುದು