ಇಬ್ಬರು ಹಿಂದು ಮಹಿಳೆಯರ ಅಪಹರಿಸಿ ಇಸ್ಲಾಂಗೆ ಮತಾಂತರ!...

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಖೈಬರ್‌ ಪಖ್ತುಂಖ್ವಾದಲ್ಲಿ ಹಿಂದೂ ದೇಗುಲವೊಂದರ ಧ್ವಂಸದ ಬೆನ್ನಲ್ಲೇ, ಇಬ್ಬರು ಹಿಂದು ಮಹಿಳೆಯರನ್ನು ಅಪಹರಣಗೈದಿರುವ ಮುಸ್ಲಿಂ ಮೂಲಭೂತವಾದಿಗಳು, ಅವರನ್ನು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಳಿಸಿದ್ದಾರೆ.

ಅಮೆರಿಕದ ನಿಯೋಜಿತ ಅಧ್ಯಕ್ಷ ಬೈಡನ್‌ಗೆ ಕಿಮ್‌ ಬೆದರಿಕೆ!...

ಅಮೆರಿಕಕ್ಕೆ ಹೊಸ ಅಧ್ಯಕ್ಷರು ಬರುವುದಕ್ಕೂ ಮೊದಲು ಆ ದೇಶಕ್ಕೆ ಎಚ್ಚರಿಕೆ ನೀಡಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌, ತಮ್ಮ ದೇಶದಲ್ಲಿ ಇನ್ನಷ್ಟುಅಣ್ವಸ್ತ್ರ ತಯಾರಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೆ, ದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಅತ್ಯಾಧುನಿಕ ಅಣ್ವಸ್ತ್ರಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದ್ದಾರೆ.

ಟೀಂ ಇಂಡಿಯಾ ಬಳಿ ಕ್ಷಮೆ ಕೇಳಿದ ಕ್ರಿಕೆಟ್ ಆಸ್ಟ್ರೇಲಿಯಾ; ಕಠಿಣ ಕ್ರಮದ ಭರವಸೆ!...

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಹೋರಾಟ ಅಂತಿಮ ಘಟ್ಟ ತಲುಪಿದೆ. ಇತ್ತ ಕ್ರಿಕೆಟ್ ಆಸ್ಟ್ರೇಲಿಯಾ ಭಾರತೀಯ ಆಟಗಾರರನ್ನು ಕ್ಷಮೆ ಕೇಳಿದೆ. ಜನಾಂಗೀಯ ನಿಂದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಈ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ, ಅಧೀಕೃತ ಪ್ರಕಟಣೆ ಹೊರಡಿಸಿದೆ. ಇದರ ವಿವರ ಇಲ್ಲಿದೆ.

ಇದೀಗ ನೆಮ್ಮದಿಯಾಗಿರೋ ಅನುಶ್ರೀಯನ್ನು ಈ ಪರಿ ಕಾಡ್ತಿರೋದ್ಯಾರು!...

ಆಂಕರ್ ಅನುಶ್ರೀ ಆರಂಭದಿಂದಲೂ ಒಂದಿಲ್ಲ ಒಂದು ನೋವು ತಿನ್ನುತ್ತಲೇ ಬೆಳೆದವರು. ಸದ್ಯ ಅವರನ್ನು ಕಾಡುತ್ತಿರುವವರ್ಯಾರು ಗೊತ್ತಾ!

ನಮಿತಾ ಜೊತೆ ಲೀವ್-ಇನ್ ರಿಲೆಷನ್‌ಶಿಪ್‌ನಲ್ಲಿದ್ದರಾ ಪ್ರಭಾಸ್‌? ಸತ್ಯ ಇಲ್ಲಿದೆ!...

ಟಾಲಿವುಡ್‌ನ ಸೂಪರ್‌ ಸ್ಟಾರ್‌ ಪ್ರಭಾಸ್‌ ದಕ್ಷಿಣ ಸಿನಿಮಾದ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌. ಇವರ ಲಿಂಕಪ್‌ಗಳ ಬಗ್ಗೆ ಆಗಾಗ ಸುದ್ದಿ ಹರಿದಾಡುತ್ತಿರುತ್ತದೆ. ಇನ್ನೂ ಕೋ ಸ್ಟಾರ್‌ ಅನುಷ್ಕಾ ಶೆಟ್ಟಿಯ ಜೊತೆ ಮದುವೆಯಾಗುತ್ತಿದ್ದಾರೆ ಪ್ರಭಾಸ್‌ ಎಂಬ ವರದಿ ಸಹ ಸಾಕಷ್ಟು ಸಾರಿ ಸದ್ದು ಮಾಡಿದೆ. ಈ ನಡುವೆ ನಟಿ ನಮಿತಾ ಜೊತೆ ಬಾಹುಬಲಿ ನಟ ಲೀವ್‌ ಇನ್‌ ರಿಲೆಷನ್‌ಶಿಪ್‌ನಲ್ಲಿದ್ದರು, ಎಂಬ ರೂಮರ್‌ ಸಖತ್‌ ವೈರಲ್‌ ಆಗಿತ್ತು

