ಮತ್ತೆ ಇಳಿಕೆಯತ್ತ ಮುಖ ಮಾಡಿದ ತೈಲದರ! ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಇಳಿಕೆ! ಭಾರತೀಯ ತೈಲ ಮಾರುಕಟ್ಟೆ ಮೇಲೆ ಧನಾತ್ಮಕ ಪರಿಣಾಮ! ದೇಶದ ಮಹಾನಗರಗಳಲ್ಲಿ ಇಳಿಕೆಯತ್ತ ಮುಖ ಮಾಡಿದ ತೈಲದರ

ನವದೆಹಲಿ(ನ.11): ನಿರಂತರ ತೈಲ ಇಳಿಕೆಯಿಂದಾಗಿ ಜನರಲ್ಲಿ ಸಂತಸ ಮೂಡಿದ್ದು, ಇಂದೂ ಕೂಡ ದೇಶಾದ್ಯಂತ ತೈಲದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಅಂತರಷ್ಟ್ರೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಕುಸಿಯುತ್ತಿರುವ ಕಚ್ಚಾ ತೈಲದರದಿಂದಾಗಿ ಬೆಲೆ ಇಳಿಕೆ ಮಾಡಲಾಗುತ್ತಿದೆ ಎಂದು ಭಾರತೀಯ ತೈಲ ಕಂಪನಿಗಳು ಮಾಹಿತಿ ನೀಡಿವೆ.

ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನೋಡುವುದಾದರೆ-

ರಾಷ್ಟ್ರ ರಾಜಧಾನಿ ನವದೆಹಲಿ-

ಪೆಟ್ರೋಲ್ ದರ: 77.73 ರೂ.(16 ಪೈಸೆ ಇಳಿಕೆ)

ಡೀಸೆಲ್ ದರ: 72.46 ರೂ.(12 ಪೈಸೆ ಇಳಿಕೆ)

ವಾಣಿಜ್ಯ ರಾಜಧಾನಿ ಮುಂಬೈ-

ಪೆಟ್ರೋಲ್ ದರ: 83.24 ರೂ.(16 ಪೈಸೆ ಇಳಿಕೆ)

ಡೀಸೆಲ್ ದರ: 75.92 ರೂ.(13 ಪೈಸೆ ಇಳಿಕೆ)

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-

ಪೆಟ್ರೋಲ್ ದರ: 79.65 ರೂ.(16 ಪೈಸೆ ಇಳಿಕೆ)

ಡೀಸೆಲ್ ದರ: 74.32 ರೂ.(12 ಪೈಸೆ ಇಳಿಕೆ)

ತಮಿಳುನಾಡು ರಾಜಧಾನಿ ಚೆನ್ನೈ-

ಪೆಟ್ರೋಲ್ ದರ: 80.23 ರೂ.(17 ಪೈಸೆ ಇಳಿಕೆ)

ಡೀಸೆಲ್ ದರ: 76.59 ರೂ.(13 ಪೈಸೆ ಇಳಿಕೆ)

ರಾಜ್ಯ ರಾಜಧಾನಿ ಬೆಂಗಳೂರು-

ಪೆಟ್ರೋಲ್ ದರ: 78.35 ರೂ.(16 ಪೈಸೆ ಇಳಿಕೆ)

ಡೀಸೆಲ್ ದರ: 72.85 ರೂ.(12 ಪೈಸೆ ಇಳಿಕೆ)

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ ಇಂದಿನ ಬೆಲೆ 4,362 ರೂ. (69 ರೂ ಇಳಿಕೆ)