ಇಸ್ಲಮಾಬಾದ್(ಜು.08): ಗೂಢಚಾರಿಕೆ ಆರೋಪದಡಿಯಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಕೈದಿಯಾಗಿರುವ ಭಾರತೀಯ ನೌಕಾಸೇನೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ಸಂಬಂಧ ಪರಿಶೀಲನಾ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ. ಇನ್ನು ಕುಲಭೂಷಣ್ ಜಾಧವ್‌ಗೆ ಮತ್ತೊಂದು ಕೌನ್ಸುಲರ್ Access ನೀಡುವ ಆಫರ್ ಕೊಟ್ಟಿದ್ದೇವೆ ಎಂಬುವುದು ಪಾಕಿಸ್ತಾನದ ವಾದವಾಗಿದೆ. 

ಕೆಲವರು ಭಯೋತ್ಪಾದನೆ ವೈರಸ್ ಹರಡುತ್ತಿದ್ದಾರೆ; ಶಾಂಘೈ ಸಭೆಯಲ್ಲಿ ಪಾಕ್‌ ವಿರುದ್ಧ ಗುಡುಗಿದ ಜೈಶಂಕರ್!

ಪಾಕಿಸ್ತಾನ ಮೂಲಗಳಿಂದ ಲಭ್ಯವಾದ ಮಾಹಿತಿ ಅನ್ವಯ ಜಾಧವ್‌ರಿಗೆ ಜೂನ್ 17ರಂದು ಪರಿಶೀಲನಾ ಅರ್ಜಿ ಹಾಕಲು ತಿಳಿಸಲಾಗಿತ್ತು. ಆದರೆ ಜಾಧವ್ ಇದಕ್ಕೆ ನಿರಾಕರಿಸಿದ್ದಾರೆ. ಪಾಕಿಸ್ತಾನ ಈ ಕುರಿತಾಗಿ ಭಾರತೀಯ ಹೈ ಕಮಿಷನ್ ಕಚೇರಿಗೆ ಮಾಹಿತಿ ರವಾನಿಸಿದ್ದು, ಮತ್ತೊಂದು ಕೌನ್ಸುಲರ್ Access ನೀಡುವ ಆಫರ್ ಕೂಡಾ ಕೊಟ್ಟಿದೆ.

ಪಾಕ್‌ ಮಿಲಿಟರಿ ಕೋರ್ಟು, ಏಪ್ರಿಲ್‌ 2017ರಲ್ಲಿ ಕುಲಭೂಷಣ್‌ಗೆ ಗೂಢಚರ್ಯೆ ಆರೋಪದಲ್ಲಿ ಗಲ್ಲು ಶಿಕ್ಷೆ ಆದೇಶಿಸಿತ್ತು. ಆದರೆ ಸೇನಾ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಪಾಕಿಸ್ತಾನದ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲು ಕಾನೂನಿನ ಪ್ರಕಾರ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕೋರ್ಟ್‌ ಮೊರೆ ಹೋಗಿದ್ದ ಭಾರತವು, ಜಾಧವ್‌ಗೆ ನೀಡಿದ್ದ ಗಲ್ಲು ಶಿಕ್ಷೆ ಆದೇಶಕ್ಕೆ ತಡೆ ತಂದಿತ್ತು.

'ಈಗಲೇ ನಮ್ಮ ಜಾಗ ಬಿಟ್ಟು ಹೊರಡಿ' ಕುತಂತ್ರಿ ಪಾಕ್‌ಗೆ ಭಾರತ ಕೊನೆ ಸಂದೇಶ

‘ಜಾಧವ್‌ ಭಾರತದ ಗೂಢಚಾರ ಅಲ್ಲ. ಪಾಕಿಸ್ತಾನವು ಇರಾನ್‌ನಿಂದ ಅವರನ್ನು ಅಪಹರಿಸಿ ಪಾಕ್‌ಗೆ ಕರೆತಂದಿದೆ. ಈತ ಭಾರತದ ಗೂಢಚಾರ ಎಂದು ಸುಳ್ಳು ಆರೋಪ ಮಾಡಿದೆ’ ಎಂಬುದು ಭಾರತದ ವಾದ.