ಬೆಂಗಳೂರು, (ಜುಲೈ.08): ರಾಜ್ಯದ ಜನಪ್ರತಿನಿಧಿಗಳಿಗೂ ಮಾರಕ ಕೊರೋನಾ ವೈರಸ್​ ಬಿಸಿ ತಟ್ಟಿದೆ. ಬೆಳಗ್ಗೆ ಅಷ್ಟೇ ಜೆಡಿಎಸ್‌ ವಿಧಾನಪರಿಷತ್ ಸದಸ್ಯ ಬೋಜೆಗೌಡರಿಗೆ ಕೋವಿಡ್​​-19 ಪಾಸಿಟಿವ್​​ ಬಂದಿದೆ.

ಇದೀಗ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಪ್ತ ಸಹಾಯಕನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

JDS ಶಾಸಕನಿಗೂ ವಕ್ಕರಿಸಿದ ಕೊರೋನಾ ಹೆಮ್ಮಾರಿ

ನೆನ್ನೆಯಷ್ಟೇ (ಮಂಗಳವಾರ) ಕುಮಾರಸ್ವಾಮಿ ಅವರು ಚಿಕ್ಕಮಗಳೂರಿಗೆ ಹೋಗಿದ್ದರು. ಇವರ ಜೊತೆಯಲ್ಲೇ ಕೊರೋನಾ ಸೋಂಕು ತಗುಲಿರುವ ಆಪ್ತ ಸಹಾಯಕ ಸಹ ಕೂಡ ಇದ್ದರು. 

ಪರಿಷತ್ ಸದಸ್ಯ ಬೋಜೆಗೌಡ ಅವರಿಗೆ ಕೊರೋನ ದೃಢ ಹಿನ್ನಲೆಯಲ್ಲಿ ಕುಮಾರಸ್ವಾಮಿ ಭದ್ರತಾ ತಂಡವನ್ನ ಪರೀಕ್ಷೆಗೆ ಒಳಪಡಿಲಾಗಿತ್ತು.
ವರದಿಯಲ್ಲಿ ಎಚ್‌ಡಿ ಕುಮಾರಸ್ವಾಮಿ ಮತ್ತು ಅವರ ಕಾರು ಚಾಲಕನಿಗೆ ಕೊರೋನಾ ನೆಗೆಟಿವ್ ಬಂದಿದೆ. ಇದರಿಂದ ಎಚ್‌ಡಿಕೆ ಕೊಂಚ ನಿರಾಳರಾಗಿದ್ದಾರೆ.

ಆದ್ರೆ, ಆಪ್ತ ಸಹಾಯಕನಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಎಚ್‌ಡಿಕೆ ಕುಟುಂಬ ಮತ್ತು ಕೆಲ ನಾಯಕರಿಗೂ ಕೊರೋನಾ ಭೀತಿ ಶುರುವಾಗಿದೆ. ಇದರಿಂದ ಕುಮಾರಸ್ವಾಮಿ ಮನೆಯ ಎಲ್ಲ ಕೆಲಸದವರುಗೂ ಕೊರೋನ ಟೆಸ್ಟ್‌ಗೆ ಒಳಪಡಿಸಲಾಗಿದೆ.