ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಸಿಎಂ ಹಾಗೂ ಸಿದ್ದು ಟ್ವಿಟರ್ ವಾರ್; ಅ.18ರ ಟಾಪ್ 10 ಸುದ್ದಿ!
ಭಾರತ ಹೊರತು ಪಡಿಸಿ ಚೀನಾ ಸೇರಿದಂತೆ ಪ್ರಮುಖ ರಾಷ್ಟ್ರಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಸೂಚನೆ ನೀಡಿದ್ದಾರೆ. ಕೇರಳ ಭೀಕರ ಮಳೆಗೆ 20ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಧೋನಿ ಅಭಿಮಾನಿಗಳಿಗೆ ಸಿಎಸ್‌ಕೆ ಗುಡ್ ನ್ಯೂಸ್ ನೀಡಿದೆ. ಬಸವರಾಜ್ ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ನಡುವೆ ಟ್ವೀಟ್ ವಾರ್, ಟಾಟಾ ಪಂಚ್ ಕಾರು ಬಿಡುಗಡೆ ಸೇರಿದಂತೆ ಅಕ್ಟೋಬರ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಆರ್ಥಿಕ ಸಂಕಷ್ಟದಲ್ಲಿ ಚೀನಾ: ಭಾರತ ಬಿಟ್ಟು ಉಳಿದೆಲ್ಲಾ ರಾಷ್ಟ್ರಗಳಿಗೆ 'ಹಿಂಜರಿತ'ದ ಭೀತಿ!
ಕೊರೋನಾ ವೈರಸ್‌ನಿಂದ(Coronavirus) ಚೇತರಿಸಿಕೊಳ್ಳುತ್ತಿರುವ ಮಧ್ಯೆ ಚೀನಾಕ್ಕೆ ಆಘಾತಕಾರಿ ಸುದ್ದಿಯೊಂದು ಲಭಿಸಿದೆ. ಇತ್ತೀಚಿನ ವರದಿಯ ಪ್ರಕಾರ, ಹೊಸ ತ್ರೈಮಾಸಿಕದಲ್ಲಿ ಚೀನಾದ(China) ಆರ್ಥಿಕ(Economy) ಬೆಳವಣಿಗೆ ತೀವ್ರವಾಗಿ ಕುಸಿದಿದೆ.
ಪೆಟ್ರೋಲ್, ಡೀಸೆಲ್ ದರ ಇಳಿಕೆ : ಗುಡ್ ನ್ಯೂಸ್ ನೀಡಿದ ಸಿಎಂ
ದಿನದಿಂದ ದಿನಕ್ಕೆ ತುಟ್ಟಿಯಾಗುತ್ತಿರುವ ಇಂಧನ ಬೆಲೆಯ (Price) ಮೇಲೆ ರಾಜ್ಯ ಸರ್ಕಾರ ವಿಧಿಸಿರುವ ಭಾರಿ ತೆರಿಗೆ ಇಳಿಸುವ ಮೂಲಕ ಉಪಚುನಾವಣೆ (By Election) ಬಳಿಕ ಇಂಧನ ಬೆಲೆ (Fuel Price) ಇಳಿಕೆ ಸಾಧ್ಯತೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಸೂಚನೆ ನೀಡಿದ್ದಾರೆ.
ಕೇರಳ ಭೀಕರ ಮಳೆಗೆ ಇನ್ನೂ 20ಮಂದಿ ಬಲಿ!
ಅರಬ್ಬಿ ಸಮುದ್ರದಲ್ಲಿ'(Arabian Sea) ವಾಯುಭಾರ ಕುಸಿತದ ಪರಿಣಾಮ ಭಾರೀ ಮಳೆ(Rain) ಮತ್ತು ತತ್ಸಂಬಂಧಿ ಭೂಕುಸಿತ(Landslide), ಪ್ರವಾಹಕ್ಕೆ(Flood) ತುತ್ತಾಗಿದ್ದ ಕೇರಳದಲ್ಲಿ(Kerala) ಸಾವನ್ನಪ್ಪಿದವರ ಸಂಖ್ಯೆ 26ಕ್ಕೆ ಏರಿದೆ. ಇನ್ನೂ ಹಲವಾರು ಜನ ನಾಪತ್ತೆಯಾಗಿರುವ ಕಾರಣ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ.
