Asianet Suvarna News Asianet Suvarna News

ಅಮೆರಿಕದ ನಿಯೋಜಿತ ಅಧ್ಯಕ್ಷ ಬೈಡನ್‌ಗೆ ಕಿಮ್‌ ಬೆದರಿಕೆ!

ಅಮೆರಿಕದ ನಿಯೋಜಿತ ಅಧ್ಯಕ್ಷರಿಗೆ ಕಿಮ್‌ ಬೆದರಿಕೆ| ಇನ್ನಷ್ಟು ಅಣ್ವಸ್ತ್ರ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚನೆ

Kim Jong Un sends chilling warning to Biden with plans to enhance nuclear capability pod
Author
Bangalore, First Published Jan 10, 2021, 9:28 AM IST

ಸಿಯೋಲ್(ಜ.10): ಅಮೆರಿಕಕ್ಕೆ ಹೊಸ ಅಧ್ಯಕ್ಷರು ಬರುವುದಕ್ಕೂ ಮೊದಲು ಆ ದೇಶಕ್ಕೆ ಎಚ್ಚರಿಕೆ ನೀಡಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌, ತಮ್ಮ ದೇಶದಲ್ಲಿ ಇನ್ನಷ್ಟುಅಣ್ವಸ್ತ್ರ ತಯಾರಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೆ, ದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಅತ್ಯಾಧುನಿಕ ಅಣ್ವಸ್ತ್ರಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದ್ದಾರೆ.

ಮೊದಲಿನಿಂದಲೂ ಅಮೆರಿಕ ತನ್ನ ನಂ.1 ಶತ್ರು ಎಂದು ಹೇಳುತ್ತಾ ಬಂದಿರುವ ಕಿಮ್‌, ಅಮೆರಿಕ ಯಾವಾಗಲೂ ಉತ್ತರ ಕೊರಿಯಾ ವಿರೋಧಿ ನೀತಿ ಅನುಸರಿಸುತ್ತದೆ ಎಂದು ಕಿಡಿಕಾರುತ್ತಿದ್ದರು. ಆದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉತ್ತರ ಕೊರಿಯಾ ಜೊತೆ ಮಾತುಕತೆ ನಡೆಸಿದ ಮೇಲೆ ಕಿಮ್‌ ತಣ್ಣಗಾಗಿದ್ದರು. ಆದರೆ, ಟ್ರಂಪ್‌ ಅವರ ನೀತಿಯನ್ನು ಟೀಕಿಸಿದ್ದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌, ಕಿಮ್‌ ಒಬ್ಬ ರೌಡಿಯಿದ್ದಂತೆ ಎಂದು ಹೇಳಿದ್ದರು. ಇದೀಗ ಬೈಡೆನ್‌ ಅಧ್ಯಕ್ಷರಾಗಿ ಜ.20ರಂದು ಅಧಿಕಾರ ಸ್ವೀಕರಿಸುತ್ತಿರುವುದರಿಂದ ಅಮೆರಿಕಕ್ಕೆ ಎಚ್ಚರಿಕೆ ನೀಡಲು ಕಿಮ್‌ ಮತ್ತೊಮ್ಮೆ ಅಣ್ವಸ್ತ್ರದ ಬೆದರಿಕೆಯೊಡ್ಡಿದ್ದಾರೆ.

ಇತ್ತೀಚೆಗೆ ಉತ್ತರ ಕೊರಿಯಾದ ಉನ್ನತ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಕಿಮ್‌ ಅಮೆರಿಕದ ವಿರುದ್ಧ ಕಿಡಿಕಾರಿದ್ದು, ಅಣ್ವಸ್ತ್ರಗಳ ತಯಾರಿಕೆ ಚುರುಕುಗೊಳಿಸುವಂತೆ ಸೂಚಿಸಿದ್ದಾರೆಂದು ದಕ್ಷಿಣ ಕೊರಿಯಾದ ಸರ್ಕಾರಿ ಮಾಧ್ಯಮ ಸಂಸ್ಥೆ ಶನಿವಾರ ವರದಿ ಮಾಡಿದೆ.

Follow Us:
Download App:
  • android
  • ios