ಬೆಳಗಾವಿ [ಆ.10]: ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಪ್ರವಾಹದ ಅಬ್ಬರಕ್ಕೆ ಜನಜೀವನ ತತ್ತರಿಸಿದೆ. ಸಂಪೂರ್ಣ ಕರ್ನಾಟಕ ನೀರಿನಲ್ಲಿ ಮುಳುಗುತ್ತಿದೆ. 

"

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿದ ಕುಮಾರಸ್ವಾಮಿ ನೆರೆ ಪೀಡಿತ ಪ್ರದೇಶಗಳ ಜನರನ್ನು ಭೇಟಿ ಮಾಡಿದ್ದಾರೆ. 

ಬೆಳಗಾವಿ, ಧಾರವಾಡ ಭಾಗಗಳಲ್ಲಿ ಇಂದು ಪ್ರವಾಸ ಮಾಡುವುದಾಗಿ ಹೇಳಿದ ಅವರು  ತೀವ್ರ ಜ್ವರವಿದ್ದು, ಅನಾರೋಗ್ಯದ ನಡುವೆಯೂ ನಿರಾಶ್ರಿತ ಕೇಂದ್ರಗಳ ಜನರ ಸಂಕಷ್ಟ ಕೇಳಿದ್ದಾರೆ.  

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಾನುವಾರ ಕೊಡಗು, ಮೈಸೂರು ಕಡೆ ಪ್ರಯಾಣ ಬೆಳೆಸಲಿದ್ದೇವೆ. ಕೊಡಗಿನಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಕೂಡ ಕೊಡಗಿನಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಲವು ಶಾಸಕರೊಂದಿಗೆ ಇಲ್ಲಿಗೆ ತೆರಳಿ ನೆರೆ ಪೀಡಿತರ ನೆರವಿಗೆ ನಿಲ್ಲಲಿದ್ದೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. 

ಇನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಸೋಮವಾರದಿಂದ ಉತ್ತರ ಕರ್ನಾಟಕ ಪ್ರವಾಸ ಮಾಡಲಿದ್ದಾರೆ. ರಾಯಚೂರು, ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ ಎಂದರು.