Team India ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಆರೆಸ್ಟ್ ನಂತರ ಬಿಡುಗಡೆ..!
ಭಾರತ ಕ್ರಿಕೆಟ್ ತಂಡದ (Indian Cricket Team) ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಅವರನ್ನು ಪೊಲೀಸರು ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ. ಕಳೆದ ವರ್ಷ ಮಾಡಿದ ಒಂದು ತಪ್ಪಿಗೆ ಯುವಿ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗಿ ಬಂದಿದೆ.
IPL ಎಂ ಎಸ್ ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ CSK..!
ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) 2020ರ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ಕೋಟಿಗೊಬ್ಬ ಬಗ್ಗೆ ಸುದೀಪ್ ಪೋಸ್ಟ್: ಮನದಾಳದ ಮಾತು ಬಿಚ್ಚಿಟ್ಟ ಕಿಚ್ಚ
ಕೋಟಿಗೊಬ್ಬ 3' (Kottigobba 3) ಯಶಸ್ಸಿನ ಸಂಭ್ರಮದಲ್ಲಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಎಲ್ಲರ ಜೀವನದಲ್ಲಿ ಕಠಿಣ ಸಮಯ ಬರುವುದು ಸಹಜ, ಅದನ್ನು ಶಾಂತಿ ಮತ್ತು ನಗುವಿನಿಂದ ಎದುರಿಸಬೇಕು ಎಂದು ಹೇಳಿದ್ದಾರೆ.
ವಿಮಾನ ಇಂಧನಕ್ಕಿಂತ ಪೆಟ್ರೋಲ್ ಬೆಲೆ ದುಬಾರಿ!
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ದರವನ್ನು ಭಾನುವಾರ ತಲಾ 35 ಪೈಸೆಯಷ್ಟು ಏರಿಕೆ ಮಾಡಿವೆ. ತನ್ಮೂಲಕ ವಿಮಾನಗಳ(Flight) ಇಂಧನವಾದ ಏವಿಯೇಷನ್ ಟರ್ಬೈನ್ ಇಂಧನ (Aviation Turbine Fuel) ಕ್ಕಿಂತಲೂ ಕಾರು ಮತ್ತು ದ್ವಿಚಕ್ರ ವಾಹನ ಸವಾರರು ಪೆಟ್ರೋಲ್‌ಗೆ ಶೇ.33ರಷ್ಟು ಹೆಚ್ಚು ದರ ತೆರಬೇಕಾದ ಅನಿವಾರ್ಯತೆ ಎದುರಾಗಿದೆ.
ಕೇವಲ 5.49 ಲಕ್ಷ ರೂ, 5 ಸ್ಟಾರ್ ಸೇಫ್ಟಿ; ಅತ್ಯಾಕರ್ಷಕ SUV ಟಾಟಾ ಪಂಚ್ ಕಾರು ಬಿಡುಗಡೆ!
ಭಾರತದ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಮೈಕ್ರೋ SUV ಟಾಟಾ ಪಂಚ್ ಕಾರು ಬಿಡುಗಡೆಯಾಗಿದೆ. ಈಗಾಲೇ 5 ಸ್ಟಾರ್ ಸೇಫ್ಟಿ ರೇಟಿಂಗ್, ಅತ್ಯಾಧುನಿಕ ತಂತ್ರಜ್ಞಾನ, ಅತ್ಯಧಿಕ ಫೀಚರ್ಸ್ ಹೊಂದಿರುವ ಕಾರು ಮಾರುಕಟ್ಟೆ ಪ್ರವೇಶಿಸಿದೆ. ನೂತನ ಕಾರಿನ ಆರಂಭಿಕ ಬೆಲೆ ಕೇವಲ 5.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಸಿಎಂ-ಮಾಜಿ ಸಿಎಂ ಟ್ವೀಟ್ ವಾರ್: ಬೊಮ್ಮಾಯಿಗೆ ಸಿದ್ದು ಗುದ್ದು
ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಟ್ವೀಟ್ ವಾರ್ ಮುಂದುವರೆದಿದೆ.