Asianet Suvarna News Asianet Suvarna News

ಕೇವಲ 5.49 ಲಕ್ಷ ರೂ, 5 ಸ್ಟಾರ್ ಸೇಫ್ಟಿ; ಅತ್ಯಾಕರ್ಷಕ SUV ಟಾಟಾ ಪಂಚ್ ಕಾರು ಬಿಡುಗಡೆ!

  • ಬಹುನಿರೀಕ್ಷಿತ ಟಾಟಾ ಮೈಕ್ರೋ SUV ಕಾರು ಬಿಡುಗಡೆ
  • ಆಕರ್ಷಕ ಲುಕ್, 5 ಸ್ಟಾರ್ ಸೇಫ್ಟಿ ಪಡೆದಿರುವ ನೂತನ ಕಾರು
  • 5.49 ಲಕ್ಷ ರೂಪಾಯಿ ಬೆಲೆಯಲ್ಲಿ ಟಾಟಾ ಪಂಚ್ ಕಾರು ಲಭ್ಯ
Tata Motors Launches Indias first sub compact SUV Tata Punch with affordable car ckm
Author
Bengaluru, First Published Oct 18, 2021, 3:20 PM IST

ಮುಂಬೈ(ಅ.18):  ಭಾರತದ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಮೈಕ್ರೋ SUV ಟಾಟಾ ಪಂಚ್ ಕಾರು ಬಿಡುಗಡೆಯಾಗಿದೆ. ಈಗಾಲೇ 5 ಸ್ಟಾರ್ ಸೇಫ್ಟಿ ರೇಟಿಂಗ್, ಅತ್ಯಾಧುನಿಕ ತಂತ್ರಜ್ಞಾನ, ಅತ್ಯಧಿಕ ಫೀಚರ್ಸ್ ಹೊಂದಿರುವ ಕಾರು ಮಾರುಕಟ್ಟೆ ಪ್ರವೇಶಿಸಿದೆ. ನೂತನ ಕಾರಿನ ಆರಂಭಿಕ ಬೆಲೆ ಕೇವಲ 5.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಟಾಟಾ ಪಂಚ್ ಕಾರು ಹೇಗಿದೆ? ಏಷ್ಯಾನೆಟ್ ಸುವರ್ಣನ್ಯೂಸ್ ಟೆಸ್ಟ್ ಡ್ರೈವ್ Review!

ಕೈಕೆಟುವ ಬೆಲೆಯಲ್ಲಿ ಲಭ್ಯವಿರುವ ಏಕೈಕ SUV ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ಪಂಚ್ ಪಾತ್ರವಾಗಿದೆ. ಸೆಗ್ಮೆಂಟ್‌ನಲ್ಲಿ ಟಾಟಾ ಪಂಚ್ ಕಾರು ಮಾರುತಿ ಇಗ್ನಿಸ್, ಮಾರುತಿ ಸ್ವಿಫ್ಟ್ ಸೇರಿದಂತೆ ಸಣ್ಣ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಆದರೆ ನೋಟದಲ್ಲಿ ಹಾಗೂ  ಸ್ಥಳಾವಕಾಶದಲ್ಲಿ ರೆನಾಲ್ಟ್ ಕಿಗರ್, ನಿಸಾನ್ ಮ್ಯಾಗ್ನೈಟ್ ಕಾರಿಗೆ ಪೈಪೋಟಿ ನೀಡಲಿದೆ. ಸಣ್ಣ ಕಾರು ವಿಭಾಗದಲ್ಲಿ ಅತೀ ಕಡಿಮೆ ಬೆಲೆಗೆ ಅತ್ಯುತ್ತಮ ಕಾರನ್ನು ಟಾಟಾ ನೀಡುತ್ತಿದೆ.

ಟಾಟಾ ಪಂಚ್ ಮ್ಯಾನ್ಯುಯೆಲ್ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 18.97 ಕಿ.ಮೀ ಮೈಲೇಜ್ ನೀಡಲಿದೆ. ಇನ್ನು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರು 18.82 ಕಿ.ಮೀ ಮೈಲೇಜ್ ನೀಡಲಿದೆ. ಪಂಚ್ ಕಾರು ಕೇವಲ ಪೆಟ್ರೋಲ್ ವೇರಿಯೆಂಟ್ ಮಾತ್ರ ಲಭ್ಯವಿದೆ.

ಟಾಟಾ ಪಂಚ್ ಕಾರಿಗೆ ಗರಿಷ್ಠ ಸುರಕ್ಷತೆ ಕಿರೀಟ, ಗ್ಲೋಬಲ್ NCAPನಿಂದ 5 ಸ್ಟಾರ್ ರೇಟಿಂಗ್!

