ನವದೆಹಲಿ(ಜು.08): ತಮ್ಮ ವೆಬ್‌ಸಿರೀಸ್ ರಾಶ್‌ಭರಿ ಕುರಿತ ಪೋಸ್ಟ್‌ಗಳನ್ನೇ ಹಾಕುತ್ತಿದ್ದ ನಟಿ ಸ್ವರ ಭಾಸ್ಕರ್ ಸಣ್ಣದೊಂದು ಚೇಂಜ್ ಎಂಬಂತೆ ಕೆಲವೊಂದು ಮದುವೆ ಫೋಟೋ ಶೇರ್ ಮಾಡಿದ್ದಾರೆ.

ತಮ್ಮ ಮನೆಯಲ್ಲೇ ಎರಡು ವಾರಗಳ ಕಾಲ ನಡೆದ ತಮ್ಮ ಸಂಬಂಧಿ ವಿವಾಹದ ಸಂಭ್ರಮದ ಕೆಲವೊಂದು ಫೋಟೋ ಶೇರ್ ಮಾಡಿಕೊಂಡಿರುವ ನಟಿ ಈ ಮಹಾಮಾರಿ ಸಂದರ್ಭ ಸ್ವಲ್ಪ ಖುಷಿ ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್‌ನ ಸ್ಟೈಲಿಸ್ಟ್‌ ಸಹೋದರಿಯರ ಫೋಟೋಗಳು

ಮೆಹಂದಿ ಶಾಸ್ತ್ರ ಹಾಗೂ ಅರಶಿನ ಶಾಸ್ತ್ರದ ಫೋಟೋ ಶೇರ್ ಮಾಡಿರುವ ನಟಿ, ಸ್ವೀಟ್ ಲವ್‌ ಸ್ಟೋರಿಯನ್ನೂ ವಿವರಿಸಿದ್ದಾರೆ. ನಮ್ಮ ಕುಟುಂಬಕ್ಕೆ ಸಂಭ್ರಮ ಪಡುವುದಕ್ಕೆ ಚಂದದ ಒಂದು ಕಾರಣ ಸಿಕ್ಕಿದೆ.

ನನ್ನ ಮಾವ ಅವರ ಕಾಲೇಜು ಗೆಳತಿಯನ್ನು ವಿವಾಹವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಕೊರೋನಾ ಲಾಕ್‌ಡೌನ್ ನಿಯಮದಂತೆ ವಿವಾಹ ಸಮಾರಮಭದಲ್ಲಿ 50ಕ್ಕಿಂತ ಹೆಚ್ಚು ಜನ ಭಾಗವಹಿಸುವಂತಿಲ್ಲ.

ಮೋಡಿ ಮಾಡುತ್ತಿದೆ 'ದಿಲ್‌ ಬೇಚಾರ' ಟ್ರೇಲರ್‌; ಒಂದೇ ದಿನ 30 ಮಿಲಿಯನ್ ಹಿಟ್ಸ್

ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನಿಟೈಸ್ ಮಾಡಿಕೊಂಡು ಕಾರ್ಯಕ್ರಮ ನಡೆಸಿದ್ದೆವು. ಕುಟುಂಬಸ್ಥರು ಮಾತ್ರ ಕಾರ್ಯಕ್ರಮದಲ್ಲಿದ್ದೆವು ಎಂದು ಬರೆದುಕೊಂಡಿದ್ದಾರೆ. ಹಿರಿತೆರೆಗೆ ವೈಬ್ರೇಟರ್ ಇಂಟ್ರಡ್ಯೂಸ್ ಮಾಡಿದ ಹಿರಿಮೆಯೂ ನಟಿ ಸ್ವರ ಅವರಿಗೆ ಸಲ್ಲುತ್ತದೆ.