ನವದೆಹಲಿ(ಏ.11): 2017ರಲ್ಲಿ ಪಾಕಿಸ್ತಾನ ವಾಯುಸೇನೆ ಪೈಲೆಟ್‌ಗಳಿಗೆ ರಫೆಲ್ ಯುದ್ಧ ವಿಮಾನ ಹಾರಾಟ ತರಬೇತಿ ನೀಡಲಾಗಿದೆ ಎಂಬ ಸುದ್ದಿಯನ್ನು ಫ್ರಾನ್ಸ್ ಸರ್ಕಾರ ಸ್ಪಷ್ಟವಾಗಿ ತಳ್ಳಿ ಹಾಕಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ಫ್ರಾನ್ಸ್ ರಾಯಭಾರಿ ಅಲೆಕ್ಸಾಂಡರ್ ಕ್ಲೈಲರ್, ಪಾಕ್ ಪೈಲೆಟ್‌ಗಳಿಗೆ ರಫೆಲ್ ತರಬೇತಿ ನೀಡಲಾಗಿದೆ ಎಂಬುದು ಶುದ್ಧ ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ಫೆಬ್ರವರಿ 6ರಂದು ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ಕತಾರ್‌ಗೆ ರಫೆಲ್ ಯುದ್ಧ ವಿಮಾನಗಳನ್ನು ಪೂರೈಸಿದ್ದು, 2017ರಲ್ಲಿ ಕತಾರ್‌ನ ವಾಯುಸೇನೆಯ ತಂಡಕ್ಕೆ ನೀಡಿದ ರಫೆಲ್ ಹಾರಾಟ ತರಬೇತಿಯಲ್ಲಿ ಪಾಕಿಸ್ತಾನ ಪೈಲಟ್‌ಗಳು ಗಳು ತರಬೇತಿ ಪಡೆದಿದ್ದಾರೆ ಎಂದು ಹೇಳಲಾಗಿತ್ತು. 

ಈ ಕುರಿತು ಸುದ್ದಿ ಪ್ರಕಟಿಸಿದ್ದ ‌ಆನ್‌ಲೈನ್ ಸುದ್ದಿ ಸಂಸ್ಧೆ ainonline.com, ಪಾಕ್ ಪೈಲೆಟ್‌ಗಳಿಗೆ ಫ್ರಾನ್ಸ್‌ನಲ್ಲಿ ರಫೆಲ್ ತರಬೇತಿ ನೀಡಲಾಗಿದೆ ಎಂದು ವಾದಿಸಿತ್ತು.