ಆನ್‌ಲೈನ್‌ ತರಗತಿಗೆ ಮಕ್ಕಳಿಂದಲೂ ವಿರೋಧ..!


ಆನ್‌ಲೈನ್ ಶಿಕ್ಷಣದಿಂದಾಗಿ ನಮಗೆ ಕಣ್ಣುನೋವು ಬರ್ತಾಯಿದೆ ಎಂದು ರಾಯಚೂರಿನ ವಿವಿಧ ಖಾಸಗಿ ಶಾಲೆಯ ವಿದ್ಯಾರ್ಥಿಗಳು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. 

ಮಾಜಿ ಸಿಎಂ ಆಪ್ತ ಸಹಾಯಕನಿಗೆ ಕೊರೋನಾ: ಎಚ್‌ಡಿಕೆ ಜತೆ ಚಿಕ್ಕಮಗಳೂರಿಗೆ ಹೋಗಿದ್ದ ಪಿಎ


ರಾಜ್ಯದ ಜನಪ್ರತಿನಿಧಿಗಳಿಗೂ ಮಾರಕ ಕೊರೋನಾ ವೈರಸ್​ ಬಿಸಿ ತಟ್ಟಿದೆ. ಬೆಳಗ್ಗೆ ಅಷ್ಟೇ ಜೆಡಿಎಸ್‌ ವಿಧಾನಪರಿಷತ್ ಸದಸ್ಯ ಬೋಜೆಗೌಡರಿಗೆ ಕೋವಿಡ್​​-19 ಪಾಸಿಟಿವ್​​ ಬಂದಿದೆ. ಇದೀಗ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಪ್ತ ಸಹಾಯಕನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಗಲ್ಲು ಶಿಕ್ಷೆ, ಪರಿಶೀಲನಾ ಅರ್ಜಿ ಸಲ್ಲಿಸಲು ನಿರಾಕರಿಸಿದ ಕುಲಭೂಷಣ್ ಜಾಧವ್: ಪಾಕಿಸ್ತಾನ

ಗೂಢಚಾರಿಕೆ ಆರೋಪದಡಿಯಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಕೈದಿಯಾಗಿರುವ ಭಾರತೀಯ ನೌಕಾಸೇನೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ಸಂಬಂಧ ಪರಿಶೀಲನಾ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ. ಇನ್ನು ಕುಲಭೂಷಣ್ ಜಾಧವ್‌ಗೆ ಮತ್ತೊಂದು ಕೌನ್ಸುಲರ್ Access ನೀಡುವ ಆಫರ್ ಕೊಟ್ಟಿದ್ದೇವೆ ಎಂಬುವುದು ಪಾಕಿಸ್ತಾನದ ವಾದವಾಗಿದೆ. 

ಫೇಸ್‌ಬುಕ್‌ನಲ್ಲಿ ಪೋರ್ನ್‌ ವಿಡಿಯೋ ಪೋಸ್ಟ್ ಮಾಡಿದ BJP ಮುಖಂಡ

ಫೇಸ್‌ಬುಕ್‌ನಲ್ಲಿ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ ರಾಜಸ್ಥಾನದ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್‌ಸಮಂದ್ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಐಟಿ ಸೆಲ್‌ನ ಇನ್‌ಚಾರ್ಜ್ ಅಶ್ಲೀಲ ವಿಡಿಯೋವನ್ನು ಫೇಸ್‌ಬುಕ್‌ಗೆ ಪೋಸ್ಟ್ ಮಾಡಿದ್ದಾರೆ.

ಎಚ್ಚರ..ಎಚ್ಚರ..! ಗಾಳಿಯಿಂದ್ಲೂ ಹರಡುತ್ತೆ ಕೊರೊನಾ; ವಿಶ್ವಸಂಸ್ಥೆಯೂ ಒಪ್ಪಿದೆ..!

ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನಸಂದಣಿ ಇರುವ ಪ್ರದೇಶಗಳಿಗೆ ಹೋದರೆ ಕೊರೊನಾ ಬರೋದು ಪಕ್ಕಾ..! 32 ದೇಶದ 239 ವಿಜ್ಞಾನಿಗಳ ವರದಿಯನ್ನು ವಿಶ್ವಸಂಸ್ಥೆ ಒಪ್ಪಿಕೊಂಡಿದೆ. ಸೋಂಕಿತರು ಸೀನಿದ್ರೆ, ಕೆಮ್ಮಿದರೆ ಗಾಳಿಯಲ್ಲಿ ಹರಡುತ್ತೆ ಕೊರೊನಾ. ಆದಷ್ಟು ಜಾಗೃತರಾಗಿರಬೇಕಾಗಿದೆ. 

ಚೀನಾ ವಿಷಯದಲ್ಲಿ ನಮ್ಮ ಬೆಂಬಲ ಭಾರತಕ್ಕೆ: ಅಮೆರಿಕ!

ಭಾರತ-ಚೀನಾ ನಡುವಿನ ಸಂಘರ್ಷದಲ್ಲಿ ನಮ್ಮ ದೇಶದ ಸೇನೆಯ ಬೆಂಬಲ ಭಾರತಕ್ಕಿದೆ ಎಂದು ಅಮೆರಿಕ ಸರ್ಕಾರ ಹೇಳಿದೆ. ಅಷ್ಟೇ ಅಲ್ಲ, ಜಗತ್ತಿನಲ್ಲಿ ಎಲ್ಲೇ ಆಗಲಿ, ಯಾರೇ ಆಗಲಿ, ಸೇನಾ ಪ್ರಾಬಲ್ಯ ಮೆರೆಯಲು ಬಂದರೆ ಅದನ್ನು ನೋಡಿಕೊಂಡು ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದೂ ಖಡಕ್‌ ಸಂದೇಶ ನೀಡಿದೆ.

