ಇಸ್ಲಾಮಾಬಾದ್‌(ಜ.10): ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಖೈಬರ್‌ ಪಖ್ತುಂಖ್ವಾದಲ್ಲಿ ಹಿಂದೂ ದೇಗುಲವೊಂದರ ಧ್ವಂಸದ ಬೆನ್ನಲ್ಲೇ, ಇಬ್ಬರು ಹಿಂದು ಮಹಿಳೆಯರನ್ನು ಅಪಹರಣಗೈದಿರುವ ಮುಸ್ಲಿಂ ಮೂಲಭೂತವಾದಿಗಳು, ಅವರನ್ನು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಳಿಸಿದ್ದಾರೆ.

ಬಲೂಚಿಸ್ತಾನ ಮೂಲದ ಶಿಕ್ಷಕಿ ಏಕ್ತಾ ಕುಮಾರಿ ಹಾಗೂ ಧಾನಿ ಕೊಹ್ಲಾಹಿ ಎಂಬುವರೇ ಬಲವಂತವಾಗಿ ಇಸ್ಲಾಂಗೆ ಮತಾಂತರಕ್ಕೆ ಒಳಗಾದವರು. ಅಲ್ಲದೆ ಹಿಂದು ಹುಡುಗಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುವ ಕೃತ್ಯದಲ್ಲಿ ತೊಡಗಿರುವ ಇಸ್ಲಾಂ ಧರ್ಮಗುರು ಮಿಯಾನ್‌ ಅಬ್ದುಲ್‌ ಖಾಲಿಖ್‌ ಪಾಕಿಸ್ತಾನ ಸೇನೆಗೆ ನಿಕಟವರ್ತಿಯಾಗಿದ್ದಾನೆ.

ಇದೇ ಕಾರಣಕ್ಕೆ ಈ ಸಂಬಂಧ ಕೇಸ್‌ ದಾಖಲಾದರೂ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.