ಕೇಂಬ್ರಿಡ್ಜ್(ಫೆ.23): 2013ರ ಕುಂಭಮೇಳದ ಸಿದ್ಧತೆ ಕುರಿತು ಬ್ರಿಟನ್ ನ ಹಾರ್ವರ್ಡ್ ವಿವಿ ಮೆಚ್ಚುಗೆಯ ಮಾತುಗಳನ್ನಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಕುಂಭ ಮೇಳ: ಅನೂಹ್ಯ, ಅಗಾಧ, ಅಪ್ರತಿಮ!

2013ರಲ್ಲಿ ಆಯೋಜಿಸಲಾಗಿದ್ದ ಕುಂಭಮೇಳಕ್ಕೆ ಉತ್ತರ ಪ್ರದೇಶದ ಅಂದಿನ ಸಿಎಂ ಅಖಿಲೇಶ್ ಯಾದವ್ ನೇತೃತ್ವದ ರಾಜ್ಯ ಸರ್ಕಾರ, ಅತ್ಯಂತ ಅಚ್ಚುಕಟ್ಟಾಗಿ ಪೂರ್ವ ಸಿದ್ಧತೆಗಳನ್ನು ಕೈಗೊಂಡಿತ್ತು ಎಂದು ಹಾರ್ವರ್ಡ್ ಹೇಳಿದೆ ಎನ್ನಲಾಗಿದೆ.

ಉತ್ತರ ಆಯ್ತು, ಈಗ ದಕ್ಷಿಣ ಕುಂಭಮೇಳ!

ಅಲ್ಲದೇ ಕುಂಭಮೇಳದ ಸಿದ್ಧತೆಗಳು 2014ರ ಫಿಪಾ ಫುಡ್ಬಾಲ್ ವಿಶ್ವಕಪ್‌ ಸಿದ್ಧತೆಗಳನ್ನು ನಾಚಿಸುವಂತಿತ್ತು ಎಂದೂ ಹಾರ್ವರ್ಡ್ ಮೆಚ್ಚುಗೆಯ ಮಾತುಗಳನ್ನಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಯೋಗಿ ಸಂಪುಟ ಕುಂಭಸ್ನಾನ: ತರೂರ್‌ ವ್ಯಂಗ್ಯ ಟ್ವೀಟ್‌ ವಿವಾದ

ಹಾರ್ವರ್ಡ್ ವಿದ್ಯಾರ್ಥಿಗಳ ತಂಡ ನಡೆಸಿದ ಸಂಶೋಧನೆಯ ಪ್ರಕಾರ ದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್ ಸಿದ್ಧತೆಗಿಂತಲೂ 2013ರ ಕುಂಭಮೇಳದ ಸಿದ್ಧತೆ ಅಚ್ಚುಕಟ್ಟಾಗಿತ್ತು ಎನ್ನಲಾಗಿದೆ.

ಕುಂಭಮೇಳದಿಂದ 1.2 ಲಕ್ಷ ಕೋಟಿ ಆದಾಯ!