ಗುಡ್‌ ನ್ಯೂಸ್: 12 ದಿನದ ಬಳಿಕ ಕೊರೋನಾ ಬಲಿಗೆ ಬ್ರೇಕ್!

ಮಂಗಳವಾರ ಕೊರೋನಾದಿಂದ ಒಂದೂ ಸಾವಿಲ್ಲ!| ಆರೋಗ್ಯ ಇಲಾಖೆ ಬುಲೆಟಿನ್‌ ಪ್ರಕಾರ ಸೋಂಕಿನಿಂದ ನಗರದಲ್ಲಿ ಯಾವುದೇ ಸಾವಿಲ್ಲ| 12 ದಿನ ಬಳಿಕ ಸಾವಿನ ನಾಗಲೋಟಕ್ಕೆ ಬ್ರೇಕ್‌| ಆದರೆ ಕೆ.ಸಿ.ಜನರಲ್‌, ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ತಲಾ ಒಂದೊಂದು ಸಾವು| ಆರೋಗ್ಯ ಇಲಾಖೆ ಇಂದು ಪ್ರಕಟಿಸುವ ಸಾಧ್ಯತೆ

After 12 Days No Death From Coronavirus In Bangalore

ಬೆಂಗಳೂರು(ಜು.08): ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಸ್ಫೋಟ ಮುಂದುವರೆದಿದ್ದು, ಮಂಗಳವಾರ 800 ಹೊಸ ಪ್ರಕರಣ ಪತ್ತೆಯಾಗಿವೆ. ಸಮಾಧಾನಕರ ಸಂಗತಿ ಎಂದರೆ ಆರೋಗ್ಯ ಇಲಾಖೆಯ ಬುಲೆಟಿನ್‌ ಪ್ರಕಾರ ಸತತ 12 ದಿನಗಳ ಬಳಿಕ ಮಂಗಳವಾರ ನಗರದಲ್ಲಿ ಕೊರೋನಾ ಸೋಂಕಿನಿಂದಾಗಿ ಯಾರೂ ಮೃತಪಟ್ಟಿಲ್ಲ.

ವೈರಸ್‌ ತಡೆಗೆ 4ಸಿ ಸೂತ್ರ: ಅಳವಡಿಸ್ಕೊಂಡ್ರೆ ಸೋಂಕು ನಿಗ್ರಹ ಸಾಧ್ಯ!

ಆದರೆ, ನಗರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ 57 ವರ್ಷದ ನರ್ಸ್‌ ಹಾಗೂ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ 60 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಬುಧವಾರದ ಆರೋಗ್ಯ ಇಲಾಖೆಯ ಬುಲೆಟಿನ್‌ನಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಜೂ.25ರಂದು ಬೆಂಗಳೂರಿನಲ್ಲಿ 113 ಕೊರೋನಾ ಸೋಂಕು ಪ್ರಕರಣ ದಾಖಲಾಗಿದ್ದರೂ, ಯಾವುದೇ ಮೃತಪಟ್ಟವರದಿಯಾಗಿರಲಿಲ್ಲ. ಇದಾದ ಬಳಿಕ ನಿರಂತರವಾಗಿ ಕನಿಷ್ಠ ಎರಡರಿಂದ ಅತಿ ಹೆಚ್ಚು 24 ಮಂದಿಯ ವರೆಗೆ ಮೃತಪಟ್ಟವರದಿಯಾಗಿದೆ. ನಗರದಲ್ಲಿ ಕೊರೋನಾದಿಂದ ಇಲ್ಲಿಯ ತನಕ ಒಟ್ಟು 155 ಮಂದಿ ಸಾವನ್ನಪ್ಪಿದ್ದಾರೆ.

ಏನೂ ಆಗಲ್ಲ ಕಣ್ರಪ್ಪ, ಒಂದಿಷ್ಟು ಗಟ್ಟಿ ಮನಸ್ಸು ಮಾಡ್ಕೊಳ್ಳಿ: ಕೊರೋನಾ ಮಣಿಸಿದ 96ರ ಅಜ್ಜಿ!

11,361ಕ್ಕೆ ಏರಿಕೆ:

ನಗರದಲ್ಲಿ ಮಂಗಳವಾರ ಮೇಯರ್‌ ಆಪ್ತ ಸಹಾಯಕ, ಪೂರ್ವ ವಲಯದ ಜಂಟಿ ಆಯುಕ್ತರು ಸೇರಿದಂತೆ ನಾಲ್ವರು ಸಿಬ್ಬಂದಿ, ಆಟೋ ಚಾಲಕ, ಪೊಲೀಸ್‌ ಅಧಿಕಾರಿ ಸಿಬ್ಬಂದಿ ಸೇರಿದಂತೆ ಒಟ್ಟು 800 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 11,361ಕ್ಕೆ ಏರಿಕೆಯಾಗಿದೆ. ಮಂಗಳವಾರ 265 ಮಂದಿಗೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 1,810ಕ್ಕೆ ಏರಿಕೆಯಾಗಿದೆ. ಇನ್ನು 9,395 ಸಕ್ರಿಯ ಪ್ರಕರಣ ಬಾಕಿ ಇವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Latest Videos
Follow Us:
Download App:
  • android
  • ios