ಪೆಟ್ರೋಲ್, ಡೀಸೆಲ್ ದರ ಇಳಿಕೆ : ಗುಡ್ ನ್ಯೂಸ್ ನೀಡಿದ ಸಿಎಂ
- ದಿನದಿಂದ ದಿನಕ್ಕೆ ತುಟ್ಟಿಯಾಗುತ್ತಿರುವ ಇಂಧನ ಬೆಲೆ
- ರಾಜ್ಯ ಸರ್ಕಾರ ವಿಧಿಸಿರುವ ಭಾರಿ ತೆರಿಗೆ ಇಳಿಸುವ ಮೂಲಕ ಉಪಚುನಾವಣೆ ಬಳಿಕ ಇಂಧನ ಬೆಲೆ ಇಳಿಕೆ ಸಾಧ್ಯತೆ
ಹುಬ್ಬಳ್ಳಿ (ಅ.18): ದಿನದಿಂದ ದಿನಕ್ಕೆ ತುಟ್ಟಿಯಾಗುತ್ತಿರುವ ಇಂಧನ ಬೆಲೆಯ (Price) ಮೇಲೆ ರಾಜ್ಯ ಸರ್ಕಾರ ವಿಧಿಸಿರುವ ಭಾರಿ ತೆರಿಗೆ ಇಳಿಸುವ ಮೂಲಕ ಉಪಚುನಾವಣೆ (By Election) ಬಳಿಕ ಇಂಧನ ಬೆಲೆ (Fuel Price) ಇಳಿಕೆ ಸಾಧ್ಯತೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಪೆಟ್ರೋಲ್‌ನ (Petrol) ಮೇಲಿನ ತೆರಿಗೆಯನ್ನು ಇಳಿಸುವ ಪ್ರಸ್ತಾಪ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾದರೆ ಪೆಟ್ರೋಲ್ ಮೇಲಿನ ತೆರಿಗೆ ಇಳಿಸುವ ಕುರಿತು ಯೋಚಿಸಬಹುದು. ಉಪಚುನಾವಣೆ ಬಳಿಕ ಈ ಕುರಿತು ಪರಿಶೀಲನೆ ಸಭೆ ನಡೆಸಿ ಅವಲೋಕಿಸುತ್ತೇವೆ ಎಂದು ತಿಳಿಸಿದರು.
ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ, 150 ರೂ ಆದರೂ ಅಚ್ಚರಿಯಿಲ್ಲ!
ಈ ಬಗ್ಗೆ ನಾನು ಈಗಾಗಲೇ ತಿಳಿಸಿದ್ದೇನೆ. ಎಲ್ಲವೂ ರಾಜ್ಯದ ಆರ್ಥಿಕ ಸ್ಥಿತಿ ಗತಿ ಮೇಲೆ ಅವಲಂಬಿತವಾಗಿದೆ. ಉಪಚುನಾವಣೆ ಬಳಿಕ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸುತ್ತೇವೆ. ಆಗ ಪರಿಸ್ಥಿತಿ ಉತ್ತಮವಾಗಿದ್ದರೆ ಇಂಧನದ ಮೇಲಿನ ತೆರಿಗೆ ಇಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹಣಕಾಸು ಖಾತೆಯನ್ನು ತಮ್ಮಲ್ಲೇ ಇರಿಸಿಕೊಂಡಿರುವ ಬೊಮ್ಮಾಯಿ ವಿವರಿಸಿದರು.
ತೈಲ ಬೆಲೆ ಬಿಸಿ
ಬೆಂಗಳೂರು(ಅ.10): ನಾಲ್ಕು ತಿಂಗಳ ಹಿಂದಷ್ಟೇ ರಾಜ್ಯದಲ್ಲಿ(karnataka) ಲೀಟರ್‌ಗೆ 100 ರು. ಗಡಿ ದಾಟಿದ್ದ ಪೆಟ್ರೋಲ್(Petrol) ಇದೀಗ 110 ರು. ಗಡಿ ದಾಟಿ ವಾಹನ ಸವಾರರ ಜೇಬಿಗೆ ಬಿಸಿ ಮುಟ್ಟಿಸಿದೆ. ರಾಜ್ಯದಲ್ಲಿ ಮೊದಲ ಬಾರಿ ಉತ್ತರ ಕನ್ನಡದ ಶಿರಸಿಯಲ್ಲಿ(Sirsi, Uttara Kannada) ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 110.33 ರು. ಆಗಿದೆ. ಇದೇ ವೇಳೆ, ರಾಜ್ಯದ ಇನ್ನೂ 4 ಕಡೆ ಡೀಸೆಲ್(Diesel) ಬೆಲೆ 100 ರು. ಗಡಿ ದಾಟಿದೆ.
ಸತತ 7ನೇ ದಿನವೂ ಸೋಮವಾರ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 30 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 35 ಪೈಸೆ ಏರಿಕೆಯಾಗಿದೆ. ಅದರ ಪರಿಣಾಮ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 31 ಪೈಸೆ ಮತ್ತು ಡೀಸ್‌ಲ್‌ಗೆ 37 ಪೈಸೆ ಏರಿಕೆಯಾಗಿದೆ. ಒಟ್ಟಾರೆ ಕಳೆದ 11 ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ .3.15 ಮತ್ತು ಡೀಸೆಲ್ ಬೆಲೆ ಲೀಟರ್‌ಗೆ .3.81ರವರೆಗೆ ಹೆಚ್ಚಳವಾಗಿದೆ.
ಇಂಧನ ಖರೀದಿಗೆ ಭಾರತದಿಂದ 500 ಮಿಲಿಯನ್ ಡಾಲರ್ ಸಾಲ ಕೇಳಿದ ಶ್ರೀಲಂಕಾ!
ಇದರ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ರಾಜ್ಯದಲ್ಲಿ ಮೊದಲ ಬಾರಿ ಶತಕ ಬಾರಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲೇ ಪೆಟ್ರೋಲ್ ಬೆಲೆ ಮೊದಲ ಬಾರಿ 110 ರು. ಗಡಿ ದಾಟಿದ್ದು, ಸೋಮವಾರ 110.33 ದಾಖಲಾಗಿದೆ. ಇದೇ ವೇಳೆ ಅಲ್ಲಿ ಡೀಸೆಲ್ ಬೆಲೆ .100.86ಕ್ಕೆ ಏರಿಕೆಯಾಗಿದೆ. ಹೀಗಾಗಿ ಒಟ್ಟಾರೆ ಕಳೆದ ಮೂರು ದಿನಗಳಲ್ಲಿ 9 ಕಡೆ ಡೀಸೆಲ್ ದರ 100 ರು. ದಾಟಿದಂತಾಗಿದೆ. ಇನ್ನುಳಿದಂತೆ ಕಾರವಾರದಲ್ಲಿ ಲೀಟರ್ ಪೆಟ್ರೋಲ್‌ಗೆ .109.92, ದಾವಣಗೆರೆ .109.89, ಬಳ್ಳಾರಿ .109.83, ಚಿಕ್ಕಮಗಳೂರಲ್ಲಿ .109.76 ಇದ್ದು, ಶೀಘ್ರದಲ್ಲೇ 110 ರು.ನ ಗಡಿ ದಾಟುವ ಸಂಭವವಿದೆ.