ಕಳೆದ ಹಲವು ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುತ್ತಿದೆ. ದೇಶದ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ದರ ಕುಸಿತವಾಗಿದ್ದು, ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಎಲ್ಲಾ ನಗರಗಳಿಗಿಂತ ಕಡಿಮೆ ದರದಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟವಾಗುತ್ತಿದೆ.
ನವದೆಹಲಿ : ನಿರಂತರವಾಗಿ ಕಳೆದ ಕೆಲ ದಿನಗಳಿಂದ ಇಳಿಯುತ್ತಿರುವ ಪೆಟ್ರೋಲ್ , ಡೀಸೆಲ್ ದರವು ದೇಶದ ಹಲವು ನಗರಗಳಲ್ಲಿ ಸೋಮವಾರ ಮತ್ತೊಮ್ಮೆ ಕಡಿಮೆಯಾಗಿದೆ.
ವಾಹನ ಸವಾರರಿಗೆ ಇದೊಂದು ಗುಡ್ ನ್ಯೂಸ್ ಆಗಿದ್ದು ಪ್ರತೀ ಲೀಟರ್ ಪೆಟ್ರೋಲ್ ದರ 80ರು.ಗಿಂತಲೂ ಕಡಿಮೆಯಾಗಿದೆ.
ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 77.56 ರು.ಗಳಾಗಿದ್ದು, ಡೀಸೆಲ್ ದರ 72.31ರುಗಳಷ್ಟಾಗಿದೆ.
ಎಲ್ಲಾ ಮೆಟ್ರೋನಗರಗಳಿಗಿಂತ ದಿಲ್ಲಿಯಲ್ಲಿ ಪೆಟ್ರೋಲ್, ಡೀಸೆಲ್ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ.
ಇನ್ನು ಮುಂಬೈನಲ್ಲಿಯೂ ಕೂಡ ಪೆಟ್ರೋಲ್, ಡೀಸೆಲ್ ದರ ಕುಸಿತವಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ 83 ರು.7, ಡೀಸೆಲ್ 75.76 ರು.ಗಳಷ್ಟಾಗಿದೆ.
ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಕಂಡು ಬಂದ ಹಿನ್ನೆಲೆಯಲ್ಲಿ ದೇಶದಲ್ಲಿ ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆಯಾಗುತ್ತಿದೆ.