'ಮಹಾಮಾರಿ ಮಧ್ಯೆ ಸ್ವಲ್ಪ ಖುಷಿ' ಮದುವೆ ಫೋಟೋ ಶೇರ್ ಮಾಡಿದ ನಟಿ ಸ್ವರ ಭಾಸ್ಕರ್..!

ತಮ್ಮ ವೆಬ್‌ಸಿರೀಸ್ ರಾಶ್‌ಭರಿ ಕುರಿತ ಪೋಸ್ಟ್‌ಗಳನ್ನೇ ಹಾಕುತ್ತಿದ್ದ ನಟಿ ಸ್ವರ ಭಾಸ್ಕರ್ ಸಣ್ಣದೊಂದು ಚೇಂಜ್ ಎಂಬಂತೆ ಕೆಲವೊಂದು ಮದುವೆ ಫೋಟೋ ಶೇರ್ ಮಾಡಿದ್ದಾರೆ. ತಮ್ಮ ಮನೆಯಲ್ಲೇ ಎರಡು ವಾರಗಳ ಕಾಲ ನಡೆದ ತಮ್ಮ ಸಂಬಂಧಿ ವಿವಾಹದ ಸಂಭ್ರಮದ ಕೆಲವೊಂದು ಫೋಟೋ ಶೇರ್ ಮಾಡಿಕೊಂಡಿರುವ ನಟಿ ಈ ಮಹಾಮಾರಿ ಸಂದರ್ಭ ಸ್ವಲ್ಪ ಖುಷಿ ಎಂದು ಬರೆದುಕೊಂಡಿದ್ದಾರೆ.

ಗುಡ್‌ ನ್ಯೂಸ್: 12 ದಿನದ ಬಳಿಕ ಕೊರೋನಾ ಬಲಿಗೆ ಬ್ರೇಕ್!

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಸ್ಫೋಟ ಮುಂದುವರೆದಿದ್ದು, ಮಂಗಳವಾರ 800 ಹೊಸ ಪ್ರಕರಣ ಪತ್ತೆಯಾಗಿವೆ. ಸಮಾಧಾನಕರ ಸಂಗತಿ ಎಂದರೆ ಆರೋಗ್ಯ ಇಲಾಖೆಯ ಬುಲೆಟಿನ್‌ ಪ್ರಕಾರ ಸತತ 12 ದಿನಗಳ ಬಳಿಕ ಮಂಗಳವಾರ ನಗರದಲ್ಲಿ ಕೊರೋನಾ ಸೋಂಕಿನಿಂದಾಗಿ ಯಾರೂ ಮೃತಪಟ್ಟಿಲ್ಲ.

ಮಾಜಿ ಪೋರ್ನ್ ನಟಿ ಸನ್ನಿ‌ ಲಿಯೋನ್‌ಗಿದ್ದಾಳೆ ಒಬ್ಳು ಗರ್ಲ್ ಫ್ರೆಂಡ್!

ಇತ್ತೀಚೆಗೆ ಭಾರತದಿಂದ ಅಮೆರಿಕದ ಲಾದ್ ಏಂಜಲೀಸ್‌ಗೆ ಹೋಗಿದ್ದಾರೆ ಖ್ಯಾತ ನಟಿ ಸನ್ನಿ ಲಿಯೋನ್. ಅಲ್ಲಿ ತಮ್ಮ ಗೆಳತಿಯ ಜೊತೆಗೆ ಮೋಜು ಮಸ್ತಿ ಉಡಾಯಿಸ್ತಿದಾರೆ. ಸನ್ನಿಯ ಇನ್‌ಸ್ಟಗ್ರಾಂ ಅಕೌಂಟ್‌ಗೆ ಹೋದರೆ ಅಲ್ಲಿ ಆಕೆಯ ಜೊತೆ ಸನ್ನಿ ಬ್ಲ್ಯಾಕ್ ಬಿಕಿನಿಯಲ್ಲಿ ತಬ್ಬಿಕೊಂಡು ಫೊಟೋಗೆ ಪೋಸ್ ಕೊಡುತ್ತಿರುವ, ಸ್ವಿಮ್ಮಿಂಗ್ ಪೂಲ್‌ಗೆ ಜಿಗಿಯುತ್ತಿರುವ ವಿಡಿಯೋಗಳನ್ನು ನೋಡಬಹುದು.

ಮೋದಿಯ 'ಟೆಕ್' ಟಾಕ್ ಹಿಂದಿನ ರಹಸ್ಯವೇನು?

ಚೀನಾ ವಿರುದ್ಧ ಪರೋಕ್ಷ ಸಮರಕ್ಕೆ ಮುಂದಾಗಿರುವ ಭಾರತ ಈಗ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜತಾಂತ್ರಿಕವಾಗಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಿದ್ದಾರೆ. ಈಗ ರಾಜತಾಂತ್ರಿಕದಿಂದ ತಾಂತ್ರಿಕ ಮಟ್ಟದಲ್ಲಿ ಭಾರತವನ್ನು ಬಲಿಷ್ಠಗೊಳಿಸಬೇಕು ಎಂಬ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಅವರು ಕೈಹಾಕಿದ್ದು, ಆತ್ಮನಿರ್ಭರ ಭಾರತ ಸೃಷ್ಟಿಗೆ ಮತ್ತಷ್ಟು ಒತ್ತು ನೀಡಿದ್ದಾರೆ.