ಕಲಬುರಗಿ[ಏ.12]: ಕಲಬುರಗಿಯಲ್ಲೊಂದು ವಿಚಿತ್ರ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಕುರಿಗಳಿಗೆ ಮರದ ತಪ್ಪಲು ಕೊಯ್ಯಲು ಬಳಸುವ ಕುಡಗೋಲು ತಗುಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಈ ಘಟನೆ ಎಲ್ಲರನ್ನೂ ನಿಬ್ಬೆರಗಾಗಿಸಿದೆ.

ಕುರಿಗಾಹಿಯೊಬ್ಬ ತನ್ನ ಉದ್ದನೆಯ ಹಿಡಿಕೆಯುಳ್ಳ ಕುಡುಗೋಲು ಸೈಕಲ್ ಗೆ ಕಟ್ಟಿಕೊಂಡು ಹೊರಟಿದ್ದ. ಇತ್ತ ವಿದ್ಯಾರ್ಥಿನಿ ಆತನ ಸೈಕಲ್ ಹಿಂದೆ ಬೈಕ್ ನಲ್ಲಿ ಬರುತ್ತಿದ್ದಳು. ತನ್ನ ದಾರಿಯಲ್ಲಿ ಸಾಗುತ್ತಿದ್ದ ಕುರಿಗಾಯಿ ತಿರುವೊಂದರಲ್ಲಿ ಸೈಕಲ್ ನ್ನು ಎಡಕ್ಕೆ ತಿರುಗಿಸಿದಾಗ ಹಿಂಬದಿಯಲ್ಲಿ ಸಿಕ್ಕಿಸಿದ್ದ  ಕುಡುಗೋಲು ಬಲಕ್ಕೆ ಹೊರಳಿದೆ. ಇದು ಹಿಂಬದಿಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ವಿದ್ಯಾರ್ಥಿನಿಯ ಕತ್ತನ್ನೇ ನೇರವಾಗಿ ಕೊಯ್ದಿದೆ. ಈ ಅಪಘಾತದಲ್ಲಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಮೃತ ವಿದ್ಯಾರ್ಥಿನಿಯನ್ನು ಮೇಘನಾ (20) ಎಂದು ಗುರುತಿಸಲಾಗಿದೆ. ಮೇಘನಾ ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ. ಸದ್ಯ ಈ ಅಪಘಾತದಿಂದ ಸಾರ್ವಜನಿಕರು ನಿಬ್ಬೆರಗಾಗಿದ್ದಾರೆ. ಕಲಬುರಗಿಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.