ದೇಶದ ಮಹಾನಗರಗಳಲ್ಲಿ ಮತ್ತೆ ಇಳಿಕೆಯತ್ತ ಮುಖ ಮಾಡಿದ ತೈಲದರ! ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ! ಪೆಟ್ರೋಲ್ ದರದಲ್ಲಿ 18 ಪೈಸೆ ಮತ್ತು ಡೀಸೆಲ್ ದರದಲ್ಲಿ 18 ಪೈಸೆ ಇಳಿಕೆ!ದೀಪಾವಳಿ ಸಮಯದಲ್ಲಿ ಜನತೆಯಲ್ಲಿ ಸಂತಸ ತಂದ ತೈಲದರ ಇಳಿಕೆ

ನವದೆಹಲಿ(ನ.10): ನಿರಂತರ ತೈಲದರ ಇಳಿಕೆ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದ್ದು, ಇಂದೂ ಕೂಡ ದೇಶದ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ ೧೮ ಪೈಸೆ ಇಳಿದಿರುವುದು ವಿಶೇಷ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೈಸೆಗಳ ಲೆಕ್ಕಾಚಾರದಲ್ಲಿ ತೈಲದರ ಇಳಿದಿದ್ದರೂ, ಹಬ್ಬದ ಸಂಭ್ರಮದಲ್ಲಿರುವ ಜನತೆಯಲ್ಲಿ ಹೊಸ ಭರವಸೆ ಮೂಡಿಸಿರುವುದು ಸುಳ್ಳಲ್ಲ. ಅದರಂತೆ ದೇಶದ ಮಹಾನಗರಗಳಲ್ಲಿನ ತೈಲದರದತ್ತ ದೃಷ್ಟಿ ಹರಿಸುವುದಾದರೆ-

ರಾಷ್ಟ್ರ ರಾಜಧಾನಿ ನವದೆಹಲಿ-

ಪೆಟ್ರೋಲ್ ದರ: 77.89 ರೂ.

ಡೀಸೆಲ್ ದರ: 72.58 ರೂ.

ವಾಣಿಜ್ಯ ರಾಜಧಾನಿ ಮುಂಬೈ-

ಪೆಟ್ರೋಲ್ ದರ: 83.40 ರೂ.

ಡೀಸೆಲ್ ದರ: 76.05 ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-

ಪೆಟ್ರೋಲ್ ದರ: 79.81 ರೂ.

ಡೀಸೆಲ್ ದರ: 74.44 ರೂ.

ತಮಿಳುನಾಡು ರಾಜಧಾನಿ ಚೆನ್ನೈ-

ಪೆಟ್ರೋಲ್ ದರ: 80.90 ರೂ.

ಡೀಸೆಲ್ ದರ: 76.72 ರೂ.

ರಾಜ್ಯ ರಾಜಧಾನಿ ಬೆಂಗಳೂರು-

ಪೆಟ್ರೋಲ್ ದರ: 78.51 ರೂ.

ಡೀಸೆಲ್ ದರ: 72.97 ರೂ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ ಇಂದಿನ ಬೆಲೆ 70.18 ಯುಎಸ್ ಡಾಲರ್.