ಸುರಕ್ಷತೆ:
ಟಾಟಾ ಪಂಚ್ ಕಾರು ಗರಿಷ್ಠ ಸೇಫ್ಟಿ ರೇಟಿಂಗ್ ಪಡೆದಿದೆ. ಒಟ್ಟಾರೆ 5 ಸ್ಟಾರ್ ರೇಟಿಂಗ್ ಪಡೆದಿರುವ ಪಂಚ್ ಕಾರು, ಮಕ್ಕಳ ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ. ಡ್ಯುಯೆಲ್ ಏರ್‌ಬ್ಯಾಗ್, ABS, EBD ಹಾಗೂ ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಬ್ರೇಕ್ ಸ್ವೇ ಕಂಟ್ರೋಲ್, ಡ್ರೈವರ್ ಹಾಗೂ ಕೋ ಡ್ರೈವರ್ ಸೀಟ್ ಬೆಲ್ಟ್ ಅಲರಾಂ, ರಿವರ್ಸ್ ಪಾರ್ಕಿಂಗ್ ಕ್ಯಾಮರಾ, ಟೈಯರ್ ಪಂಚರ್ ರಿಪೇರ್ ಕಿಟ್ ಸೇರಿದಂತೆ ಎಲ್ಲಾ ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ.

ಆಲ್ಫಾ ಆರ್ಕಿಟೆಕ್ಟ್:
ಟಾಟಾ ಪಂಚ್ ಆಲ್ಫಾ ಆರ್ಕಿಟೆಕ್ಟ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಮೊದಲ SUV ಕಾರಾಗಿದೆ. 1.2 ಲೀಟರ್ ರಿವಟ್ರೋನ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರ ಜೊತೆಗೆ ಡೆನಾಪ್ರೋ ಟೆಕ್ನಾಲಜಿ ಹೊಂದಿದೆ. ಹೀಗಾಗಿ 85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾರ್ಥ್ಯ ಹೊಂದಿದೆ.  5 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

ಟಾಟಾ ಕಂಪನಿಯ ಮುಂದಿನ ಸ್ಟಾರ್‌ ಟಾಟಾ ಪಂಚ್‌!

ಟಾಟಾ ಪಂಚ್ ಕಾರು ಮುಂಭಾಗದಿಂದ ನೋಡಿದರೆ ಟಾಟಾ ಹ್ಯಾರಿಯರ್ ಲುಕ್ ಹೋಲುತ್ತದೆ. ಅತ್ಯಾಕರ್ಷಕ ಕಾರು 16 ಇಂಜಿನ ಡೈಮಂಡ್ ಕಟ್ ಅಲೋಯ್ ವೀಲ್ ಹೊಂದಿದೆ. 190mm ಗ್ರೌಂಡ್ ಕ್ಲೀಯರೆನ್ಸ್ LED ಡೇ ಟೈಮ್ ರನ್ನಿಂಗ್ ಲೈಟ್, ಸಿಗ್ನೆಚರ್ LED ಟೈಲ್ ಲೈಟ್ಸ್, ಡ್ಯುಯಲ್ ಟೋನ್ ರೂಫ್ ಆಯ್ಕೆ , 3 ಪ್ರಯಾಣಿಕರು ಆರಾಮವಾಗಿ ಕುಳಿತಕೊಳ್ಳಬಹುದಾದ ರೇರ್ ಸೀಟ್, ಉತ್ತಮ ಲೈಗ್‌ರೂಂ ಸ್ಪೇಸ್ ಸೇರಿದಂತೆ ಹಲವು ವಿಶೇಷತೆಗಳು ಈ 

ನಗರ ಪ್ರಯಾಣ, ದೂರು ಪ್ರಯಾಣ ಹಾಗೂ ಆಫ್ ರೋಡ್ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿರುವ ಈ ಕಾರು ಅಟೋ ಹೆಡ್‌ಲ್ಯಾಂಪ್ಸ್, ರೈನ್ ಸೆನ್ಸಿಂಗ್ ವೈಪರ್, ಪುಶ್ ಬಟನ್ ಸ್ಟಾರ್ಟ್, 366 ಲೀಟರ್ ಬೂಟ್ ಸ್ಪೇಸ್, ಆಟೋಮ್ಯಾಟಿಕ್ ಟೆಂಪರೇಚರ್ ಕಂಟ್ರೋಲ್, ಆಟೋ ಫೋಲ್ಡ್ OVRM, ರೇರ್ ಆರ್ಮ್ ರೆಸ್ಟ್, ರೇರ್ ವೈಪರ್ ಹಾಗೂ ವಾಶ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, iRA ಕನೆಕ್ಟೆಡ್ ಫೀಚರ್ಸ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳು ಈ ಕಾರಿನಲ್ಲಿದೆ.
 

Follow Us:
Download App:
  • android
  • ios