ಆಂಕರ್ ಅನುಶ್ರೀ ಅಂದರೆ ಕನ್ನಡಿಗರಿಗೆ ಚಿರ ಪರಿಚಿತ ಹೆಸರು. ಮಂಗಳೂರಿನ ಬಡ ಕುಟುಂಬದಲ್ಲಿ ಹುಟ್ಟಿದ ಪ್ರತಿಭಾವಂತೆ ಕುಟುಂಬದ ಕಥೆಯೂ ನೋವಿನದ್ದೇ. ಚಿಕ್ಕ ವಯಸ್ಸಿನಿಂದಲೇ ತಂದೆಯಿಂದ ದೂರವಾಗಿ ತಾಯಿ ಮತ್ತು ತಮ್ಮನ ಜೊತೆಗೆ ಇರಬೇಕಾಯ್ತು. ಆದರೆ ಈ ಚುರುಕಿನ ಹುಡುಗಿ ತನ್ನ ಟ್ಯಾಲೆಂಟ್ ನಿಂದ, ಅರಳು ಹುರಿಯುವಂಥಾ ಮಾತಿನಿಂದ ಬಲು ಬೇಗನೆ ಜನಪ್ರಿಯತೆ ಪಡೆಯುತ್ತಿದ್ದರು. ಪದವಿ ಮುಗಿಯುತ್ತಿರುವಂತೇ ನಮ್ಮ ಟಿವಿಯಲ್ಲಿ ವೀಡಿಯೋ ಜಾಕಿಯಾಗಿ ಕಾಣಿಸಿಕೊಂಡರು. ಕರಾವಳಿಯ ಜನತೆ ಈ ಹುಡುಗಿಯ ಅದ್ಭುತ ಪ್ರತಿಭೆಯನ್ನು ಕಂಡು ತಲೆ ಬಾಗಿತು. ದುಡಿಯಬೇಕಾದ ಅನಿವಾರ್ಯತೆಯ ಜೊತೆಗೆ ಬದುಕಿನಲ್ಲಿ ಏನಾದರೂ ಸಾಧಿಸಬೇಕೆನ್ನುವ ಛಲ ಈಗ ಬಹುಬೇಗ ಬೆಂಗಳೂರಿನ ಬಸ್ ಹತ್ತೋ ಹಾಗೆ ಮಾಡಿತು. ಈಟಿವಿಯ ಡಿಮ್ಯಾಂಡಪ್ಪೋ ಡಿಮ್ಯಾಂಡು ಕಾರ್ಯಕ್ರಮ ಅನುಶ್ರೀ ಎಂಬ ನಟಿಯನ್ನು ಕರ್ನಾಟಕದ ಜನತೆಗೆ ಪರಿಚಯಿಸಿತು. ಆಮೇಲೆ ಈಕೆಯ ಆಂಕರಿಂಗ್ ಗ್ರಾಫ್ ಏರುತ್ತಲೇ ಹೋಯಿತು.

 ಇವತ್ತು ನೀವು ಕರ್ನಾಟಕದ ಯಾವ ಹಳ್ಳಿಗೇ ಹೋಗಿ ವಿಚಾರಿಸಿ, ಅವರಿಗೆ ಅನುಶ್ರೀ ಅಂದರೆ ಯಾರು ಅಂತ ಗೊತ್ತು, ಬಹುಶಃ ಸ್ಯಾಂಡಲ್ ವುಡ್ ನ ಟಾಪ್ ಹೀರೋಯಿನ್ ಬಗ್ಗೆ ಅವರಿಗೆ ಗೊತ್ತಿರಲಿಕ್ಕಿಲ್ಲ, ಆದರೆ ಅನುಶ್ರೀ ಮುಖ ನೋಡೋದೂ ಬೇಡ, ವಾಯ್ಸ್ ಕೇಳಿದ್ರೆ ಜನ ಗುರುತಿಸೋವಷ್ಟು ಈಕೆಯ ಜನಪ್ರಿಯತೆ ಬೆಳೆದಿದೆ.

ಮುದ್ದಾಡುವಾಗಲೇ ಸಿಕ್ಕಿಬಿದ್ದ ಆ್ಯಂಕರ್ ಅನುಶ್ರೀ..! ...

ಇತ್ತೀಚೆಗೆ ಮಾತ್ರ ಡ್ರಗ್ಸ್ ಕೇಸ್ ನಲ್ಲಿ ಈಕೆಯ ಹೆಸರು ಕೇಳಿಬಂದಿದ್ದು ಬಹುಶಃ ಈಕೆಯ ಕೆರಿಯರ್ ನಲ್ಲೊಂದು ಕಪ್ಪು ಚುಕ್ಕೆ. ಒಂದು ಹಂತದಲ್ಲಿ ತನ್ನ ಮೇಲಿನ ಈ ಆಪಾದನೆಗೆ ದಿಟ್ಟ ಉತ್ತರವನ್ನೇ ಈಕೆ ನೀಡಿದರೂ ಕೆಲವೊಂದು ಪ್ರತಿಕ್ರಿಯೆಗಳು ಈಕೆಯನ್ನು ಬಹಳ ಕಂಗೆಡಿಸಿದ್ದವು. ಆಗ ಲೈವ್ ನಲ್ಲೇ ಜನರೆದುರು ಬಂದ ಈಕೆ ತಾನು ನಿರಪರಾಧಿ, ತನ್ನ ಮೇಲಿನ ಆರೋಪಗಳೆಲ್ಲ ನಿರಾಧಾರ ಎಂಬುದನ್ನು ಸಾರಿ ಸಾರಿ ಹೇಳಿದರು. ಒಂದಿಷ್ಟು ಸಂಶಯಗಳ ನಡುವೆಯೇ ಅನುಶ್ರೀ ಈ ಕೇಸ್ ನಿಂದ ಹೊರಬಿದ್ದರು.


