ಮಂಡ್ಯ, (ಜ.10): ಸಿನಿಮಾ ವಿಚಾರವಾಗಿಯಲ್ಲದೇ, ಬೇರೆ ಯಾವ ಕಾರಣಕ್ಕೂ ಎಲ್ಲಿಯೂ ಕಾಣಿಸಿಕೊಳ್ಳದ ಸ್ಯಾಂಡಲ್‌ವುಡ್‌ ನಟಿ, ನಿರ್ಮಾಪಕಿ  ರಾಧಿಕಾ ಕುಮಾರಸ್ವಾಮಿ ಇದೀಗ ವಂಚಕ ಯುವರಾಜನ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೆ ಒಳಗಾಗಿದ್ದಾರೆ. 

"

ಈ ಹಿನ್ನೆಲೆಯಲ್ಲಿ ರಾಧಿಕಾ ಕುಮಾರಸ್ವಾಮಿ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇನ್ನು ಈ ಬಗ್ಗೆ ಮಾಜಿ ಎಚ್‌ಡಿ ಕುಮಾರಸ್ವಾಮಿ ಮೌನ ಮುರಿದಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಹೆಸರಲ್ಲಿ ಕೋಟಿಗಟ್ಟಲೆ ಆಸ್ತಿ, ಲೆಕ್ಕಕ್ಕೆ ಸಿಕ್ಕಿದ್ದಿಷ್ಟು!

ಹೌದು... ಇಂದು (ಭಾನುವಾರ) ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮಕ್ಕೆ ಕುಮಾರಸ್ವಾಮಿ ಭೇಟಿ ಕೊಟ್ಟರು. ಈ ವೇಳೆ  ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ವಿಚಾರವಾಗಿ ಮಾಧ್ಯಮದವರು ಎಚ್‌ಡಿಗೆ ಅಭಿಪ್ರಾಯ ಕೇಳಿದ್ದಾರೆ. 

ಇದಕ್ಕೆ ಕುಮಾರಸ್ವಾಮಿ,  ಯಾರಪ್ಪ ಅದು.. ಅವರು ಯಾರು ಅಂತ ಗೊತ್ತಿಲ್ಲ.. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ. ನನಗೆ ಸಂಬಂಧಪಡದ ವಿಚಾರ ಕೇಳಲೇಬೇಡಿ ಎನ್ನುತ್ತ ಅಲ್ಲಿಂದ ಕಾಲ್ಕಿತ್ತರು.