New Sensation: ವಾಟ್ಸಾಪ್ ಹಿಂದಿಕ್ಕುವ ‘ಸಿಗ್ನಲ್’...

ಫೇಸ್‌ಬುಕ್ ಒಡೆತನದ ಮೆಸೆಜಿಂಗ್ ಆಪ್ ವಾಟ್ಸಾಪ್‌ಗೆ ಈಗ ಹೊಸ ತಲೆನೋವು ಶುರುವಾಗಿದೆ. ತನ್ನ ಪ್ರತಿಸ್ಪರ್ಧಿ ಸಿಗ್ನಲ್ ಮ್ಯಾಜಿಕಲ್ ರೀತಿಯಲ್ಲಿ ಹೊಸ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಲವು ರಾಷ್ಟ್ರಗಳಲ್ಲಿ ವಾಟ್ಸಾಪ್ ಹಿಂದಿಕ್ಕಿ ಅಗ್ರಸ್ಥಾನಿಯಾಗುವತ್ತ ದಾಪುಗಾಲು ಹಾಕಿದೆ.

ಚಿನ್ನದ ದರ ಏಕಾಏಕಿ ಭಾರೀ ಕುಸಿತ, ಹಿರಿ ಹಿರಿ ಹಿಗ್ಗಿದ ಗ್ರಾಹಕರು!...

ಹೊಸ ವರ್ಷ ಆರಂಭವಾದಾಗಿನಿಂದ ಏರುತ್ತಿದ್ದ ಚಿನ್ನದ ಬೆಲೆ ಕೇವಲ ಒದು ಬಾರಿ ಇಳಿಕೆ ಕಂಡಿತ್ತು. ಇದು ಚಿನ್ನ ಖರೀದಿದಾರರನ್ನು ಕೊಂಚ ಚಿಂತೆಗೀಡು ಮಾಡಿತ್ತು. 

ರಾಧಿಕಾ ಬಗ್ಗೆ ಕೊನೆಗೂ ಮೌನ ಮುರಿದ ಕುಮಾರಸ್ವಾಮಿ...!...

ನಟಿ, ನಿರ್ಮಾಪಕಿ ರಾಧಿಕಾ ಅವರನ್ನ ಸಿಸಿಬಿ ವಿಚಾರಣೆ ಮಾಡಿದೆ. ಇನ್ನು ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು ಹೀಗೆ..

ರವಿರಾಜ್‌ಗೆ ಸಿಸಿಬಿ ಗ್ರಿಲ್; ಹೊರಬಿತ್ತಾ ರಾಧಿಕಾ ಬಗ್ಗೆ ಎಕ್ಸ್‌ಕ್ಲೂಸಿವ್ ವಿಚಾರ..?...

ಯುವರಾಜ್ ಜೊತೆ ಹಣಕಾಸು ವ್ಯವಹಾರ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿ ಸಹೋದಯ ರವಿರಾಜ್‌ರನ್ನು ಇಂದು ಸಿಸಿಬಿ ವಿಚಾರಣೆಗೆ ಒಳಪಡಿಸಿದೆ. ಯುವರಾಜ್ ಹಾಗೂ ರಾಧಿಕಾ ನಡುವೆ ರವಿರಾಜ್ ಸೇತುವೆಯಾಗಿದ್ದ. 

10 ಸಾವಿರ ಕನ್ನಡ ಕಾರ್ಯಕರ್ತರು ಜೈಲಿಗೆ ಹೋಗಲು ಸಿದ್ದ: ವಾಟಾಳ್...

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸಿ ಚಾಮರಾಜನಗರದಲ್ಲಿ ವಾಟಾಳ್ ನಾಗರಾಜ್ ಪ್ರತಿಭಟಿಸಿದ್ದಾರೆ. ನಗರದ ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.