ಈಗ ಆಂಕರ್ ಅನುಶ್ರೀ ಲೈಫ್ ನಿಧಾನಕ್ಕೆ ಹಳಿಗೆ ಮರಳುತ್ತಿದೆ. ಈಕೆಯ ಮೇಲೆ ಮಾದಕ ದ್ರವ್ಯ ವ್ಯಸನದ ಕೇಸ್ ಇದ್ದಾಗ, ಮುಂದೆ ಈಕೆಯ ಭವಿಷ್ಯ ಏನಾಗುತ್ತೋ ಏನೋ ಅಂತ ಚಿಂತಿಸಿದವರು ಬಹಳ ಮಂದಿ. ಆದರೆ ಜೀ ಕನ್ನಡ ವಾಹಿನಿಯಲ್ಲಿ ಈಕೆಯೇ ಇವತ್ತಿಗೂ ಮುಖ್ಯ ನಿರೂಪಕಿ. ಮೊನ್ನೆ ತಾನೇ ಜೀ ಕನ್ನಡದ ಹೊಸ ವರ್ಷದ ಕಾರ್ಯಕ್ರಮ ಅದ್ಭುತವಾಗಿ ನಿರೂಪಣೆ ಮಾಡಿದ್ದಾರೆ.
ಇದೀಗ ಅನುಶ್ರೀ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಪ್ರೋಗ್ರಾಂ ಮೂಲಕ ಮತ್ತೆ ಸಖತ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. 

ಅನುಶ್ರೀ ವಿಚಾರದಲ್ಲಿ ಕೇಳಿ ಬಂದ ಶುಗರ್ ಡ್ಯಾಡಿ ಇವರೇ ನಾ? ...

ಈಗಲಾದರೂ ಈಕೆಯನ್ನು ಕಾಡುತ್ತಿರುವವರ ಬಗ್ಗೆ ಹೇಳಲೇಬೇಕು. ಸದ್ಯ ಫಿಟ್ ನೆಸ್ ಗೆ ಬಹಳ ಮಹತ್ವ ಕೊಡುತ್ತಿರುವ ಅನುಶ್ರೀಯನ್ನು ಕಾಡುತ್ತಿರುವುದು ಈಕೆಯ ತುಂಟಾತಿ ತುಂಟ ನಾಯಿಮರಿ. ಈಕೆ ಸೂರ್ಯ ನಮಸ್ಕಾರ ಮಾಡ್ತೀನಿ ಅಂದ ಮ್ಯಾಟ್ ಹಾಕಿದ್ರೆ ಅದರಲ್ಲೆಲ್ಲ ಓಡಾಡುತ್ತೆ. ಯೋಗ ಮಾಡುವಾಗ ಮೖಮೇಲೆಲ್ಲ ಓಡಾಡುತ್ತೆ. ಅದರ ಕತ್ತಿನ ಹಗ್ಗ ಅನುಶ್ರೀ ಕೖ ಕಾಲಿಗೆ ಸಿಕ್ಕಾಕಿಕೊಳ್ಳುತ್ತೆ. ತಮ್ಮ ಮುದ್ದಿನ ನಾಯಿಯ ಈ ತುಂಟಾಟವನ್ನು ಅನುಶ್ರೀ ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ಕಾಟದ ನಡುವೆಯೂ ತಾನೆಷ್ಟು ಸೂರ್ಯ ನಮಸ್ಕಾರ ಮಾಡಿದ್ದೀನಿ.. ನೋಡಿ ಮಾರಾಯ್ರೇ ಅಂದಿದ್ದಾರೆ.
‘ಮನೇಲಿ ಯೋಗ ಮಾಡೋಣ ಅಂದ್ರೆ .... ನಾನು ಪಡೋ ಅವಸ್ಥೆ ನೋಡಿ ಮಾರಾಯ್ರೆ.. ಆದ್ರೂ ನಾನು ಎಷ್ಟು ಸೂರ್ಯ ನಮಸ್ಕಾರ ಮಾಡಿದೀನಿ ಹೇಳಿ ನೋಡಣ ?’ ಅನ್ನೋ ಪಝಲ್ ಅನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ. ಇದಕ್ಕೆ ಒಬ್ಬೊಬ್ರು ಒಂದೊಂಥರ ಉತ್ರ ಕೊಟ್ಟಿದ್ದಾರೆ. ಎಲ್ಲರಿಗೂ ಅನುಶ್ರೀ ಜೊತೆಗೆ ಆಕೆಯನ್ನು ಕಾಡಿಸುವ ಪೀಡಿಸುವ ಮುದ್ದಾದ ನಾಯಿಮರಿ ಶಾನೆ ಇಷ್ಟ ಆಗಿದೆ. 

ಪ್ರಭಾವಿಗಳ ಒತ್ತಡದ ಬೆನ್ನಲ್ಲೇ ಅನುಶ್ರೀ ವಿಚಾರಣೆ ಕ್ಲೋಸ್? ...